ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಂದ ವಿಶೇಷ ಪೂಜೆ: ಮನೆಗೆ ಗಂಗಾಜಲ ಅರ್ಪಣೆ!

ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್ ಆಗಿ ಹೊರಗಡೆ ಬರಲಿ, ಈ ಮೂಲಕ ಮತ್ತೆ ಅವರು ಬೆಳ್ಳಿತೆರೆ ಮೇಲೆ ಮಿಂಚು ಹರಿಸಲಿ ಎಂಬುದು ಕೋಟಿ ಕೋಟಿ ಅಭಿಮಾನಿಗಳ ಬಯಕೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಇದೀಗ ಜೈಲು ಸೇರಿದ್ದು, ಸೆಂಟ್ರಲ್ ಜೈಲಿನಲ್ಲಿ ಅಂದ್ರೆ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಆದರೆ, ದರ್ಶನ್ ತೂಗುದೀಪ್ ಅವರ ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿರುವ ಅಭಿಮಾನಿಗಳು ಈಗ ಏನು ಮಾಡಿದ್ದಾರೆ ಗೊತ್ತಾ?

ನಟ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ರಂಗದಲ್ಲೇ ಅತ್ಯಂತ ಎತ್ತರದ ಸ್ಥಾನಕ್ಕೆ ತಲುಪಿದ್ದರು. ದರ್ಶನ್ ತೂಗುದೀಪ್ ಅವರ ಒಂದೊಂದು ಸಿನಿಮಾ ಕೂಡ ನೂರಾರು ಕೋಟಿ ರೂಪಾಯಿ ಹಣವನ್ನು ಸುಲಭವಾಗಿ ಗಳಿಸುವಷ್ಟು ಶಕ್ತಿ ಹೊಂದಿದ್ದವು. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರು ಅಭಿನಯಿಸಿದ್ದ 'ಕಾಟೇರ' ಸಿನಿಮಾ ಕೋಟಿ ಕೋಟಿ ದುಡಿದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಇತಿಹಾಸ ನಿರ್ಮಿಸಿತ್ತು. ಹೀಗೆ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದಲ್ಲೇ ಅತ್ಯಂತ ಮೇಲಕ್ಕೆ ಏರಿ, ಉತ್ತುಂಗದಲ್ಲಿ ಇದ್ದಾಗಲೇ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಬಿಟ್ಟರು...

Darshan Thoogudeepa Fans Did Special Pooja For Their Favorite Hero

ಕ್ಷಣ ಕ್ಷಣಕ್ಕೂ ಅಭಿಮಾನಿಗಳ ಕಣ್ಣೀರು...

ದರ್ಶನ್ ತೂಗುದೀಪ್ ಅವರು ಹೀಗೆ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲಿಗೆ ಹೋದ ನಂತರ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅದರಲ್ಲೂ ದರ್ಶನ್ ಅವರ ಕೋಟಿ ಕೋಟಿ ಅಭಿಮಾನಿಗಳು ಪ್ರತಿ ಕ್ಷಣವೂ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ತಮ್ಮ ನೆಚ್ಚಿನ ನಟ ಈಗ ಜೈಲಿಂದ ಅಂದರೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಸುರಕ್ಷಿತವಾಗಿ ಅದಷ್ಟು ಬೇಗ ರಿಲೀಸ್ ಆಗಿ ಬರಲಿ, ಈ ಮೂಲಕ ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸಾಧನೆ ಮಾಡುವ ಸಿನಿಮಾ ನೀಡಲಿ ಅಂತಾ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಸಂಕಷ್ಟಗಳು ಪರಿಹಾರವಾಗಲು ಪ್ರಾರ್ಥನೆ...

ದರ್ಶನ್ ತೂಗುದೀಪ್ ಅವರು ಬೇಗ ಜೈಲಿನಿಂದ ಬಿಡುಗಡೆ ಆಗಲಿ ಅಂತಾ ಈಗ ಕರ್ನಾಟಕದ ಮೂಲೆ ಮೂಲೆಯಲ್ಲೂ ಪೂಜೆಗಳು ನಡೆಯುತ್ತಿವೆ. ಅದರಲ್ಲೂ ಅಭಿಮಾನಿ ಒಬ್ಬರು ಇದೇ ರೀತಿ ವಿಶೇಷ ಪೂಜೆ ನೆರವೇರಿಸಿ ತೀರ್ಥ ಸಿಂಪಡಿಸಿದ್ದಾರೆ. ಅಂದರೆ ವಿಶೇಷ ಪೂಜೆ ನಂತರ, ಗಂಗಾ ಜಲ ತಂದು ನಟ ದರ್ಶನ್ ಅವರ ಮನೆ ಇರುವ ರಾಜರಾಜೇಶ್ವರಿ ನಗರಕ್ಕೆ ಬಂದಿದ್ದಾರೆ. ಆ ನಂತರ ವಿಶೇಷ ಗಂಗಾ ಜಲವನ್ನು ಮನೆಗೆ ಸಿಂಪಡಿಸಿ ಸಂಕಷ್ಟ ಪರಿಹಾರ ಆಗಲಿ, ದರ್ಶನ್ ತೂಗುದೀಪ್ ಅವರು ಬೇಗ ಜೈಲಿನಿಂದ ರಿಲೀಸ್ ಆಗಲಿ ಅಂತಾ ಅಭಿಮಾನಿಗಳು ಈಗ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+