Darshan Thoogudeepa: ದರ್ಶನ್ ತೂಗುದೀಪ್ ಬಗ್ಗೆ ದುನಿಯಾ ವಿಜಯ್ ಕೆಟ್ಟದಾಗಿ ಮಾತನಾಡಿದ್ರಾ?
ದರ್ಶನ್ ತೂಗುದೀಪ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ ದರ್ಶನ್ ತೂಗುದೀಪ್ ಅವರು ಆಪ್ತ ಗೆಳತಿ ಪವಿತ್ರಾ ಗೌಡ ಜೊತೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ ನಂತರ, ದರ್ಶನ್ ಅವರ ಅಭಿಮಾನಿಗಳು ಮತ್ತಷ್ಟು ಆಕ್ರೋಶ ಹೊರ ಹಾಕುತ್ತಿದ್ದು, ಇದೀಗ ದುನಿಯಾ ವಿಜಯ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ದುನಿಯಾ ವಿಜಯ್ ಅವರು ದರ್ಶನ್ ತೂಗುದೀಪ್‌ರ ಕುರಿತು ಕೆಟ್ಟದಾಗಿ ಮಾತನಾಡಿದ್ರಾ? ಬನ್ನಿ ತಿಳಿಯೋಣ ವಿಡಿಯೋ ಸಾಕ್ಷಿ ಸಮೇತ!
ಹೌದು, ದುನಿಯಾ ವಿಜಯ್ ಮತ್ತು ದರ್ಶನ್ ತೂಗುದೀಪ್ ಇಬ್ಬರೂ ಆತ್ಮೀಯ ಸ್ನೇಹಿತರು. ಹಲವು ವರ್ಷಗಳಿಂದ ಇಬ್ಬರೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಹಿಗಿದ್ದಾಗ ಇತ್ತೀಚೆಗೆ ದುನಿಯಾ ವಿಜಯ್ ಮತ್ತು ದರ್ಶನ್ ತೂಗುದೀಪ್ ನಡುವೆ ಬಿರುಕು ಮೂಡಿದೆಯಾ? ಎಂಬ ಅನುಮಾನ ಶುರುವಾಗಿದೆ. ಈ ರೀತಿಯ ಅನುಮಾನ ಮೂಡಲು ಕಾರಣವಾಗಿದ್ದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಂದ. ಯಾಕಂದ್ರೆ ದುನಿಯಾ ವಿಜಯ್ ಅವರಿಗೆ ಇದೀಗ, ದರ್ಶನ್ ತೂಗುದೀಪ್ ಅಭಿಮಾನಿಗಳು ಕೆಟ್ಟ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಅಲ್ಲದೆ ವಾರ್ನಿಂಗ್ ಕೊಟ್ಟು ಆಟ ಆಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ದರ್ಶನ್ ಅವರ ಬಗ್ಗೆ ದುನಿಯಾ ವಿಜಯ್ ನೀಡಿದ್ದ ಹೇಳಿಕೆ ಏನು? ಮುಂದೆ ಓದಿ.

ದರ್ಶನ್ VS ದುನಿಯಾ ವಿಜಯ್?
ದುನಿಯಾ ವಿಜಯ್ ಇತ್ತೀಚೆಗೆ ತಮ್ಮ 'ಭೀಮ' ಸಿನಿಮಾ ರಿಲೀಸ್ ಮಾಡಿದ್ದರು. ಅದರಲ್ಲೂ 'ಭೀಮ' ಸಿನಿಮಾ ಭಾರಿ ದೊಡ್ಡ ಯಶಸ್ಸು ಕಂಡು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಲು ಮುನ್ನುಗ್ಗುತ್ತಿದೆ. ಇಂತಹ ಸಮಯದಲ್ಲೇ ಖಾಸಗಿ ನ್ಯೂಸ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ದುನಿಯಾ ವಿಜಯ್, ದರ್ಶನ್ ತೂಗುದೀಪ್ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ರು. ಈಗ ಅದೇ ಪ್ರತಿಕ್ರಿಯೆ ದುನಿಯಾ ವಿಜಯ್ ಬಗ್ಗೆ ದರ್ಶನ್ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿದೆ. ಹಾಗಾದರೆ, ನಿಜಕ್ಕೂ ದುನಿಯಾ ವಿಜಯ್ ಅವರು ದರ್ಶನ್ ತೂಗುದೀಪ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರಾ? ವಿಡಿಯೋ ಇಲ್ಲಿದೆ ನೋಡಿ.
ದರ್ಶನ್ ಅವರ ಅಭಿಮಾನಿಗಳ ಆಕ್ರೋಶ!
ಇಲ್ಲ.. ಇಲ್ಲ.. ದುನಿಯಾ ವಿಜಯ್ ಎಂದಿಗೂ ಕನ್ನಡದ ಯಾವುದೇ ಕಲಾವಿದನ ಕುರಿತು ಕೆಟ್ಟದಾಗಿ ಮಾತನಾಡಿದ ವ್ಯಕ್ತಿ ಅಲ್ಲವೇ ಅಲ್ಲ. ಅದರಲ್ಲೂ ದರ್ಶನ್ ತೂಗುದೀಪ್ ಅವರ ಜೊತೆ ದುನಿಯಾ ವಿಜಯ್ ಉತ್ತಮ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗಲೂ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಬೇರೆ ರೀತಿಯ ಗಂಭೀರ ಆರೋಪ ಮಾಡ್ತಿದ್ದಾರೆ.
ಖಾಸಗಿ ಚಾನೆಲ್ ಸಂದರ್ಶನದ ವೇಳೆ ದುನಿಯಾ ವಿಜಯ್ ಅವರಿಗೆ ದರ್ಶನ್‌ರ ಪ್ರಶ್ನೆ ಬಂದಿದೆ. ದುನಿಯಾ ವಿಜಯ್ ಅವರು ದರ್ಶನ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ. ಈ ಮೂಲಕ ದರ್ಶನ್ ತೂಗುದೀಪ್ ಅವರಿಗೆ ದುನಿಯಾ ವಿಜಯ್ ಅವಮಾನ ಮಾಡಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಆದರೆ ಖಾಸಗಿ ನ್ಯೂಸ್ ಚಾನೆಲ್‌ನಲ್ಲಿ ದುನಿಯಾ ವಿಜಯ್ ಅವರಿಗೆ ದರ್ಶನ್ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಒಳ್ಳೆಯದಾಗಲಿ ಅಂತಾ ಹೇಳಿದ್ದಾರೆ ಅಷ್ಟೇ. ಇದೇ ಸಣ್ಣ ವಿಷಯ ಇಟ್ಟುಕೊಂಡು ಇದೀಗ ದೊಡ್ಡ ಕಿರಿಕ್ ಶುರುವಾಗಿದೆ.












Click it and Unblock the Notifications