Darshan Thoogudeepa: ಬಿಗ್‌ಬಾಸ್‌ ಒಳ್ಳೆ ಹುಡ್ಗ ಪ್ರಥಮ್ ಜೊತೆಗೆ ಡಿ-ಬಾಸ್ ಗ್ಯಾಂಗ್ ಕಿರಿಕ್!

ದರ್ಶನ್‌ ಫ್ಯಾನ್ಸ್ ಎಂದು ಹೇಳಿಕೊಂಡು ಬಂದ ಕೆಲವರು ನನ್ನೊಂದಿಗೆ ಕಿರಿಕ್ ಮಾಡಿದ್ದಾರೆ ಎಂದು ಒಳ್ಳೆ ಹುಡುಗ ಪ್ರಥಮ್ ಹೇಳಿಕೊಂಡಿದ್ದಾರೆ. ಹೋಟೆಲ್‌ವೊಂದರಲ್ಲಿ ಕುಳಿತುಕೊಂಡಾಗ ಬಂದ ಕೆಲವರು ದರ್ಶನ್ ಗೆ ಜೈ ಅನ್ನಿ ಎಂದು ಬಲವಂತ ಮಾಡಿದ್ದಾರೆ. ಮಾಡದೇ ಇದ್ದಿದ್ದರಿಂದ ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಬಿಗ್‌ಬಾಸ್ ಕನ್ನಡ ಸೀಸನ್ 4 ವಿನ್ನರ್ ಪ್ರಥಮ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ವಿನ್ನರ್ ಪ್ರಥಮ್‌ಗೆ ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಪದ ಬಳಸಿ ನಿಂದಿಸಿದ್ದಲ್ಲದೇ ಜೈ ಡಿಬಾಸ್‌ ಎಂದು ಕೂಗಿ ಅಂತ ಒತ್ತಾಯಿಸಿದ್ದಾರೆ. ಇದನ್ನು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಕಿರಿಕ್ ಆಗಿದ್ದೆಲ್ಲಿ?

darshan thoogudeepa gang Kirik with bigg boss 4 winner olle hudga pratham

ನಗರದ ಪ್ರತಿಷ್ಟಿತ ಹೋಟೆಲ್‌ವೊಂದಕ್ಕೆ ಪ್ರಥಮ್ ಹಾಗೂ ಅವರ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಬಂದ ಕೆಲವರು ಡಿಬಾಸ್‌ಗೆ ಜೈ ಅಂತ ಕೂಗಿ ಎಂದು ಗಲಾಟೆ ಮಾಡಿದ್ದಾರೆ. ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಮುಂದಾಗಿದ್ದಾರೆ. ಈ ವೇಳೆ ಹೋಟೆಲ್‌ನಲ್ಲಿ ಇದ್ದ ಎಂಟು ಜನ ಬೌನ್ಸರ್‌ಗಳು ಆ ಗೂಂಡಾಗಳನ್ನು ಹೊರಗೆ ಎಳೆದು ಕರೆದೊಯ್ಯದರು ಎಂದು ಘಟನೆಯ ಬಗ್ಗೆ ಪ್ರಥಮ್ ಟ್ವಿಟ್‌ನಲ್ಲಿ ವಿವರಿಸಿದ್ದಾರೆ. ಪ್ರಥಮ್ ಟ್ವೀಟ್‌ನಲ್ಲಿ ಹೇಳಿರುವುದಿಷ್ಟು....

''ಸಂಜೆ ಗ್ರಾಮಾಂತರದ ಪ್ರತಿಷ್ಟಿತ ಹೋಟೆಲ್ ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ವಿ;

ಕೆಲವರು ಫೋಟೋ ತಗೊಂಡ್ರು;

ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಮಾಡಿದ್ರು;

ಒಳ್ಳೇದಾಗ್ಲಪ್ಪ ಅಂದೆ;

ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಬಂದ್ರು!ಅಲ್ಲಿದ್ದ 8ಜನ ಬೌನ್ಸರ್ ಆ ಗೂಂಡಗಳನ್ನ ಎಳೆದು ಹೊರಗೆ ತಳ್ಳಿದ್ರು;ಕ್ಷಮೆಕೇಳಿದ್ರು, ಬಿಟ್ಟಿದ್ದೀನಿ'' ಎಂದು ಪ್ರಥಮ್ ಬರೆದಿದ್ದಾರೆ.

ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮನವಿಯ ಮೇರೆಗೆ ನಾನು ಕಂಪ್ಲೆಟ್ ಕೊಡಬಾರದು ಎಂದು ನಿರ್ಧರಿಸಿದೆ. ಎಲ್ಲರೂ ಅವರವರ ಪಾಡಿಗೆ ಇದ್ದಾರೆ. ಈ ಗೂಂಡಾಗಳ ವರ್ತನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ ಎಂದು ಎಕ್ಸ್‌ನಲ್ಲಿ ಪ್ರಥಮ್ ಬರೆದಿದ್ದಾರೆ.

ಡಿ-ಗ್ಯಾಂಗ್‌ಗೆ ಉಗಿದಿದ್ದ ಪ್ರಥಮ್

ಈ ಹಿಂದೆ ದರ್ಶನ್ ಅಭಿಮಾನಿಗಳು ದರ್ಶನ್ ಬಂಧನದ ಬಗ್ಗೆ ತಿಳಿದು ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯ ಮುಂದೆ ಜಮಾಯಿಸಿದ್ದರು. ಈ ಪ್ರಕರಣ ಸಂಬಂಧ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ನಟ ಪ್ರಥಮ್, ''ಆ ಅನ್ನಪೂರ್ಣೇಶ್ವರಿ ನಗರದ ಠಾಣೆ ಮುಂದೆ ಇವರೇನು (ಅಭಿಮಾನಿಗಳಿಗೆ) ಕೆಲಸ. ಠಾಣೆ ಮುಂದಿರುವ ಬೇವರ್ಸಿಗಳಿಗೆ ಮನೆಯಲ್ಲಿ ಅವರಮ್ಮನಿಗೆ ಒಂದೊತ್ತು ಹಿಟ್ಟು ಕೊಡಿಸಲು ಯೋಗ್ಯತೆ ಇಲ್ಲ. ನನಗೆ ಒಂದು ವಾರ ಪೊಲೀಸ್ ಪೇದೆ ಆಗುವ ಅವಕಾಶ ಕೊಟ್ಟು ನೊಡಿ ಎಲ್ಲರನ್ನು ದೊಣ್ಣೆ ಹಿಡಿದು ಹೊಡೆದು ಓಡಿತ್ತೇನೆ'' ಎಂದು ಹೇಳಿದ್ದರು. ಪ್ರಥಮ್ ಈ ಮಾತಿಗೆ ದರ್ಶಣ್ ಫ್ಯಾನ್‌ ಗರಂ ಆಗಿದ್ದರು.

ದರ್ಶನ್ ಬೇಲ್ ರದ್ದಿಗೆ ಸುಪ್ರೀಂ ಮೆಟ್ಟಿಲೇರಲು ಸರ್ಕಾರದಿಂದ ಗ್ರೀನ್ ಸಿಗ್ನಲ್- ಬಿ.ದಯಾನಂದ್ ಸುದ್ದಿಗೋಷ್ಟಿ

ದರ್ಶನ್ ಬೇಲ್ ರದ್ದಿಗೆ ಸುಪ್ರೀಂ ಮೆಟ್ಟಿಲೇರಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಸುಪ್ರೀಂ ಕೋರ್ಟ್‌ಗೆ ಅಪೀಲ್ ಹೋಗಲು ಸರ್ಕಾರ ಅನುಮತಿಯನ್ನು ಕೊಟ್ಟಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪೊಲೀಸ್ ಕಮಿಷನರ್‌ ಬಿ. ದಯಾನಂದ್ ಹೇಳಿಕೆ ನೀಡಿದ್ದಾರೆ. 13ನೇ ತರೀಕು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್‌ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವುನಿಂದ ಬಳಲುತ್ತಿದ್ದ ದರ್ಶನ್‌ ಅವರಿಗೆ ಸರ್ಜರಿ ಮಾಡಿಸುವುದು ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಬೆನ್ನಲ್ಲೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಆದರೆ ದರ್ಶನ್ ಸರ್ಜರಿಗೆ ಒಳಗಾಗದ ಬೆನ್ನಲ್ಲೆ ಪೊಲೀಸರು ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಮೆಟ್ಟಿಲೇರಲು ಸರ್ಕಾರದ ಅನುಮತಿ ಕೋರಿದ್ದರು. ಸದ್ಯ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+