ದರ್ಶನ್ ಬಂಧನ: ಆಂಧ್ರ ಅಲ್ಲ ಗುರೂ ಇದು ಕರ್ನಾಟಕ ಅಂತಿದ್ದಾರೆ ಕನ್ನಡ ಸಿನಿಮಾ ಫ್ಯಾನ್ಸ್!

ದರ್ಶನ್ ನಾನು ಮಾಸ್ ಹೀರೋ.. ನಾನು ಮಾಸ್ ಹೀರೋ.. ಅಂತಾ ಬರೀ ಕೈಯಲ್ಲಿ ಮಚ್ಚು & ಲಾಂಗ್ ಹಿಡಿದು ಪೋಸ್ ಕೊಟ್ಟು ಕೊಟ್ಟು ಈಗ ನಿಜವಾಗಿಯೂ ಕೊಲೆ ಆರೋಪಿ ಆಗಿದ್ದಾರೆ. ಪೊಲೀಸರು ಕೂಡ ಈಗ ಕೊಲೆ ಆರೋಪದಲ್ಲಿ ದರ್ಶನ್‌ಗೆ A2 ಅಂದ್ರೆ, ಆರೋಪಿ ನಂಬರ್-2 ಪಟ್ಟ ಕೊಟ್ಟಿದ್ದಾರೆ. ಹೀಗಿದ್ದಾಗಲೇ ಅಪ್ಪಟ ಕನ್ನಡ ಸಿನಿಮಾಗಳ ಅಭಿಮಾನಿಗಳು ದರ್ಶನ್ ಬಗ್ಗೆ ಏನು ಹೇಳುತ್ತಿದ್ದಾರೆ ಗೊತ್ತಾ? ಮುಂದೆ ಓದಿ.

ಕರ್ನಾಟಕ ತಾಳ್ಮೆಯ ನಾಡು, ನಮ್ಮ ರಾಜ್ಯದಲ್ಲಿ ಶಾಂತಿಗೆ ಹೆಚ್ಚು ಮಾನ್ಯತೆ. ಆಂಧ್ರ ಅಥವಾ ತೆಲಂಗಾಣ ರೀತಿ ಕನ್ನಡ ನಾಡಿನ ಕನ್ನಡಿಗರು ಹಿಂಸೆ ಇಷ್ಟಪಡುವ ಜನ ಅಲ್ಲ. ಹಾಗಂತಾ ಈ ನಮ್ಮ ಕನ್ನಡ ನಾಡಿನ ಜನ ಕೋಪ ಬಂದರೆ ಸುಮ್ಮನೆ ಕೂರುವುದೂ ಇಲ್ಲ. ಸರಿಯಾಗಿ ಇಕ್ಕಿ, ಸರಿಯಾಗಿ ಪಾಠ ಕಲಿಸುತ್ತಾರೆ. ಆದರೆ ಇಂತಹ ನೆಮ್ಮದಿಯ ನಾಡಿನಲ್ಲಿ ಈಗ ಸಂಚಲನ ಸೃಷ್ಟಿ ಆಗಿದೆ. ಅದರಲ್ಲೂ ನಟ ದರ್ಶನ್ ವಿರುದ್ಧ ವಿಕೃತವಾಗಿ ಕೊಲೆ ಮಾಡಿಸಿರುವ ಆರೋಪ ಕೇಳಿ ಬಂದ ನಂತರ ಕನ್ನಡ ಸಿನಿಮಾ ಅಭಿಮಾನಿಗಳು ರೊಚ್ಚಿಗೆದ್ದು ಏನು ಹೇಳುತ್ತಿದ್ದಾರೆ ಗೊತ್ತೆ? ಆ ಬಗ್ಗೆ ತಿಳಿಯಲು ಮುಂದೆ ಓದಿ.

Darshan Thoogudeepa Is Facing Anger From Kannada Cinema Fans

ಆಂಧ್ರ ಅಲ್ಲ ಗುರೂ ಇದು ಕರ್ನಾಟಕ!

ಹೌದು ಇದೀಗ ದರ್ಶನ್ ವಿರುದ್ಧ ಕೇಳಿಬಂದಿರುವ ವಿಕೃತ ಕೊಲೆ ಆರೋಪ ಕನ್ನಡ ನಾಡಿನಲ್ಲಿ ಜನರನ್ನ ರೊಚ್ಚಿಗೆಬ್ಬಿಸಿದೆ. ಅದರಲ್ಲೂ ರೇಣುಕಾಸ್ವಾಮಿಗೆ ವಿಪರೀತ ಟಾರ್ಚರ್ ಕೊಟ್ಟು ಹೀಗೆ ಕೊಲೆ ಮಾಡಲಾಗಿದೆ ಎಂಬ ಆರೋಪ ದರ್ಶನ್ & ಗ್ಯಾಂಗ್ ಅಂದ್ರೆ ಡಿ-ಗ್ಯಾಂಗ್ ಹಣೆಗೆ ಸುತ್ತಿದೆ. ದರ್ಶನ್ ಘಟನೆ ಕನ್ನಡ ನಾಡಿನಲ್ಲಿ ಕೊತ ಕೊತ ಕುದಿಯುವಂತೆ ಮಾಡಿದ್ದೂ ಅಲ್ಲದೆ ಆಕ್ರೋಶ ಮೂಡುವಂತೆ ಮಾಡಿದೆ.

ದರ್ಶನ್‌ಗೆ ಇದೀಗ ಕನ್ನಡ ಸಿನಿಮಾ ಅಭಿಮಾನಿಗಳು, 'ಆಂಧ್ರ ಅಲ್ಲ ಗುರೂ ಇದು ಕರ್ನಾಟಕ' ಅಂತಿದ್ದಾರೆ. ಈ ರೀತಿ ಆಂಧ್ರ ಪ್ರದೇಶ ಅಥವಾ ತೆಲಂಗಾಣ ರಾಜ್ಯದಲ್ಲಿ ನಡೆಯಬಹುದೋ ಏನೋ ಆದರೆ ಕರ್ನಾಟಕದ ನೆಲದಲ್ಲಿ ಇಂತಹ ಕೃತ್ಯಗಳು ನಡೆಯಲ್ಲ. ಉತ್ತರ ಪ್ರದೇಶ, ಬಿಹಾರ ರೀತಿ ನಮ್ಮ ರಾಜ್ಯ ಅಲ್ಲ ಅಂತ ಈಗ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ ಕನ್ನಡಿಗರು.

3 ತಿಂಗಳ ಕಾಲ ಜೈಲು ಗ್ಯಾರಂಟಿ?

ನಟ ದರ್ಶನ್ ವಿರುದ್ಧ ಇದೀಗ ಕೇಳಿಬಂದಿರುವುದು ಕೊಲೆ ಆರೋಪ ಆಗಿದೆ. ಈ ಕಾರಣಕ್ಕೆ ದರ್ಶನ್ ಸುಲಭವಾಗಿ ಜಾಮೀನು ಪಡೆಯುವುದು ಅಸಾಧ್ಯ. ಮತ್ತೊಂದ್ಕಡೆ ಈಗ ಜಾಮೀನಿಗೆ ಪ್ರಯತ್ನ ಶುರು ಮಾಡಿದರೂ ಮುಂದಿನ 3 ತಿಂಗಳ ಕಾಲ ಜಾಮೀನು ಸಿಗುವುದೇ ಅನುಮಾನ ಅಂತಿದ್ದಾರೆ ಕಾನೂನು ತಜ್ಞರು. ಹೀಗಾಗಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಮತ್ತೊಂದು ಕಡೆ, ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವುದು ಕೂಡ ಬಹುತೇಕ ಪಕ್ಕಾ ಅಂತಿದ್ದಾರೆ ಅವರ ವಿರೋಧಿಗಳು ಈ ನಡುವೆ ಮೃತ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ, ಪತ್ನಿ ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗೇ ರೇಣುಕಾಸ್ವಾಮಿ ಅವರ ಪತ್ನಿ ಈಗ ಗರ್ಭಿಣಿ ಆಗಿದ್ದಾರೆ.

ದರ್ಶನ್ & ಗ್ಯಾಂಗ್‌ಗೆ ಅನ್ನ-ಸಾರು!

ಪ್ರತಿದಿನ ಎಣ್ಣೆ ಹೊಡೆದು, ಸಖತ್ ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ನಟ ದರ್ಶನ್ & ಗ್ಯಾಂಗ್ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ, ಚಾಪೆ ಕೊಟ್ಟು ಮಲಗಿಸಿದ್ದಾರೆ. ಈ ಮೂಲಕ ಕೊಲೆ ಆರೋಪದ ಹಿನ್ನೆಲೆ ಕಂಬಿ ಹಿಂದೆ ಬಿದ್ದಿರುವ, ಸೋ ಕಾಲ್ಡ್ ಡಿ-ಬಾಸ್ ಇದೀಗ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ದರ್ಶನ್ ಅವರ ಬೆನ್ನುಹತ್ತುವ ಅಪಾಯ ಕಾಡುತ್ತಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ತೂಗುದೀಪ ದರ್ಶನ್ ಅವರ ಅಭಿಮಾನಿಗಳು ಸೈಲೆಂಟ್ ಆಗುತ್ತಿದ್ದಾರೆ.

ಪತ್ರಕರ್ತರ ತೀವ್ರ ಆಕ್ರೋಶ!

ಪೊಲೀಸ್ ಅಧಿಕಾರಿಗಳ ವರ್ತನೆಯಿಂದ ಮಾಧ್ಯಮ ಸಿಬ್ಬಂದಿ ಆಕ್ರೋಗೊಂಡಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ದರ್ಶನ್ ಅಭಿಮಾನಿ ಮಾಧ್ಯಮಗಳ ಎದುರಿಗೆ ಬಂದು ಮಾಧ್ಯಮಗಳ ಕುರಿತು ತುಂಬ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ದಿಢೀರ್ ರೊಚ್ಚಿಗೆದ್ದಿದ್ದು ಆತನ ಮುಖಚರಿ ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಹೆದರಿದ ದರ್ಶನ್ ಅಭಿಮಾನಿ, ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇಷ್ಟಾದರೂ ಮಾಧ್ಯಮಗಳ ಸಿಬ್ಬಂದಿ ಆತನ ಹಿಂದೆ ಓಡಿದ್ದಾರೆ. ಆಗ ತಕ್ಷಣ ಪೊಲೀಸರು ಆತನನ್ನ ಪೊಲೀಸ್ ಠಾಣೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ಆತನಿಗೆ ಅವರದ್ದೇ ಭಾಷೆಯಲ್ಲಿ ಬುದ್ಧಿ ಹೇಳಿ, ರುಚಿ ತೋರಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+