ಲಿಂಗಾಯತನ ಬಾಯಿಗೆ ದನದ ಮಾಂಸ ತುರುಕಿತ್ತಾ ದರ್ಶನ್ ಗ್ಯಾಂಗ್?
ದರ್ಶನ್ ನಾಯ್ಡು ಬಗ್ಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೊಲೆ ಆರೋಪಿ ಆಗಿರುವ ನಟ ದರ್ಶನ್ ನಾಯ್ಡು & ಗ್ಯಾಂಗ್ ವಿರುದ್ಧ ಲಿಂಗಾಯತ ಸಮುದಾಯ ರೊಚ್ಚಿಗೆದ್ದಿದೆ. ಅದರಲ್ಲೂ, ಲಿಂಗಾಯತ ಸಮುದಾಯಕ್ಕೆ ಸೇರಿದ ಹಾಗೂ ಪಕ್ಕಾ ಸಸ್ಯಾಹಾರಿ ಆಗಿದ್ದ ರೇಣುಕಾಸ್ವಾಮಿ ಬಾಯಿ ಅಗಲಿಸಿ ದರ್ಶನ್ ನಾಯ್ಡು & ಗ್ಯಾಂಗ್ ದನದ ಮಾಂಸ ಇರುವ ಬಿರಿಯಾನಿ ತಿನ್ನಿಸಿದೆ ಎನ್ನುವ ಆರೋಪ ಈಗ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ದರ್ಶನ್ ನಾಯ್ಡು ಎಂತಹ ಕ್ರೂರಿ ಎಂಬ ಆರೋಪ ಹೆಚ್ಚಾಗುತ್ತಿದೆ, ಅದರಲ್ಲೂ ದರ್ಶನ್ ನಾಯ್ಡು ಈ ಹಿಂದೆ ಎಸಗಿದ್ದಾರೆ ಎನ್ನಲಾದ ಕ್ರೌರ್ಯದ ಆರೋಪಗಳು ಹೆಚ್ಚಾಗುತ್ತಿವೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ನಾಯ್ಡು ಅಲಿಯಾಸ್ ದರ್ಶನ್ ತೂಗುದೀಪ್ ಮತ್ತು ಪಟಾಲಂ ಈಗ ಕಂಬಿ ಎಣಿಸುತ್ತಿದೆ. ಹೀಗಿದ್ದಾಗಲೇ ಸ್ಫೋಟಕ ಆರೋಪ ಒಂದು ಹೊರಬಿದ್ದಿದೆ, ಅದು ಏನಂದ್ರೆ ಈ ದರ್ಶನ್ ನಾಯ್ಡು ಅಲಿಯಾಸ್ ದರ್ಶನ್ ತೂಗುದೀಪ್ & ಗ್ಯಾಂಗ್ ಲಿಂಗಾಯತ ಸಮುದಾಯಕ್ಕೆ ಸೇರಿದ ಕೊಲೆಯಾದ ರೇಣುಕಾಸ್ವಾಮಿ ಬಾಯಿಗೆ ದನದ ಮಾಂಸದ ಬಿರಿಯಾನಿ ತುರುಕಿ ವಿಕೃತಿ ಮೆರೆದಿದೆ ಎಂಬ ಆರೋಪ ಕೇಳಿಬಂದಿದೆ.

ಬೇಡ ಬೇಡ ಎಂದರೂ ಮಾಂಸ...
ಪೊಲೀಸರ ವಿಚಾರಣೆಯ ಸಮಯದಲ್ಲೇ ದರ್ಶನ್ ನಾಯ್ಡು ಅಲಿಯಾಸ್ ದರ್ಶನ್ ತೂಗುದೀಪ್ & ಗ್ಯಾಂಗ್ ನಡೆಸಿರುವ ವಿಕೃತ ಕೃತ್ಯಗಳ ಬಗ್ಗೆ ಕ್ಷಣಕ್ಕೊಂದು ಆರೋಪ ಕೇಳಿಬರುತ್ತಿದ್ದು. ಈ ಪೈಕಿ, ದರ್ಶನ್ ನಾಯ್ಡು & ಗ್ಯಾಂಗ್ ಮೊದಲಿಗೆ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿ ಕರೆದುಕೊಂಡು ಬಂದು ಆತನಿಗೆ ಚನ್ನಾಗಿ ಹೊಡೆದು ನಿತ್ರಾಣ ಮಾಡಿದೆ. ಆ ನಂತರ ಊಟ ಬೇಕು, ನೀರು ಬೇಕು ಎಂದು ರೇಣುಕಾಸ್ವಾಮಿ ಈ ರಾಕ್ಷಸ ಶ್ವಾನಗಳ ಬಳಿ ಬೇಡಿದ್ದಾರೆ. ಆಗ ಮತ್ತಷ್ಟು ರೊಚ್ಚಿಗೆದ್ದ ದರ್ಶನ್ ನಾಯ್ಡು & ಗ್ಯಾಂಗ್‌ನ ರಾಕ್ಷಸರು, ಸಸ್ಯಾಹಾರ ಸೇವಿಸುವ ರೇಣುಕಾಸ್ವಾಮಿಗೂ ದನದ ಮಾಂಸದ ಬಿರಿಯಾನಿ ತಿನ್ನಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಲಿಂಗಾಯತರಲ್ಲಿ ಅದ್ರಲ್ಲೂ ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸಿದೆ ಎಂಬ ಆರೋಪ ಕೇಳಿಬಂದಿದೆ.
ದರ್ಶನ್ ಅಸಭಿಮಾನಿಗಳ ಆಕ್ರೋಶ!
ಇದೀಗ ನಟ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ ನಂತರ ಸ್ವತಃ ಅವರ ಫ್ಯಾನ್ಸ್ ಒಳಗೆ ಬಿರುಕು ಮೂಡಿದೆ. ಕೆಲವರು ದರ್ಶನ್ ಪರ ನಿಂತಿದ್ದರೆ, ಇನ್ನೂ ಕೆಲವರು ದರ್ಶನ್ ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಸೂಕ್ತ ಶಿಕ್ಷೆ ಆಗಲಿ ಅಂತಿದ್ದಾರೆ. ಹಾಗೇ ಮೃತ ರೇಣುಕಾಸ್ವಾಮಿ ಕುಟುಂಬದ ಪರವಾಗಿ ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ದರ್ಶನ್ & ಗ್ಯಾಂಗ್ ಜೊತೆಯಲ್ಲಿ ಇರುವವರು ಬಹುತೇಕ ಗ್ಯಾಂಗ್ ಸದಸ್ಯರು ಹಿಂದೂಗಳು, ಹೀಗಾಗಿ ಅವರು ಕೂಡ ದನದ ಮಾಂಸ ತಿಂದಿದ್ದರಾ? ಎಂಬ ಕುರಿತು ಗಂಭೀರ ಆರೋಪ ಕೇಳಿಬಂದಿದ್ದು, ಚರ್ಚೆಯು ಶುರುವಾಗಿದೆ. ಈ ಕುರಿತು ಸೂಕ್ತ ತನಿಖೆಗೆ ಹಿಂದೂಗಳು ಆಗ್ರಹಿಸುತ್ತಿದ್ದಾರೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಈ ವಿಕೃತರು ಮಾಡಿರುವ ಕೃತ್ಯವನ್ನು ಕಾನೂನಿನ ಎದುರಲ್ಲಿ ಪೊಲೀಸರು ಪ್ರೂವ್ ಮಾಡಿ ಸರಿಯಾದ ಶಿಕ್ಷೆ ಕೊಡಿಸಬೇಕು. ಇಲ್ಲವಾದರೆ ಈ ರಾಕ್ಷಸ ಶ್ವಾನಗಳು ಮತ್ತೆ ಹೊರಗೆ ಬಂದು ಇನ್ನಷ್ಟು ಜನರ ಜೀವ ತೆಗೆಯುವ ಸಾಧ್ಯತೆ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಈ ಮನುಷ್ಯ ರೂಪಿ ನರರಾಕ್ಷಸ ಸೈಕೋಗಳಿಗೆ ಸರಿಯಾದ ಶಿಕ್ಷೆ ಆಗಲಿ ಅಂತಿದ್ದಾರೆ ಜನ.
ದರ್ಶನ್ ಸಹವಾಸದಿಂದ ತಂದೆ ಕಳೆದುಕೊಂಡ
ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಸ್ಕೇಪ್ ಆಗಿದ್ದ, ಚಿತ್ರದುರ್ಗದ ಅನುಕುಮಾರ್ ಅಲಿಯಾಸ್ ಅನು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೀಗೆ ತನ್ನ ಮಗ ಕೊಲೆ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದ ನಂತರ, ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಆರೋಪ ಮಾಡಲಾಗಿದೆ. ಹೃದಯಾಘಾತದ ಕಾರಣಕ್ಕೆ, ಇದೀಗ ಅನುಕುಮಾರ್ ಅಲಿಯಾಸ್ ಅನು ಅವರ ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಹೀಗಿದ್ದಾಗ ಕೊಲೆ ಆರೋಪಿಗೆ ತನ್ನ ತಂದೆಯ ಮುಖ ಕೊನೆಯ ಬಾರಿಗೆ ನೋಡುವ ಭಾಗ್ಯ ಕೂಡ ಸಿಕ್ಕಿಲ್ಲ. ದರ್ಶನ್ ಸಹವಾಸ ಮಾಡಿದ್ದಕ್ಕೆ ಅನುಕುಮಾರ್ ನರಳುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications