Darshan Thoogudeepa: ಕುದುರೆ ಮೇಲೆ ಕೂರಿಸಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಮೆರವಣಿಗೆ ಮೂಲಕ ಕರೆತರಲು....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಜೊತೆಗೆ ಜೈಲಿಗೆ ಹೋಗಿದ್ದರು. ಈ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಭೀಕರವಾಗಿ ಹಲ್ಲೆಯ ನಡೆಸಿ ಕೊಲೆ ಮಾಡಿದ್ದ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ಹತ್ತಾರು ಆರೋಪಿಗಳ ವಿರುದ್ಧ ಕೇಳಿ ಬಂದಿತ್ತು.
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ರು. ಆದರೆ ಆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳ ಕುತಂತ್ರದ ಹಿನ್ನೆಲೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಹೋಗುವಂತೆ ಆಗಿತ್ತು ಎಂಬ ಭಾರಿ ಗಂಭೀರ ಆರೋಪ ಕೇಳಿಬಂತು. ಇಷ್ಟೆಲ್ಲ ಕಂಟಕ ಎದುರಿಸಿದ್ದ ಡಿ-ಬಾಸ್ ದರ್ಶನ್ ಅವರಿಗೆ, ಜಾಮೀನು ಅಂದ್ರೆ ಬೇಲ್ ಸಿಕ್ಕಿದೆ. ಈ ಕಾರಣಕ್ಕೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಕುದುರೆ ಮೇಲೆ ಕೂರಿಸಿಕೊಂಡು ಮೆರವಣಿಗೆ....

ಕುದುರೆ ಮೇಲೆ ಡಿ-ಬಾಸ್ ದರ್ಶನ್ ಎಂಟ್ರಿ?
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುತ್ತಿರುವ ಮ್ಯಾಟರ್ ಕರ್ನಾಟಕದ ಮೂಲೆ ಮೂಲೆಗೂ ಹರಡಿದೆ. ಇದೇ ಕಾರಣಕ್ಕೆ ಲಕ್ಷ, ಲಕ್ಷ ಫ್ಯಾನ್ಸ್ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಸ್ವಾಗತಿಸಲು ಬಂದು ಸೇರುವ ಸಾಧ್ಯತೆಯು ದಟ್ಟವಾಗಿದೆ. ಇದರ ಜೊತೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಕುದುರೆ ಮೇಲೆಯೇ ಮೆರಣಿಗೆ ಮಾಡಿಕೊಂಡು ಬರಲು ಅಭಿಮಾನಿಗಳು ಸಜ್ಜಾಗಿದ್ದಾರೆ!
ಕುದುರೆ ಮೇಲೆ ಬರೋದು ಡೌಟ್!
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕುದುರೆ ಏರಿ & ಮೆರವಣಿಗೆಯಲ್ಲಿ ಬರುವುದು ಡೌಟ್ ಎನ್ನಲಾಗಿತ್ತು. 2011 ರಲ್ಲಿ ಡಿ-ಬಾಸ್ ದರ್ಶನ್ ಅವರು ಜೈಲಿಗೆ ಹೋಗಿ ರಿಲೀಸ್ ಆಗಿ ಹೊರಗೆ ಬಂದಾಗ ಕುದುರೆ ಮೇಲೆ ಮೆರವಣಿಗೆ ಮಾಡಲಾಗಿತ್ತು. ಆದರೆ ಈ ಬಾರಿ ಬೆನ್ನು ನೋವಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒದ್ದಾಡ್ತಿದ್ದು, ಹೀಗಾಗಿ ಕುದುರೆ ಏರಿ ಬರಲು ಸಾಧ್ಯವಾಗ್ತಿಲ್ಲ.
ರಾಜರಾಜೇಶ್ವರಿ ನಗರದಲ್ಲಿ ಅಭಿಮಾನಿಗಳ ಸಾಗರ!
ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆ ಬಳಿ, ಲಕ್ಷ ಲಕ್ಷ ಅಭಿಮಾನಿಗಳು ಸೇರುತ್ತಿದ್ದಾರೆ. ಹೀಗೆ ಜನರು ಸೇರುತ್ತಿರುವ ಹಿನ್ನೆಲೆ ರಾಜರಾಜೇಶ್ವರಿ ನಗರದಲ್ಲಿ ಭಾರಿ ಟೆನ್ಷನ್ ಶುರುವಾಗಿದೆ. ರಾಜರಾಜೇಶ್ವರಿ ನಗರದ ನಿವಾಸಿಗಳು ಈ ವಿಚಾರ ತಿಳಿದು ಟೆನ್ಷನ್ ಆಗಿದ್ದು, ಪೊಲೀಸರು ಕೂಡ ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆ ಬಳಿ ಪೊಲೀಸರ ನಿಯೋಜನೆ ಮಾಡಿ ಭದ್ರತೆ ನೀಡಿದ್ದಾರೆ.
ಡಿ-ಬಾಸ್ & ಪವಿತ್ರಾ ಗೌಡಗೆ ರಿಲೀಫ್!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿರುವ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಆದರೆ ಈ ವಿಚಾರದಲ್ಲಿ ಪವಿತ್ರಾಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೆಲ್ಲಾ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಘಟ್ಟ ತಲುಪಿದಂತೆ ಆಗಿದೆ.












Click it and Unblock the Notifications