ದರ್ಶನ್ ನಾಯ್ಡು VS ವೀರಶೈವ ಲಿಂಗಾಯತ? ಏನಿದು ದರ್ಶನ್ ವಿರುದ್ಧ ಹೋರಾಟ?
ದರ್ಶನ್ ನಾಯ್ಡು ವಿರುದ್ಧ ಈಗ ಬೃಹತ್ ಪ್ರತಿಭಟನೆಗಳು ಆರಂಭ ಆಗುತ್ತಿವೆ. ಅದರಲ್ಲಿಯೂ, ನಟ ದರ್ಶನ್ ನಾಯ್ಡು ವಿರುದ್ಧ ಕೇಳಿ ಬಂದಿರುವ ಕೊಲೆ ಆರೋಪ ಪ್ರಕರಣದ ಸಂತ್ರಸ್ತ ವ್ಯಕ್ತಿ ರೇಣುಕಾಸ್ವಾಮಿ ತವರೂರು ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯತ ಸಮುದಾಯ ರೊಚ್ಚಿಗೆದ್ದು ಹೋರಾಟವನ್ನ ಆರಂಭ ಮಾಡಿದೆ. ಅಲ್ಲದೆ ಈ ವಿಚಾರ ಈಗ ದರ್ಶನ್ ನಾಯ್ಡು VS ವೀರಶೈವ ಲಿಂಗಾಯತ? ಎಂಬ ತಿಕ್ಕಾಟಕ್ಕೆ ಕೂಡ ದಾರಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಾಕೆ ಗೊತ್ತಾ? ದರ್ಶನ್ ನಾಯ್ಡು ವಿರುದ್ಧ ಈ ಆರೋಪ ಯಾಕೆ? ಮುಂದೆ ಓದಿ.
ಅಂದಹಾಗೆ ಇದೀಗ ನಟ ದರ್ಶನ್ ವಿರುದ್ಧ ಕೇಳಿಬಂದಿರುವ ಕೊಲೆ ಕೇಸ್ ಆರೋಪದ ಸಂತ್ರಸ್ತ ಅಂದ್ರೆ ಮೃತಪಟ್ಟಿರುವ ರೇಣುಕಾಸ್ವಾಮಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಇದೀಗ ವೀರಶೈವ ಲಿಂಗಾಯತ ಸಮುದಾಯ ದರ್ಶನ್ ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಅದರಲ್ಲೂ ಚಿತ್ರದುರ್ಗ ನಗರದಲ್ಲಿ ಇಂದು ಬೃಹತ್ ಮಾನವ ಸರಪಳಿ ರಚಿಸಿದ್ದು ವೀರಶೈವ ಲಿಂಗಾಯತ ಸಮುದಾಯದ ಜನರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕಠಿಣವಾದ ಕ್ರಮಕ್ಕೆ ಆಗ್ರಹಿಸಿ, ದರ್ಶನ್ ತೂಗುದೀಪ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಹಾಗೇ, ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ನಾಯ್ಡುಗೆ & ಪವಿತ್ರಾ ಗೌಡ ವಿರುದ್ಧ ಕಠಿಣ ಶಿಕ್ಷೆ ಘೋಷಣೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ಉತ್ತರ ಕರ್ನಾಟಕದ ಜನ ಕೂಡ ನಟ ದರ್ಶನ್ ತೂಗುದೀಪ್ ಅಲಿಯಾಸ್ ದರ್ಶನ್ ನಾಯ್ಡು ವಿರುದ್ಧ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಲಾಗ್ತಿದೆ. ಹೀಗಾಗಿ ಎಲ್ಲಾ ಕಡೆಯಿಂದ ಕೂಡ ಈಗ ನಟ ದರ್ಶನ್‌ಗೆ ಸಂಕಷ್ಟಗಳು ಎದುರಾಗಿವೆ. ಮತ್ತೊಂದು ಕಡೆ ಈ ಪ್ರತಿಭಟನೆ ಕರ್ನಾಟಕದ ಮೂಲೆ ಮೂಲೆಗೂ ವ್ಯಾಪಿಸುವ ಸಾಧ್ಯತೆ ದಟ್ಟವಾಗಿದೆ.
30 ಲಕ್ಷ ರೂಪಾಯಿಗೆ ಡೀಲ್?
ನಟ ದರ್ಶನ್ ತೂಗುದೀಪ್ ಅಲಿಯಾಸ್ ದರ್ಶನ್ ನಾಯ್ಡು ತಮ್ಮ ಪ್ರೇಯಸಿಯ ವಿಚಾರಕ್ಕೆ ಬಂದ ರೇಣುಕಾಸ್ವಾಮಿಯ ಹತ್ಯೆ ಮಾಡಿಸಿದ್ದಾರೆ, ಅಲ್ಲದೆ ಸ್ವತಃ ತಾವೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮಯದಲ್ಲಿ ಮತ್ತೊಂದು ಗಂಭೀರವಾದ ಆರೋಪ ಕೂಡ ಕೇಳಿಬಂದಿದೆ. ಅದು ಏನೆಂದರೆ ಹಲ್ಲೆ ಮಾಡುವ ಸಮಯದಲ್ಲಿ ದಿಢೀರ್ ಅಂತ ರೇಣುಕಾಸ್ವಾಮಿ ಸತ್ತು ಹೋಗಿದ್ದು, ಆ ಸಮಯದಲ್ಲಿ ಹೆಣವನ್ನು ಎಲ್ಲಾದರೂ ದಫನ್ ಮಾಡಿ ಎಂದು ಸ್ವತಃ ದರ್ಶನ್ ನಾಯ್ಡು ಆದೇಶ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ದರ್ಶನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, 30 ಲಕ್ಷ ರೂಪಾಯಿಗೆ ಡೀಲ್‌ನ ಕೂಡ ಮಾಡಿದ್ದರು ಎಂದು ಆರೋಪಿಸಲಾಗಿದೆ.
3 ತಿಂಗಳ ಕಾಲ ಜೈಲು ಗ್ಯಾರಂಟಿ?
ನಟ ದರ್ಶನ್ ವಿರುದ್ಧ ಇದೀಗ ಕೇಳಿಬಂದಿರುವುದು ಕೊಲೆ ಆರೋಪ ಆಗಿದೆ. ಈ ಕಾರಣಕ್ಕೆ ದರ್ಶನ್ ಸುಲಭವಾಗಿ ಜಾಮೀನು ಪಡೆಯುವುದು ಅಸಾಧ್ಯ. ಮತ್ತೊಂದ್ಕಡೆ ಈಗ ಜಾಮೀನಿಗೆ ಪ್ರಯತ್ನ ಶುರು ಮಾಡಿದರೂ ಮುಂದಿನ 3 ತಿಂಗಳ ಕಾಲ ಜಾಮೀನು ಸಿಗುವುದೇ ಅನುಮಾನ ಅಂತಿದ್ದಾರೆ ಕಾನೂನು ತಜ್ಞರು. ಹೀಗಾಗಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಮತ್ತೊಂದು ಕಡೆ, ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವುದು ಕೂಡ ಬಹುತೇಕ ಪಕ್ಕಾ ಅಂತಿದ್ದಾರೆ ಅವರ ವಿರೋಧಿಗಳು ಈ ನಡುವೆ ಮೃತ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ, ಪತ್ನಿ ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗೇ ರೇಣುಕಾಸ್ವಾಮಿ ಅವರ ಪತ್ನಿ ಈಗ ಗರ್ಭಿಣಿ ಆಗಿದ್ದಾರೆ.
ದರ್ಶನ್ & ಗ್ಯಾಂಗ್‌ಗೆ ಅನ್ನ-ಸಾರು!
ಪ್ರತಿದಿನ ಎಣ್ಣೆ ಹೊಡೆದು, ಸಖತ್ ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ನಟ ದರ್ಶನ್ & ಗ್ಯಾಂಗ್ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ, ಚಾಪೆ ಕೊಟ್ಟು ಮಲಗಿಸಿದ್ದಾರೆ. ಈ ಮೂಲಕ ಕೊಲೆ ಆರೋಪದ ಹಿನ್ನೆಲೆ ಕಂಬಿ ಹಿಂದೆ ಬಿದ್ದಿರುವ, ಸೋ ಕಾಲ್ಡ್ ಡಿ-ಬಾಸ್ ಇದೀಗ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ದರ್ಶನ್ ಅವರ ಬೆನ್ನುಹತ್ತುವ ಅಪಾಯ ಕಾಡುತ್ತಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ತೂಗುದೀಪ ದರ್ಶನ್ ಅವರ ಅಭಿಮಾನಿಗಳು ಸೈಲೆಂಟ್ ಆಗುತ್ತಿದ್ದಾರೆ.
ಪತ್ರಕರ್ತರ ತೀವ್ರ ಆಕ್ರೋಶ!
ಪೊಲೀಸ್ ಅಧಿಕಾರಿಗಳ ವರ್ತನೆಯಿಂದ ಮಾಧ್ಯಮ ಸಿಬ್ಬಂದಿ ಆಕ್ರೋಗೊಂಡಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ದರ್ಶನ್ ಅಭಿಮಾನಿ ಮಾಧ್ಯಮಗಳ ಎದುರಿಗೆ ಬಂದು ಮಾಧ್ಯಮಗಳ ಕುರಿತು ತುಂಬ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ದಿಢೀರ್ ರೊಚ್ಚಿಗೆದ್ದಿದ್ದು ಆತನ ಮುಖಚರಿ ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಹೆದರಿದ ದರ್ಶನ್ ಅಭಿಮಾನಿ, ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇಷ್ಟಾದರೂ ಮಾಧ್ಯಮಗಳ ಸಿಬ್ಬಂದಿ ಆತನ ಹಿಂದೆ ಓಡಿದ್ದಾರೆ. ಆಗ ತಕ್ಷಣ ಪೊಲೀಸರು ಆತನನ್ನ ಪೊಲೀಸ್ ಠಾಣೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ಆತನಿಗೆ ಅವರದ್ದೇ ಭಾಷೆಯಲ್ಲಿ ಬುದ್ಧಿ ಹೇಳಿ, ರುಚಿ ತೋರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications