Darshan Thoogudeepa: ಮಾರ್ಟಿನ್ ಟುಸ್ ಪಟಾಕಿ ಅಂತೆ... ‘ಜೈ ಡಿ-ಬಾಸ್’ ಅಂತಿದ್ದಾರೆ ದರ್ಶನ್ ತೂಗುದೀಪ್...
ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ & ಧ್ರುವ ಸರ್ಜಾ ನಡುವೆ ಈ ಸಮಯದಲ್ಲೂ ದ್ವೇಷ & ಸೇಡು ಕಡಿಮೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅದ್ರಲ್ಲೂ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಧ್ರುವ ಸರ್ಜಾ ವಿರುದ್ಧ ಸೋಷಿಯಲ್ ಮೀಡಿಯ ಸೇರಿದಂತೆ ಎಲ್ಲಾ ಕಡೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಆರೋಪ ದರ್ಶನ್ ತೂಗುದೀಪ್‌ರ ಅಭಿಮಾನಿಗಳಿಂದ ಕೇಳಿ ಬಂದಿದ್ದು, ಮಾರ್ಟಿನ್ ಟುಸ್ ಪಟಾಕಿ ಅಂತೆ... 'ಜೈ ಡಿ-ಬಾಸ್' ಅಂತಿದ್ದಾರೆ ದರ್ಶನ್ ತೂಗುದೀಪ್ ಫ್ಯಾನ್ಸ್!
ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಮಾರ್ಟಿನ್' ರಿಲೀಸ್ ಆಗಿದ್ದು, ಈ ಸಿನಿಮಾ ದೇಶಾದ್ಯಂತ ಸೌಂಡ್ ಮಾಡುತ್ತಿದೆ. ಒಂದು ಕಡೆ ಧ್ರುವ ಸರ್ಜಾ ಅಭಿನಯಿಸಿರುವ 'ಮಾರ್ಟಿನ್' ಸಿನಿಮಾ ಸೂಪರ್ ಅಂತಾ, ಧ್ರುವ ಸರ್ಜಾ ಅಭಿಮಾನಿಗಳು ಹೇಳುತ್ತಿದ್ದಾರೆ. ಮತ್ತೊಂದು ಕಡೆ 'ಮಾರ್ಟಿನ್' ಸಿನಿಮಾ ಫ್ಲಾಪ್ ಗುರೂ ಅಂತಾ ಕೆಲವರು ಹೇಳುತ್ತಿದ್ದಾರೆ. ಹೀಗೆ ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನಿಮಾ ಬಗ್ಗೆ ದೊಡ್ಡ ಫೈಟಿಂಗ್ ನಡೆಯುವಾಗಲೇ ಈ ಕಿತ್ತಾಟಕ್ಕೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಎಂಟ್ರಿ ಆಗಿದ್ದಾರೆ. ಈ ಮೂಲಕ ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನಿಮಾ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳುತ್ತಿದ್ದಾರೆ ಗೊತ್ತಾ?

'ಜೈ ಡಿ-ಬಾಸ್' ಅಂತಿದ್ದಾರೆ ದರ್ಶನ್ ಫ್ಯಾನ್ಸ್!
ಹೌದು, ಧ್ರುವ ಸರ್ಜಾ ಅಭಿನಯಿಸಿರುವ 'ಮಾರ್ಟಿನ್' ಸಿನಿಮಾ ನೋಡಿ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಚನ್ನಾಗಿಲ್ಲ ಅಂತಾ ಕಮೆಂಟ್ ಕೊಡುತ್ತಿದ್ದಾರೆ. ಅಲ್ಲದೆ ಮಾರ್ಟಿನ್ ಟುಸ್ ಪಟಾಕಿ ಅಂತೆ.. 'ಜೈ ಡಿ-ಬಾಸ್' ಅಂತಿದ್ದಾರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಚರ್ಚೆ ಕೂಡ ದೊಡ್ಡದಾಗಿ ನಡೆಯುತ್ತಿದೆ. ಮತ್ತೊಂದು ಕಡೆ ಇದೇ ವಿಡಿಯೋಗಳನ್ನ ನೋಡಿ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಟಾಂಗ್ ಕೊಡುತ್ತಿದ್ದಾರೆ.
ಫ್ಯಾನ್ಸ್ ವಾರ್ ಇಲ್ಲಿಗೆ ನಿಲ್ಲೋದಿಲ್ವಾ?
ಒಟ್ನಲ್ಲಿ ಮತ್ತೊಮ್ಮೆ ಫ್ಯಾನ್ಸ್ ವಾರ್ ಜೋರಾಗಿದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೇ ಫ್ಯಾನ್ಸ್ ವಾರ್ ಸಿನಿಮಾಗಳನ್ನ ಹಳ್ಳ ಹಿಡಿಯುವಂತೆ ಮಾಡುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಹೀಗಿದ್ದಾಗ ಫೈಟಿಂಗ್ ಕೂಡ ಜೋರಾಗಿದ್ದು, ಮುಂದೆ ಧ್ರುವ ಸರ್ಜಾ ಫ್ಯಾನ್ಸ್ & ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ದೊಡ್ಡ ತಿಕ್ಕಾಟಕ್ಕೂ ಕಾರಣವಾಗುವ ಮುನ್ಸೂಚನೆ ನೀಡುತ್ತಿದೆ. ಆದರೆ ಇದೆಲ್ಲವನ್ನೂ ನಿಲ್ಲಿಸಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಳೆಸಬೇಕು ಎಂಬ ಆಗ್ರಹ ಕನ್ನಡಿಗರದ್ದಾಗಿದೆ.












Click it and Unblock the Notifications