ದರ್ಶನ್ ನಾಯ್ಡು ರೇಣುಕಾಸ್ವಾಮಿ ಹೆಣ ಮುಚ್ಚಿಹಾಕಲು ಹುಡುಗರಿಗೆ ಕೊಟ್ಟಿದ್ದು 30 ಲಕ್ಷ ರೂಪಾಯಿ?

ದರ್ಶನ್ ನಾಯ್ಡು ಈಗ ಅರೆಸ್ಟ್ ಆಗಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ದರ್ಶನ್ ವಿರುದ್ಧ ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಇದೇ ಸಮದಯಕ್ಕೆ ನಟ ದರ್ಶನ್ ನಾಯ್ಡು ವಿರುದ್ಧ ಕೊಲೆಗಾರರ ಜೊತೆ ಮೃತ ರೇಣುಕಾಸ್ವಾಮಿಯ ಹೆಣ ದಫನ್ ಮಾಡಲು 30 ಲಕ್ಷ ರೂಪಾಯಿ ಲೆಕ್ಕದಲ್ಲಿ ಡೀಲ್ ಕುದುರಿಸಿದ ಆರೋಪ ಕೂಡ ಕೇಳಿಬಂದಿದೆ. ಹಾಗಿದ್ರೆ ಏನಿದು ಆರೋಪ? ನಟ ದರ್ಶನ್ ತೂಗುದೀಪ್ ಅಲಿಯಾಸ್ ದರ್ಶನ್ ನಾಯ್ಡು ವಿರುದ್ಧ ಕೇಳಿ ಬಂದಿರುವ ಮತ್ತೊಂದು ಗಂಭೀರ ಆರೋಪ ಏನು? ಮುಂದೆ ಓದಿ.

ನಟ ದರ್ಶನ್ ತೂಗುದೀಪ್ ಅಲಿಯಾಸ್ ದರ್ಶನ್ ನಾಯ್ಡು ತಮ್ಮ ಪ್ರೇಯಸಿಯ ವಿಚಾರಕ್ಕೆ ಬಂದ ರೇಣುಕಾಸ್ವಾಮಿಯ ಹತ್ಯೆ ಮಾಡಿಸಿದ್ದಾರೆ, ಅಲ್ಲದೆ ಸ್ವತಃ ತಾವೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮಯದಲ್ಲಿ ಮತ್ತೊಂದು ಗಂಭೀರವಾದ ಆರೋಪ ಕೂಡ ಕೇಳಿಬಂದಿದೆ. ಅದು ಏನೆಂದರೆ ಹಲ್ಲೆ ಮಾಡುವ ಸಮಯದಲ್ಲಿ ದಿಢೀರ್ ಅಂತ ರೇಣುಕಾಸ್ವಾಮಿ ಸತ್ತು ಹೋಗಿದ್ದು, ಆ ಸಮಯದಲ್ಲಿ ಹೆಣವನ್ನು ಎಲ್ಲಾದರೂ ದಫನ್ ಮಾಡಿ ಎಂದು ಸ್ವತಃ ದರ್ಶನ್ ನಾಯ್ಡು ಆದೇಶ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ದರ್ಶನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಬೆಂಕಿ ಹೊತ್ತಿಕೊಂಡಿದೆ.

Darshan Thoogudeepa Is Facing This After 8th Of June 2024

ಮಾಸ್ ಹೀರೋ ಕೊಲೆ ಆರೋಪಿ

ದರ್ಶನ್ ನಾನು ಮಾಸ್ ಹೀರೋ.. ನಾನು ಮಾಸ್ ಹೀರೋ.. ಅಂತಾ ಕೈಯಲ್ಲಿ ಬರೀ ಮಚ್ಚು & ಲಾಂಗ್ ಹಿಡಿದು ಪೋಸ್ ಕೊಟ್ಟು ಕೊಟ್ಟು ಈಗ ನಿಜವಾಗಿಯೂ ಕೊಲೆ ಆರೋಪಿ ಆಗಿದ್ದಾರೆ. ಪೊಲೀಸರು ಕೂಡ ಈಗ ಕೊಲೆ ಆರೋಪದಲ್ಲಿ ದರ್ಶನ್‌ಗೆ A2 ಅಂದರೆ, ಆರೋಪಿ ನಂಬರ್-2 ಪಟ್ಟ ಕೊಟ್ಟಿದ್ದಾರೆ. ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಆರೋಪದ ಕಾರಣಕ್ಕೆ ಇದೀಗ ರೇಣುಕಾಸ್ವಾಮಿ ಮೇಲೆ ದರ್ಶನ್ ನಾಯ್ಡು & ಗ್ಯಾಂಗ್ ಹಲ್ಲೆ ಮಾಡಿ ಸಾಯಿಸಿದೆ ಎಂಬ ಆರೋಪ ಕೇಳಿಬಂದಿದೆ ಹೀಗಿದ್ದಾಗ ರೇಣುಕಾಸ್ವಾಮಿ ಹೆಣವನ್ನ ಮುಚ್ಚಿಹಾಕಲು 30 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲಾಗಿತ್ತು ಎಂಬ ಸುದ್ದಿ ಮತ್ತಷ್ಟು ಆಘಾತ ಎದುರಾಗುವಂತೆ ಮಾಡಿದೆ.

ಉತ್ತರ ಕರ್ನಾಟಕದಲ್ಲಿ ಆಕ್ರೋಶ

ದರ್ಶನ್ ಮತ್ತು ಗ್ಯಾಂಗ್ ಸೇರಿ ಒಬ್ಬ ಯುವಕನ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಅದ್ರಲ್ಲೂ ನಟ ದರ್ಶನ್ ಕಾರಣಕ್ಕೆ ಈ ಕೊಲೆ ನಡೆದಿದೆ, ದರ್ಶನ್ ತಮ್ಮ ಗೆಳತಿ ಪವಿತ್ರಾ ಗೌಡ ವಿಚಾರಕ್ಕೆ ಬಂದ ರೇಣುಕಾಸ್ವಾಮಿ ಹತ್ಯೆ ಮಾಡಿಸಿದ್ದಾರೆ ಎಂಬ ಆರೋಪ ಇದು. ಹೀಗಿದ್ದಾಗಲೇ ಮತ್ತೊಂದು ಬೆಂಕಿ ಹೊತ್ತಿಕೊಂಡಿದೆ, ಅದು ಏನೆಂದರೆ ರೇಣುಕಾಸ್ವಾಮಿ ಹತ್ಯೆಗೆ ಉತ್ತರ ಕರ್ನಾಟಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಯಾಕಂದ್ರೆ ಮೃತ ರೇಣುಕಾಸ್ವಾಮಿ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಎಂಬ ಕಾರಣಕ್ಕೆ ಈ ರೀತಿ ಕೆಟ್ಟದಾಗಿ ನಡೆಸಿಕೊಂಡು, ವಿಕೃತವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಅದೇ ಬೆಂಗಳೂರು ಅಥವಾ ಸುತ್ತಮುತ್ತಲ ಪ್ರದೇಶದ ವ್ಯಕ್ತಿ ಆಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಆಗ ಭಯ ಇರುತ್ತಿತ್ತು, ಆದರೆ ಉತ್ತರ ಕರ್ನಾಟಕದ ಮೂಲದ ರೇಣುಕಾಸ್ವಾಮಿ ಅವರನ್ನ ವಿಕೃತವಾಗಿ ಹಿಂಸೆ ನೀಡಿ ಈ ರೀತಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ ದರ್ಶನ್ ವಿರೋಧಿಗಳು.

ದರ್ಶನ್ & ಗ್ಯಾಂಗ್‌ಗೆ ಅನ್ನ-ಸಾರು!

ಪ್ರತಿದಿನ ಎಣ್ಣೆ ಹೊಡೆದು, ಸಖತ್ ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ನಟ ದರ್ಶನ್ & ಗ್ಯಾಂಗ್ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ, ಚಾಪೆ ಕೊಟ್ಟು ಮಲಗಿಸಿದ್ದಾರೆ. ಈ ಮೂಲಕ ಕೊಲೆ ಆರೋಪದ ಹಿನ್ನೆಲೆ ಕಂಬಿ ಹಿಂದೆ ಬಿದ್ದಿರುವ, ಸೋ ಕಾಲ್ಡ್ ಡಿ-ಬಾಸ್ ಇದೀಗ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ದರ್ಶನ್ ಅವರ ಬೆನ್ನುಹತ್ತುವ ಅಪಾಯ ಕಾಡುತ್ತಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ತೂಗುದೀಪ ದರ್ಶನ್ ಅವರ ಅಭಿಮಾನಿಗಳು ಸೈಲೆಂಟ್ ಆಗುತ್ತಿದ್ದಾರೆ.

ಪತ್ರಕರ್ತರ ತೀವ್ರ ಆಕ್ರೋಶ!

ಪೊಲೀಸ್ ಅಧಿಕಾರಿಗಳ ವರ್ತನೆಯಿಂದ ಮಾಧ್ಯಮ ಸಿಬ್ಬಂದಿ ಆಕ್ರೋಗೊಂಡಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ದರ್ಶನ್ ಅಭಿಮಾನಿ ಮಾಧ್ಯಮಗಳ ಎದುರಿಗೆ ಬಂದು ಮಾಧ್ಯಮಗಳ ಕುರಿತು ತುಂಬ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ದಿಢೀರ್ ರೊಚ್ಚಿಗೆದ್ದಿದ್ದು ಆತನ ಮುಖಚರಿ ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಹೆದರಿದ ದರ್ಶನ್ ಅಭಿಮಾನಿ, ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇಷ್ಟಾದರೂ ಮಾಧ್ಯಮಗಳ ಸಿಬ್ಬಂದಿ ಆತನ ಹಿಂದೆ ಓಡಿದ್ದಾರೆ. ಆಗ ತಕ್ಷಣ ಪೊಲೀಸರು ಆತನನ್ನ ಪೊಲೀಸ್ ಠಾಣೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ಆತನಿಗೆ ಅವರದ್ದೇ ಭಾಷೆಯಲ್ಲಿ ಬುದ್ಧಿ ಹೇಳಿ, ರುಚಿ ತೋರಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+