Darshan Thoogudeepa: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಮನೆಗೆ ಎಸಿಪಿ ಚಂದನ್ ಸೆಕ್ಯೂರಿಟಿ...

ದರ್ಶನ್ ತೂಗುದೀಪ್ ಅವರನ್ನ ಕೋಟಿ ಕೋಟಿ ಅಭಿಮಾನಿಗಳು ಪ್ರೀತಿಸುತ್ತಾರೆ. ಹೀಗಾಗಿಯೇ ದರ್ಶನ್ ತೂಗುದೀಪ್ ಅವರಿಗೆ, ಡಿ-ಬಾಸ್ ಎಂಬ ಬಿರುದು ಕೂಡ ನೀಡಿದ್ದಾರೆ. ಆದರೆ ಇದೇ ಡಿ-ಬಾಸ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ಬಳ್ಳಾರಿ ಜೈಲಿನಲ್ಲಿ ಪರದಾಡಲು ಎಸಿಪಿ ಚಂದನ್ ಅವರ ಖಡಕ್ ತನಿಖೆ ಕಾರಣ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಎಸಿಪಿ ಚಂದನ್ ಬಗ್ಗೆ ದರ್ಶನ್ ತೂಗುದೀಪ್ ಅಭಿಮಾನಿಗಳು ಏನು ಹೇಳುತ್ತಿದ್ದಾರೆ ಅಂದ್ರೆ....

ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಪರದಾಡಲು ಪ್ರಮುಖ ಕಾರಣ ಎಸಿಪಿ ಚಂದನ್ ಅಂತಾ ದರ್ಶನ್ ತೂಗುದೀಪ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ತೂಗುದೀಪ್ ಪಾತ್ರ ಇಲ್ಲ ಅಂದ್ರೂ ಬೇಕು ಅಂತಲೇ ಸುಳ್ಳು ಸುಳ್ಳು ಸಾಕ್ಷ್ಯ ಸೃಷ್ಟಿ ಮಾಡಿ, ದರ್ಶನ್ ತೂಗುದೀಪ್ ಅವರನ್ನ ಈಗ ಜೈಲಿಗೆ ಕಳುಹಿಸಿದ್ದಾರೆ ಎಂಬುದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಆರೋಪ. ಪರಿಸ್ಥಿತಿ ಹೀಗಿದ್ದಾಗಲೇ, ಎಸಿಪಿ ಚಂದನ್ ವಿರುದ್ಧವೂ ದರ್ಶನ್ ತೂಗುದೀಪ್ ಫ್ಯಾನ್ಸ್ ಈಗ ರೊಚ್ಚಿಗೆದ್ದಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಮನೆಗೆ ಎಸಿಪಿ ಚಂದನ್ ಸೆಕ್ಯೂರಿಟಿ...

Darshan Thoogudeepa Fans Are Saying This About The ACP Chandan Now

ದರ್ಶನ್ ತೂಗುದೀಪ್ ಮನೆಗೆ ಎಸಿಪಿ ಚಂದನ್...

ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರು ನಿನ್ನೆ ಜಾಮೀನು ಪಡೆದು ಅದ್ಧೂರಿಯಾಗಿ ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ, ಈ ಮೂಲಕ ಬಳ್ಳಾರಿ ಜೈಲಿನಿಂದ ಬೆಂಗಳೂರಿನ ತನಕ ಹೆಲಿಕಾಪ್ಟರ್ ಮೂಲಕ ದರ್ಶನ್ ತೂಗುದೀಪ್ ಅವರನ್ನ ಕರೆಸಿಕೊಳ್ಳಬೇಕು ಎಂಬ ಆಸೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗಲೇ ನಟ ದರ್ಶನ್ ಅವರ ಜಾಮೀನು ಅಂದ್ರೆ ಬೇಲ್ ಅರ್ಜಿ ರಿಜೆಕ್ಟ್ ಆಗಿ ಭಾರಿ ದೊಡ್ಡ ಆಘಾತ ಎದುರಾಗಿದೆ. ಇದೇ ಸಮಯದಲ್ಲಿ ಎಸಿಪಿ ಚಂದನ್ ಅವರ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು...

ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಎಸಿಪಿ ಚಂದನ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಮನೆಗೆ ಎಸಿಪಿ ಚಂದನ್ ಮುಂದಿನ ದಿನಗಳಲ್ಲಿ ಸೆಕ್ಯೂರಿಟಿ ನಿಡುತ್ತಾರೆ. ಹೀಗೆ ಎಸಿಪಿ ಚಂದನ್ ಅವರನ್ನೇ ನಮ್ಮ ಡಿ-ಬಾಸ್ ಮನೆಗೆ ಸೆಕ್ಯೂರಿಟಿ ಆಗಿ ಕರೆಸುತ್ತೇವೆ, ಎಂಬ ಅಹಂಕಾರದ ಮಾತನ್ನು ಅಭಿಮಾನಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದರ್ಶನ್ ತೂಗುದೀಪ್‌ಗೆ ಜಾಮೀನು ಇಲ್ಲ!

ಈ ರೀತಿ ಎಡಿಟ್ ಮಾಡಿದ ವಿಡಿಯೋಗಳನ್ನ ವೈರಲ್ ಮಾಡಲಾಗುತ್ತಿದೆ. ಹೀಗಿದ್ದಾಗ ಕೆಲವರು ಈ ರೀತಿ ವಿಡಿಯೋ ಸರಿಯಲ್ಲ, ಪೊಲೀಸ್ ಅಧಿಕಾರಿಯನ್ನ ಗೌರವಿಸಿ & ಕಾನೂನಿಗೆ ಕೂಡ ಗೌರವ ನೀಡಿ ಅಂತಾ ದರ್ಶನ್ ಅಭಿಮಾನಿಗಳಿಗೆ ಬುದ್ಧಿ ಹೇಳುತ್ತಿದ್ದಾರೆ. ಹೀಗಾಗಿಯೇ, ಕಿರಿಕ್ ಕೂಡ ಜೋರಾಗುತ್ತಿದೆ. ಮತ್ತೊಂದು ಕಡೆ 57ನೇ ಸಿಟಿ ಸಿವಿಲ್ ಕೋರ್ಟ್‌ ದರ್ಶನ್ ತೂಗುದೀಪ್ ಜಾಮೀನು ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದೆ. ರೇಣುಕಾಸ್ವಾಮಿ ಕೊಲೆಯ ಆರೋಪದ ಅಡಿ ಜೈಲು ಸೇರಿರುವ 06 ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಹೀಗಾಗಿ ದರ್ಶನ್ ಅವರಿಗೆ ಆಘಾತ ಎದುರಾಗಿದೆ.

ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ಫುಲ್ ವೈರಲ್ ಆಗಿತ್ತು. ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+