Darshan Thoogudeepa: ಕಿಚ್ಚ ಸುದೀಪ್ ಸಿನಿಮಾಗೆ ಡಿ-ಬಾಸ್ ದರ್ಶನ್ ತೂಗುದೀಪ್...
ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಒಂದಾನೊಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು. ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಸ್ನೇಹ ಕಂಡು ಎಷ್ಟೋ ಜನ ಹೊಟ್ಟೆ ಉರಿದುಕೊಂಡ ಘಟನೆಗಳು ಕೂಡ ನಡೆದಿದ್ದವು. ಕಿಚ್ಚ ಸುದೀಪ್ ಕೂಡ ದರ್ಶನ್ ತೂಗುದೀಪ್ ಅವರನ್ನ ತುಂಬಾ ಹಚ್ಚಿಕೊಂಡಿದ್ದರು. ಇಂತಹ ಸಮಯದಲ್ಲೇ, ಕೆಲ ವರ್ಷಗಳ ಹಿಂದೆ ಇಬ್ಬರೂ ದೂರವಾಗಿಬಿಟ್ಟರು. ಆದರೆ ಇದೆಲ್ಲ ಮರೆತು ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ....
ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಒಂದಾಗ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವ ಸಮಯ ಈಗ ಹತ್ತಿರ ಆಗುತ್ತಿದೆ ಅಂತಾ ಕಾಣುತ್ತಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ. ಅಂದಹಾಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು 'ಮ್ಯಾಕ್ಸ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಗೆ ರಾಜ್ಯದ ಹಲವೆಡೆ ಸಿನಿಮಾ ಪ್ರದರ್ಶನ ಶುರುವಾಗಿದ್ದು, ಈ ಸಿನಿಮಾ ಅಬ್ಬರ ಕಣ್ತುಂಬಿಕೊಂಡು ಸಂಭ್ರಮಿಸಲು ಕೋಟಿ ಕೋಟಿ ಅಭಿಮಾನಿಗಳು ತಮ್ಮ ತಮ್ಮ ಟಿಕೆಟ್ ಮುಂಚೆಯೇ ಬುಕ್ ಮಾಡಿದ್ದರು.

ಹೀಗೆ ಕೋಟ್ಯಂತರ ಕನ್ನಡಿಗರು ಇಂದು ಸಾಗರದಂತೆ ಹರಿದು ಬಂದು 'ಮ್ಯಾಕ್ಸ್' ಸಿನ್ಮಾ ನೋಡಿ ಸಂಭ್ರಮಿಸಿದ್ದಾರೆ. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಬೆಂಬಲಿಸಿ, ಸಿಕ್ಕಾಪಟ್ಟೆ ಸಪೋರ್ಟ್ ಮಾಡ್ತಿದ್ದಾರೆ! ಇದರ ಜೊತೆಗೆ ಅದ್ಧೂರಿಯಾಗಿ ಸಿನಿಮಾಗೆ ಸಿಕ್ಕಾಪಟ್ಟೆ ಸಪೋರ್ಟ್ ಕೂಡ ಸಿಗುತ್ತಿದೆ. ಅಲ್ಲದೆ ಬೆಳಗ್ಗೆಯಿಂದಲೇ 'ಮ್ಯಾಕ್ಸ್' ಸಿನಿಮಾ ಸಖತ್ ಆಗಿ ಅಬ್ಬರಿಸುತ್ತಿದೆ ಅಂತಿದ್ದಾರೆ ಫ್ಯಾನ್ಸ್.
ಕಿಚ್ಚ ಸಿನಿಮಾಗೆ ಡಿ-ಬಾಸ್ ಫ್ಯಾನ್ಸ್ ಬೆಂಬಲ!
ಹೌದು, ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆಯೇ ಮಾತನಾಡಿದ್ದರು. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗಿನ ಸ್ನೇಹವನ್ನು ಕೂಡ ನೆನಪು ಮಾಡಿಕೊಂಡಿದ್ದರು ಕಿಚ್ಚ ಸುದೀಪ್. ಇದೆಲ್ಲವು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಎದೆಯಲ್ಲಿ ಹೊಸ ವಿಶ್ವಾಸ ಮೂಡುವಂತೆ ಮಾಡಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಬಂದು ಈಗ ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ನೋಡುತ್ತಿದ್ದಾರೆ.
'ವಿಕ್ರಾಂತ್ ರೋಣ' ಬಳಿಕ 2 ವರ್ಷ....
ಥಿಯೇಟರ್‌ಗಳ ಎದುರು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿದ ಅಭಿಮಾನಿಗಳು, ಈ ಮೂಲಕ ತಮ್ಮ ಅಭಿಮಾನ ಏನೆಂದು ಜಗತ್ತಿಗೇ ಮನವರಿಕೆ ಮಾಡಿದರು. ಮತ್ತೊಂದು ಕಡೆ 'ಮ್ಯಾಕ್ಸ್' ಸಿನಿಮಾ ಸೂಪರ್ ಆಗಿದೆ ಅನ್ನೋ ಮಾತು ಕೇಳಿ ಬಂದಿದ್ದು, ಸಿಕ್ಕಾಪಟ್ಟೆ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಹಾಗೇ ಸುದೀಪ್ ಅವರು 'ವಿಕ್ರಾಂತ್ ರೋಣ' ಬಳಿಕ 2 ವರ್ಷದ ಗ್ಯಾಪ್ ತೆಗೆದುಕೊಂಡು ಭರ್ಜರಿಯಾಗಿ ಸ್ಕ್ರೀನ್ ಮೇಲೆ ಎಂಟ್ರಿ ಕೊಟ್ಟಿದ್ದಾರೆ.












Click it and Unblock the Notifications