Darshan Thoogudeepa: ರೇಣುಕಾಸ್ವಾಮಿ ಕುಟುಂಬದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಭೇಟಿ ಆಗುವ...
ರೇಣುಕಾಸ್ವಾಮಿ ಘಟನೆ ಭಾರಿ ದೊಡ್ಡ ಸೌಂಡ್ ಮಾಡಿತ್ತು & ಈಗಲೂ ಮಾಡುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಹೆಸರು ರೇಣುಕಾಸ್ವಾಮಿ ಕೇಸ್‌ನಲ್ಲಿ ಕೇಳಿ ಬಂದ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮಂದಿ ನಡುಗಿ ಹೋಗಿದ್ದರು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಭೇಟಿ ಆಗುವ...
ದರ್ಶನ್ ತೂಗುದೀಪ್ ಕಲಿಯುಗದ ಕರ್ಣ & ದರ್ಶನ್ ತೂಗುದೀಪ್ ಮಾಡಿರುವ ಸಹಾಯವನ್ನ ಕೋಟಿ ಕೋಟಿ ರೂಪಾಯಿಗಳಲ್ಲಿ ಲೆಕ್ಕ ಹಾಕಲು ಆಗಲ್ಲ ಎಂಬುದು ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳ ಮಾತು. ಅದರಲ್ಲು ದರ್ಶನ್ ತೂಗುದೀಪ್ ತಮ್ಮ ಮನೆ ಎದುರು ಬಂದು ಹೆಲ್ಪ್ ಕೇಳುತ್ತಿದ್ದ ಯಾರನ್ನೂ ಬರಿಗೈನಲ್ಲಿ ಕಳುಹಿಸಿಲ್ಲ ಎಂಬುದಾಗಿ ಫ್ಯಾನ್ಸ್ ಹೇಳ್ತಾರೆ. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿ ಹೊರ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ರೇಣುಕಾಸ್ವಾಮಿ ಕುಟುಂಬ....

ರೇಣುಕಾಸ್ವಾಮಿ ಕುಟುಂಬದಿಂದ ಡಿ-ಬಾಸ್...
ಅಂದಹಾಗೆ ರೇಣುಕಾಸ್ವಾಮಿ ಕುಟುಂಬ ಪದೇ ಪದೇ ಸಹಾಯ ಬಯಸಿ ಹೇಳಿಕೆ ನೀಡುತ್ತಿದೆ. ಈಗಾಗಲೇ ರೇಣುಕಾಸ್ವಾಮಿ ಅಪ್ಪ ಕೂಡ ತಮ್ಮ ಸೊಸೆಗೆ ಅಂದ್ರೆ ಕೊಲೆಯಾದ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿಸಿ ಅಂತಿದ್ದಾರೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಕುಟುಂಬದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಭೇಟಿ ಆಗುವ ಸಾಧ್ಯತೆ ದಟ್ಟವಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಹಾಗಾದ್ರೆ ರೇಣುಕಾಸ್ವಾಮಿ ಕುಟುಂಬ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಭೇಟಿ ಮಾಡಿದ್ರೆ ಎಲ್ಲಿ ಭೇಟಿ ಆಗುತ್ತಾರೆ? ಈಗ ಹಬ್ಬಿರುವ ಸುದ್ದಿಯಂತೆ ರೇಣುಕಾಸ್ವಾಮಿ ಕುಟುಂಬದ ಪರ ಕೊಲೆಯಾಗಿರುವ ರೇಣುಕಾಸ್ವಾಮಿ ಅಪ್ಪ & ಅಮ್ಮ, ಹೆಂಡತಿ ಬರ್ತಾರಾ?
ಅಶ್ಲೀಲ ಫೋಟೋಗಳನ್ನ ಕಳುಹಿಸಿದ್ದ ಆರೋಪ
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸುತ್ತಾ, ತನ್ನ ಅಶ್ಲೀಲ ಫೋಟೋಗಳನ್ನ ಕಳುಹಿಸಿದ್ದ ಆರೋಪ ಕೂಡ ಇದೇ ರೇಣುಕಾಸ್ವಾಮಿ ವಿರುದ್ಧ ಕೇಳಿ ಬಂದಿತ್ತು. ಹೀಗೆ ರೇಣುಕಾಸ್ವಾಮಿ ಕಾಮುಕ ಅಂತಾ ನಿರ್ಧಾರ ಮಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ & ತಂಡ, ಚಿತ್ರದುರ್ಗದಿಂದ ಆತನನ್ನ ಕರೆಸಿ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿ & ಅಪ್ಪ, ಅಮ್ಮ ಡಿ-ಬಾಸ್ ದರ್ಶನ್ ಅವರನ್ನು ಭೇಟಿ ಮಾಡ್ತಾರೆ ಅನ್ನೋ ಸುದ್ದಿ ಹಬ್ಬಿದೆ.
ಆದರೆ ಈ ಸುದ್ದಿಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ, ಸೋಷಿಯಲ್ ಮೀಡಿಯಾ ಮೂಲಕ ಕೆಲವರು ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಅಂತಾ ಆರೋಪ ಮಾಡಲಾಗುತ್ತಿದೆ. ಹಾಗೇ, ಮತ್ತೊಂದು ಕಡೆ ಈ ವಿಚಾರವಾಗಿ ದೊಡ್ಡ ಕಿರಿಕ್ ಕೂಡ ಶುರುವಾಗಿದೆ. ಫೈಟಿಂಗ್ ಜೋರು ಜೋರಾಗಿದ್ದು, ಅಭಿಮಾನಿಗಳ ನಡುವೆ ಮಾತಿನ ವಾರ್ ನಡೆಯುತ್ತಿದೆ.












Click it and Unblock the Notifications