Darshan Thoogudeepa: ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್....
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿ, ಕೋಟಿ ಕೋಟಿ ಅಭಿಮಾನಿಗಳ ಬಾಯಿಂದ 'ಡಿ-ಬಾಸ್' ಎಂಬ ಬಿರುದು ಪಡೆದಿದ್ದ ದರ್ಶನ್ ತೂಗುದೀಪ್ ಅವರು ಇದೀಗ ತಾನೆ ಕೊಲೆ ಕೇಸ್ ಎದುರಿಸಿ ಬಳ್ಳಾರಿ ಜೈಲಿನಿಂದ ಮುಕ್ತರಾಗಿದ್ದಾರೆ. 'ಡೆವಿಲ್' ಸೇರಿದಂತೆ 'ವೀರ ಸಿಂಧೂರ ಲಕ್ಷ್ಮಣ' & 'ರಾಜವೀರ ಮದಕರಿ ನಾಯಕ' ಸಿನಿಮಾಗಳು ಸಾಲು ಸಾಲಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಹೀಗಿದ್ದಾಗಲೇ, ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ದಾಖಲೆ ಬರೆದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ಅವರ ಜರ್ನಿ 'ಮೆಜೆಸ್ಟಿಕ್' ಮೂಲಕ ಶುರುವಾಗಿತ್ತು. ಆ ನಂತರ ಕರಿಯ, ಕಲಾಸಿಪಾಳ್ಯ, ದತ್ತ ಹೀಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿ ಮಿಂಚಿದರು. ಕಳೆದ ವರ್ಷ ಇದೇ ಸಮಯಕ್ಕೇ ಬಂದಿದ್ದ 'ಕಾಟೇರ' ಸಿನಿಮಾ ಇಡೀ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಹೊಸ ದಾಖಲೆ ಬರದಿತ್ತು. ಹೀಗಿದ್ದಾಗಲೇ, ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್....

ಹಾಲಿವುಡ್ ಸಿನಿಮಾದಲ್ಲಿ ಡಿ-ಬಾಸ್ ಅಬ್ಬರ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಖ್ಯಾತ ಜೋತಿಷಿ ಒಬ್ಬರು ಇದೀಗ ಭವಿಷ್ಯವನ್ನ ನುಡಿದಿದ್ದಾರೆ. ಈ ಭವಿಷ್ಯದ ಪ್ರಕಾರ, 2025ರ ಹೊಸ ವರ್ಷ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪಾಲಿಗೆ ಬದಲಾವಣೆಯ ತಂಗಾಳಿ ತರಲಿದೆಯಂತೆ. ಅಲ್ಲದೆ ಡಿ-ಬಾಸ್ ದರ್ಶನ್ ಅವರ ಸಿನಿಮಾ ಕರಿಯರ್ ಕೂಡ ಮತ್ತಷ್ಟು ಮೇಲೆ ಹೋಗಲಿದ್ದು, ಹಾಲಿವುಡ್ ಸಿನಿಮಾದಲ್ಲಿ ಕೂಡ ನಟ ದರ್ಶನ್ ತೂಗುದೀಪ್ ಅವರು ಅಬ್ಬರಿಸುವುದು ಗ್ಯಾರಂಟಿ ಅಂತಾ ಇದೀಗ ಖ್ಯಾತ ಜೋತಿಷಿ ಒಬ್ಬರು ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ. ಹಾಗೇ ಡಿ-ಬಾಸ್ ಫ್ಯಾನ್ಸ್ ಈ ಮಾತು ಕೇಳಿ ಕುಣಿದಾಡಿದ್ದಾರೆ.
ತೂಗುದೀಪ್ ಕುಟುಂಬ & ಮಾಧ್ಯಮಗಳ ತಿಕ್ಕಾಟ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ತಮ್ಮ ನಿರ್ದೇಶನದಲ್ಲಿ ಮೂಡಿ ಬಂದಿರುವ ಹೊಸ ಸಿನಿಮಾ ಪ್ರಮೋಷನ್ ಮಾಡ್ತಾ ಇದ್ದಾರೆ. ಈ ವೇಳೆ, ದಿನಕರ್ ತೂಗುದೀಪ್ ಅವರು ಟಿವಿ ಮಾಧ್ಯಮಗಳಿಗೆ ಚುಟುಕು ಸಂದರ್ಶನ ನೀಡಿದ್ದಾರೆ. ಆದರೆ ತಮ್ಮ ಅಣ್ಣನ ಬಗ್ಗೆ, ಮಾಧ್ಯಮಗಳು ರೊಚ್ಚಿಗೆಬ್ಬಿಸುವ ಕೆಲಸವನ್ನ ಮಾಡಿವೆ ಅಂತಾನೂ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ಸಮಯದಲ್ಲಿ, ದಿನಕರ್ ತೂಗುದೀಪ್ ಅವರ ಮಾತುಗಳಿಗೂ ಅತ್ತ ಟಿವಿ ಮಾಧ್ಯಮದ ಪ್ರತಿನಿಧಿಗಳು ತಿರುಗೇಟು ನೀಡುವ ಪ್ರಯತ್ನ ಮಾಡಿದ್ದು. ಈ ಮೂಲಕ ತೂಗುದೀಪ್ ಕುಟುಂಬ & ಮಾಧ್ಯಮಗಳ ನಡುವೆ ಮತ್ತೊಂದು ಸುತ್ತಿನ ಫೈಟ್ ಶುರುವಾಯ್ತಾ? ಅನ್ನೋ ಅನುಮಾನ ಮೂಡಿ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಜೋರಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ.












Click it and Unblock the Notifications