Darshan Thoogudeepa: ದರ್ಶನ್ ಜೈಲಿನಿಂದ ಹೊರಗೆ ಬರುವ ದಿನ ಹಬ್ಬದ ವಾತಾವರಣ ಸೃಷ್ಟಿಸಲು ಸಕಲ ಸಿದ್ಧತೆ!
ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ 2ನೇ ಆರೋಪಿ ಆಗಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾರೆ. ಕಳೆದ 1 ತಿಂಗಳಿಂದ ನಟ ದರ್ಶನ್ ಸೆಂಟ್ರಲ್ ಜೈಲಲ್ಲಿ ನರಕ ಅನುಭವಿಸುತ್ತಿದ್ದಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂಬ ಮಾತು ದರ್ಶನ್ ಅವರ ಅಭಿಮಾನಿಗಳಲ್ಲಿ ಭರ್ಜರಿ ಉತ್ಸಾಹ ಮೂಡಿಸಿದೆ. ಇದೇ ಕಾರಣಕ್ಕೆ ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರ ಬರುವ ದಿನ ಅದ್ಧೂರಿಯಾಗಿ ಮೆರವಣಿಗೆ ಮಾಡಲು ಸಕಲ ಸಿದ್ಧತೆ ಆರಂಭಿಸಿದ್ದಾರೆ ಫ್ಯಾನ್ಸ್.
ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಈಗಾಗಲೆ ಕಾಲು ಶತಮಾನ ಮುಗಿದು ಹೋಗಿದೆ. ಹತ್ತಾರು ಹಿಟ್ ಸಿನಿಮಾಗಳನ್ನ ನೀಡಿ ಕೋಟ್ಯಂತರ ಕನ್ನಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ನಟ ದರ್ಶನ್. ಅದರಲ್ಲೂ 2023ರ ಡಿಸೆಂಬರ್ ತಿಂಗಳಲ್ಲಿ, ಸಲಾರ್ & ಡಂಕಿ ಎಂಬ 2 ದೊಡ್ಡ ದೊಡ್ಡ ಸಿನಿಮಾಗಳ ಎದುರು ರಿಲೀಸ್ ಆಗಿದ್ದ ನಮ್ಮ ಕನ್ನಡ ಸಿನಿಮಾ 'ಕಾಟೇರ' ಬಾಕ್ಸ್ ಆಫೀಸ್ ಅಖಾಡದಲ್ಲಿ ಮಾತ್ರವಲ್ಲ ಎಲ್ಲಾ ರೀತಿಯಲ್ಲಿ ಕೂಡ ದೊಡ್ಡ ಸಾಧನೆ ಮಾಡಿತ್ತು. ಕಾಟೇರ ಬಳಿಕ ಮತ್ತೆ ಹೊಸ ಯುಗ ಆರಂಭವಾಗಿತ್ತು.

ದರ್ಶನ್ ರಿಲೀಸ್ ಆಗುವ ದಿನ...
ಕಳೆದ ಕೆಲವು ವರ್ಷದಿಂದ ನಟ ದರ್ಶನ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿತ್ತು. ಹೀಗಿದ್ದಾಗಲೇ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹಾಗಾದ್ರೆ ಈಗ ದರ್ಶನ್ ಅವರಿಗೆ ಜಾಮೀನು ಸಿಕ್ಕು ಜೈಲಿಂದ ಹೊರ ಬರುವುದು ಯಾವಾಗ? ಅಭಿಮಾನಿಗಳು ತಮ್ಮ ನಟನನ್ನ ಬರಮಾಡಿಕೊಳ್ಳಲು ಏನೆಲ್ಲಾ ಸಿದ್ಧತೆ ಶುರು ಮಾಡಿದ್ದಾರೆ? ದರ್ಶನ್ ಅವರು ಬಿಡುಗಡೆ ಆಗುವ ದಿನ ಪರಪ್ಪನ ಅಗ್ರಹಾರ ಜೈಲಿನ ಬಳಿ ಏನೆಲ್ಲಾ ಭದ್ರತೆ ಕೈಗೊಳ್ಳಬಹುದು? ಮುಂದೆ ಓದಿ.
ಆಗಸ್ಟ್ ತಿಂಗಳಲ್ಲೇ ನಟ ದರ್ಶನ್ ರಿಲೀಸ್?
ದರ್ಶನ್ ತೂಗುದೀಪ್ ಅರೆಸ್ಟ್ ಆಗಿರುವ ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್‌ನಲ್ಲಿ ಈ ತನಕ ಕೂಡ ಚಾರ್ಜ್‌ಶೀಟ್ ಸಲ್ಲಿಕೆ ಆಗಿಲ್ಲ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಇನ್ನೂ ಕೆಲವು ದಿನಗಳ ಸಮಯ ಇದೆ. ಹೀಗಾಗಿ ಶೀಘ್ರದಲ್ಲೇ ಎಸಿಪಿ ಚಂದನ್ ನೇತೃತ್ವದ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. 2024ರ ಆಗಸ್ಟ್ ತಿಂಗಳಲ್ಲೇ ನಟ ದರ್ಶನ್ ತೂಗುದೀಪ್ ರಿಲೀಸ್ ಆಗುವ ಸಾಧ್ಯತೆ ಇದೆ ಅಂತಿದ್ದಾರೆ ಅವರ ಫ್ಯಾನ್ಸ್.
ಹೀಗೆ ಶೀಘ್ರದಲ್ಲಿಯೇ ತಮ್ಮ ನೆಚ್ಚಿನ ನಟ ಡಿ-ಬಾಸ್ ರಿಲೀಸ್ ಆಗಬಹುದು ಎಂಬ ಕಾರಣಕ್ಕೆ, ದೊಡ್ಡ ಮೆರವಣಿಗೆ ಮಾಡಿಕೊಂಡು ದರ್ಶನ್ ಅವರನ್ನ ಕರೆದುಕೊಂಡು ಹೋಗಲು ತಯಾರಿ ಆರಂಭ ಮಾಡಿದ್ದಾರೆ ದರ್ಶನ್ ಅವರ ಅಭಿಮಾನಿಗಳು. ಈಗಾಗಲೇ ಈ ಕುರಿತಾಗಿ ಮದಗಜ ಮಹೇಶ್ ಕೂಡ ಮುನ್ಸೂಚನೆ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇದು ಭರ್ಜರಿ ಹವಾ ಎಬ್ಬಿಸಿದೆ.
ದರ್ಶನ್‌ಗೆ 1 ವರ್ಷ ಜಾಮೀನು ಸಿಗಲ್ಲ?
ನಟ ದರ್ಶನ್ ತೂಗುದೀಪ್ ಅವರಿಗೆ ಇನ್ನೂ 6 ತಿಂಗಳು ಅಥವಾ 1 ವರ್ಷ ಜಾಮೀನು ಸಿಗಲ್ಲ ಎಂಬ ಮಾತನ್ನು ಕೂಡ ಕೆಲವರು ಹೇಳುತ್ತಿದ್ದಾರೆ. ಕಾನೂನು ತಜ್ಞರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದರ್ಶನ್ ತೂಗುದೀಪ್ ಅವರಿಗೆ ಸದ್ಯಕ್ಕೆ ಜಾಮೀನು ಸಿಗುವುದು ಚಾರ್ಜ್ ಶೀಟ್ ಸಲ್ಲಿಕೆ ಆದ ನಂತರ. ಹೀಗಾಗಿ ಎಸಿಪಿ ಚಂದನ್ ಅವರ ನೇತೃತ್ವದ ತಂಡ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ನಂತರವಷ್ಟೇ ದರ್ಶನ್ ಅವರು ರಿಲೀಸ್ ಆಗುವುದು ಯಾವಾಗ? ಎಂಬ ಪ್ರಶ್ನೆಗೆ ಪಕ್ಕಾ ಉತ್ತರ ಸಿಗಲಿದೆ.
ಜೈಲಿನಿಂದ ಹೊರಗೆ ಬಂದ ನಂತರ...
ದರ್ಶನ್ ಅವರು ಎಂಎಲ್ಎ ಆಗಬೇಕು ಎಂಬುದು ಅವರ ಅಭಿಮಾನಿಗಳ ಆಸೆಯೇ ಆಗಿತ್ತು. ಹೀಗೆ ದರ್ಶನ್ ಅವರು ಜೈಲಿಗೆ ಹೋದ ನಂತರ ಅವರಿಗೆ ಎಂಎಲ್‌ಎ ಆಗುವ ಅವಕಾಶ ಸಿಗೋದೆ ಇಲ್ವಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ಆದರೆ ಇದಕ್ಕೆ ಉತ್ತರ ಕೂಡ ಇದೆ, ಏನಂದ್ರೆ ನಟ ದರ್ಶನ್ ತೂಗುದೀಪ್ ಕೊಲೆ ಪ್ರಕರಣದಲ್ಲಿ ಇನ್ನೂ ಆರೋಪಿ ಮಾತ್ರ ಆಗಿದ್ದಾರೆ. ಇದೇ ಹಿನ್ನೆಲೆ ದರ್ಶನ್ ತೂಗುದೀಪ್ ಅವರ ವಿರುದ್ಧ ಕೊಲೆ ಆರೋಪ ಸಾಬೀತು ಆಗಿಲ್ಲ ಹೀಗಾಗಿಯೇ ದರ್ಶನ್ ಅವರು ಜೈಲಿನಿಂದ ಹೊರಗೆ ಬಂದ ನಂತರ ಚುನಾವಣೆಗೆ ನಿಂತು ನಮ್ಮ ರಾಜ್ಯದಲ್ಲಿ ಶಾಸಕರಾಗಿ ಕೂಡ ಆಯ್ಕೆ ಆಗ್ತಾರೆ ಎಂಬುದು ದರ್ಶನ್ ಅಭಿಮಾನಿಗಳ ನಿರೀಕ್ಷೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸ್ವಲ್ಪ ದಿನ ಕಾದು ನೋಡಬೇಕಿದೆ.
ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ, ಕಮೆಂಟ್ ಏನು?? ಮುಂದೆ ಓದಿ.
ಫೈಟಿಂಗ್ ಬಲು ಜೋರು ಗುರೂ!
'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಪಡೆದ ಧ್ರುವ ಸರ್ಜಾರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಕಾರಣಕ್ಕೆ 'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಮಾರ್ಟಿನ್' ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜಗಳ ಶುರುವಾಗುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications