Darshan Thoogudeepa: ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸಲು ದರ್ಶನ್ ತೂಗುದೀಪ್ ಅಭಿಮಾನಿಗಳ....

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರೀ ಉಳಿಯಲು ಸಾಧ್ಯವೇ ಇಲ್ಲ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಸಾವಿರಾರು ಕುಟುಂಬಗಳು ಈ ಸಮಯದಲ್ಲಿ ಅನ್ನ ತಿನ್ನುತ್ತಿವೆ.... ಈ ರೀತಿ ಡಿ-ಬಾಸ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡ್ತಾರೆ & ಹೊಗಳುತ್ತಾರೆ. ಇದೆಲ್ಲವನ್ನೂ ಮೀರಿ ಈಗ, ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸೋದಕ್ಕೆ ದರ್ಶನ್ ತೂಗುದೀಪ್ ಅಭಿಮಾನಿಗಳ....

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಸ್ ಆಗಿ ಒಂದು ಕಾಲದಲ್ಲಿ ಮೆರೆದಿದ್ದ ಡಿ-ಬಾಸ್ ದರ್ಶನ್ ಅವರು, ಇದೀಗ ಕೊಲೆ ಕೇಸ್‌ನಲ್ಲಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ನೋಡಿ ಅಭಿಮಾನಿಗಳು ಕೂಡ ಕಣ್ಣೀರು ಹಾಕುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇನ್ನಷ್ಟು ಕಂಟಕ ಎದುರಾಗಿದೆ, ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ಆಸ್ಪತ್ರೆಗೆ ಸೇರಿದ್ದು ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಹೀಗಾಗಿ ನೆಮ್ಮದಿಯಾಗಿ ನಿದ್ದೆ ಕೂಡ ಮಾಡಲು ಆಗುತ್ತಿಲ್ಲ.....

Darshan Thoogudeepa Fans Discussing This About Biggest Cutout In Bengaluru

ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ....

ಮಾನ್ಯ ನ್ಯಾಯಾಲಯ ನೀಡಿರುವ ಮಧ್ಯಂತರ ಜಾಮೀನು ಅಂದ್ರೆ ಬೇಲ್ ಅನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಮಾಡಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದ್ರು ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಹೋಗುವ ಭಯ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಮಯದಲ್ಲೇ, ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸೋದಕ್ಕೆ ದರ್ಶನ್ ತೂಗುದೀಪ್ ಅಭಿಮಾನಿಗಳು ಎಲ್ಲಾ ರೀತಿ ತಯಾರಿ ನಡೆಸಿದ್ದಾರೆ!

ಇಡೀ ಜಗತ್ತಿಗೇ ಸಾರಿ ಹೇಳಬೇಕು ಅಂತಾ...

ಹೌದು, ಬೆಂಗಳೂರಿನ ಮೆಜೆಸ್ಟಿಕ್ ಬಳಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬರೋಬ್ಬರಿ 500 ಅಡಿ ಎತ್ತರದ ಕಟೌಟ್ ನಿಲ್ಲಿಸಬೇಕು ಎಂಬ ಚರ್ಚೆಯನ್ನ ನಡೆಸಲಾಗ್ತಿದೆ. ಅಂದಹಾಗೆ ಈ ರೀತಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಭಾರಿ ದೊಡ್ಡ ಮಟ್ಟದ ಚರ್ಚೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಈಗ ಮಾತನಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ನಮ್ಮ ಬಾಸ್ ಯಾವುದೇ ರೀತಿ ತಪ್ಪು ಮಾಡಿಲ್ಲ. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 500 ಅಡಿ ಎತ್ತರ ಕಟೌಟ್ ನಿಲ್ಲಿಸಬೇಕು. ಈ ಮೂಲಕ, ಇಡೀ ಜಗತ್ತಿಗೇ ಅವರು ತಪ್ಪು ಮಾಡಿಲ್ಲ ಎಂಬುದನ್ನು ಸಾರಿ ಸಾರಿ ಹೇಳಬೇಕು ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.

ಕೋಟಿ ಕೋಟಿ ಅಭಿಮಾನಿಗಳ ಪ್ರಾರ್ಥನೆ!

ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ವಿಲವಿಲ ಒದ್ದಾಡುತ್ತಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಎಲ್ಲಾ ಸಂಕಷ್ಟಗಳನ್ನ ಎದುರಿಸಿ ಗೆದ್ದು ಹೊರಗೆ ಬರಲಿ ಅನ್ನೋದು ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಇದೀಗ ಪ್ರಾರ್ಥನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+