Darshan Thoogudeepa: ದರ್ಶನ್ ಜೈಲಿಗೆ ಹೋಗದಂತೆ ಬಚಾವ್ ಆಗಲು ಈ ರೀತಿ ಮಾಡಿದ್ದರೆ ಸಾಕಾಗಿತ್ತು!

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುವ ಪರಿಸ್ಥಿತಿ ಬಂದಿದೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ ಇಬ್ಬರೂ ಸೆಂಟ್ರಲ್ ಜೈಲು ಸೇರಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ದರ್ಶನ್ ಅವರು ಜೈಲಿಗೆ ಹೋಗುವ ಸಂದರ್ಭ ತಪ್ಪಿಸಿಕೊಳ್ಳಲು ಏನು ಮಾಡಬೇಕಿತ್ತು? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಸಲಿಗೆ, ನಟ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗದಂತೆ ತಡೆಯಲು ಹೀಗೆ ಮಾಡಬೇಕಿತ್ತಂತೆ!

ರೇಣುಕಾ ಸ್ವಾಮಿ ಎಂಬ ವ್ಯಕ್ತಿಯು ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ & ಕಮೆಂಟ್ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ, ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬಾತನ ಕೊಲೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಅಭಿಮಾನಿಗಳ ಪಾಲಿನ ಪ್ರೀತಿಯ 'ಡಿ-ಬಾಸ್' ಇದೀಗ ಜೈಲಿಗೆ ಹೋಗಿದ್ದಾರೆ ಕೂಡ. ಹೀಗೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ತೂಗುದೀಪ್ ಅವರು A2 ಆರೋಪಿ ಆಗಿದ್ದಾರೆ. ಹಾಗೇ ಜೈಲಲ್ಲಿ ನರಳಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗುವುದನ್ನ ತಪ್ಪಿಸಿಕೊಳ್ಳಲು ಹೀಗೆ ಮಾಡಬಹುದಿತ್ತು ಎಂಬ ಸಲಹೆ ಕೇಳಿಬಂದಿದೆ!

Darshan Thoogudeepa Fans Are Discussing This Matter Now

ದರ್ಶನ್ ಜೈಲಿಗೆ ಹೋಗುವುದನ್ನು...

ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಏನೇ ಮಾಡಿದರೂ ಜನರು ಮೊದಲು ಆ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕವೇ ಹೇಳಿಕೊಳ್ಳುತ್ತಾರೆ. ಹೀಗಿದ್ದಾಗ ಸದ್ಯ ಸೋಷಿಯಲ್ ಮೀಡಿಯಾ ಗಬ್ಬೆದ್ದು ಹೋಗಿದೆ ಎಂಬ ಆರೋಪ ಕೂಡ ಕೇಳಿಬರುತ್ತೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟ ಕಮೆಂಟ್ ಬರುವುದು ಮತ್ತು ಮೆಸೇಜ್ ಬರುವುದು ಕೂಡ ಹೆಚ್ಚಾಗಿದೆ. ಹೀಗಿದ್ದಾಗ ರೇಣುಕಾಸ್ವಾಮಿ ತಪ್ಪು ಮಾಡಿರುವುದು ಗೊತ್ತಾದ ತಕ್ಷಣ ದರ್ಶನ್ ಅವರು ಹೀಗೆ ಮಾಡಬಹುದಿತ್ತು ಅಂತಾ ಅವರ ಅಭಿಮಾನಿಗಳೇ ಈಗ ಸಲಹೆ ನೀಡುತ್ತಿದ್ದಾರೆ. ಹಾಗಾದ್ರೆ ಏನದು ದರ್ಶನ್ ಅವರ ಅಭಿಮಾನಿಗಳ ಸಲಹೆ?

ದರ್ಶನ್ ತೂಗುದೀಪ್ ಬಚಾವ್ ಆಗಬಹುದಿತ್ತು!

ಹೌದು, ರೇಣುಕಾಸ್ವಾಮಿ ವಿಕೃತವಾಗಿ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಸಾಕಾಗಿತ್ತು. ಹೀಗೆ ಮಾಹಿತಿ ನೀಡಿದ್ದರೆ ಖುದ್ದು ಪೊಲೀಸ್ ಸಿಬ್ಬಂದಿ ರೇಣುಕಾ ಸ್ವಾಮಿಯನ್ನ ಕರೆಸಿ, ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಬಗ್ಗೆ ಸೂಕ್ತ ವಿಚಾರಣೆ ನಡೆಸುತ್ತಿದ್ದರು. ಅಲ್ಲದೆ ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡಿ ಪವಿತ್ರಾ ಗೌಡಾ ಬಳಿ ಕ್ಷಮೆ ಕೂಡ ಕೇಳಿಸುತ್ತಿದ್ದರು. ಆದರೆ ದರ್ಶನ್ ತೂಗುದೀಪ್ ಅವರು ಕಾನೂನು ಕೈಗೆತ್ತಿಕೊಂಡು ತಪ್ಪು ಮಾಡಿದರು ಅಂತಾ ಇದೀಗ ಅವರ ಅಭಿಮಾನಿಗಳೇ ಹೇಳುತ್ತಿದ್ದಾರೆ. ಈ ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+