Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇನ್ಮುಂದೆ ‘ದೊಡ್ಡಪ್ಪ’...
ಡಿ-ಬಾಸ್... ಬಾಕ್ಸ್ ಆಫಿಸ್ ಸುಲ್ತಾನ... ದಾಸ... ಗಜ... ಹೀಗೆ ದರ್ಶನ್ ತೂಗುದೀಪ್ ಅವರಿಗೆ ಹಲವು ಬಿರುದು ಇದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಹವಾ ಎಬ್ಬಿಸಿ, ಹೊಸ ಹೊಸ ಬಿರುದು ಪಡೆಯುತ್ತಾರೆ. ಈ ಮಾತಿಗೆ ಕಳೆದ ವರ್ಷದ ಅಂತ್ಯದಲ್ಲಿ ರಿಲೀಸ್ ಆಗಿದ್ದ 'ಕಾಟೇರ' ಸಿನಿಮಾ ಬಹು ದೊಡ್ಡ ಉದಾಹರಣೆ ಎನ್ನಬಹುದು. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ಖುಷಿಯಲ್ಲಿ ಕುಣಿದಾಡಿದ್ದು, ಡಿ-ಬಾಸ್ ದರ್ಶನ್ ಅವರು ಇನ್ಮುಂದೆ 'ದೊಡ್ಡಪ್ಪ'...
ದರ್ಶನ್ ತೂಗುದೀಪ್ ಅವರು ಸಂಕಷ್ಟದಲ್ಲಿ ಇದ್ದಾಗ ಅವರ ನೆರವಿಗೆ ಬಂದ ಏಕೈಕ ವ್ಯಕ್ತಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಎನ್ನಬಹುದು. ಯಾಕಂದ್ರೆ ಡಿ-ಬಾಸ್ ಇವತ್ತಿಗೆ ಡಿ-ಬಾಸ್ ಆಗಿ ಉಳಿಯಲು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಹಾಯ ದೊಡ್ಡದಾಗಿದೆ. ಅಲ್ಲದೆ ಸ್ವತಃ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು, ಅಪ್ಫಾಜಿ ಎಂದು ಕರೆಯುತ್ತಿದ್ದರು. ಅಲ್ಲದೆ, ಸುಮಲತಾ ಅಂಬರೀಶ್ ಅವರನ್ನ ಮದರ್ ಇಂಡಿಯಾ ಅಂತಾ ಕರೆಯುತ್ತಾರೆ ದರ್ಶನ್ ತೂಗುದೀಪ್. ಇದೇ ಖುಷಿಯಲ್ಲಿ ಈಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇನ್ಮುಂದೆ 'ದೊಡ್ಡಪ್ಪ'...

ಡಿ-ಬಾಸ್ ಇನ್ನುಮುಂದೆ ದೊಡ್ಡಪ್ಪ!
ಹೌದು, ನಟ ಅಭಿಷೇಕ್ ಅಂಬರೀಶ್ & ಅವಿವಾ ದಂಪತಿ ಲವ್ ಮ್ಯಾರೇಜ್ ಆಗಿದ್ದರು. ಹಲವು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಅವಿವಾ ಬಿದ್ದಪ್ಪ & ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದ್ವೆ ಆಗಿದ್ದರು. ಹೀಗೆ ಈ ಜೋಡಿಗೆ ಇದೀಗ ಗಂಡು ಮಗು ಜನಿಸಿದ್ದು, ದೊಡ್ಡಪ್ಪ ಆಗಿರುವ ಖುಷಿಯಲ್ಲಿ ಇದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು.
ಅಂಬರೀಶ್ ಅವರ ಮನೆಗೆ ಗಂಡು ಮಗು
ಅಭಿಷೇಕ್ ಅಂಬರೀಶ್ & ಅವಿವಾ ದಂಪತಿಗೆ ಗಂಡು ಮಗು ಜನಿಸಿದ ಸುದ್ದಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ತಲುಪಿದೆ. ಈ ಸುದ್ದಿ ಕೇಳಿದ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸುಮಲತಾ ಅಂಬರೀಶ್ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಮಗ ಅಂತಾನೇ ಕರೆಯುತ್ತಾರೆ. ಹೀಗಾಗಿ ಅಭಿಷೇಕ್ ಅಂಬರೀಶ್ & ದರ್ಶನ್ ತೂಗುದೀಪ್ ಅವರು ಅಣ್ಣ-ತಮ್ಮನ ರೀತಿ ಇದ್ದು, ಇದೀಗ ಡಿ-ಬಾಸ್ ದರ್ಶನ್ ಅವರು ದೊಡ್ಡಪ್ಪನ ಪಟ್ಟ ಪಡೆದಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಡಿ-ಬಾಸ್ ದರ್ಶನ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಇದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ, ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಅಲ್ಲದೆ ತಮ್ಮ ಬೆನ್ನು ನೋವಿಗೆ ನಟ ದರ್ಶನ್ ತೂಗುದೀಪ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಅತ್ಯುತ್ತಮ ಚಿಕಿತ್ಸೆ ಮುಂದುವರಿದಿದೆ.












Click it and Unblock the Notifications