Darshan Thoogudeepa: ಎದೆಯ ಮೇಲೆ ದರ್ಶನ್ ತೂಗುದೀಪ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ!

ದರ್ಶನ್ ತೂಗುದೀಪ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದು, ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಮಾತ್ರ ಅಲ್ಲ ದೇಶದ ಹಲವು ರಾಜ್ಯಗಳಲ್ಲಿ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುವುದು ಫ್ಯಾನ್ಸ್‌ಗೆ ಖುಷಿ ನೀಡುತ್ತದೆ. ಅದೇ ರೀತಿ ಇದೀಗ ನಟ ದರ್ಶನ್ ಅವರ ಮಹಿಳಾ ಅಭಿಮಾನಿ ಒಬ್ಬರು ತಮ್ಮ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ದರ್ಶನ್ ತೂಗುದೀಪ್‌ರ ಪರ ಬೆಂಬಲ ಅದೇ ರೀತಿ ಹೆಚ್ಚಾಗುತ್ತಿದೆ!

ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ಸಿನಿಮಾ ನೋಡಲು ವರ್ಷಗಟ್ಟಲೇ ಫ್ಯಾನ್ಸ್ ಕಾದು ಕುಳಿತುಕೊಳ್ಳುತ್ತಾರೆ. ಸಿನಿಮಾಗಳು ಮಾತ್ರವಲ್ಲ, ಅಭಿಮಾನಿ ಬಳಗ ಪ್ರತಿ ದಿನ & ಪ್ರತಿ ಕ್ಷಣ ದರ್ಶನ್ ಅವರಿಗೆ ತಮ್ಮ ಅಭಿಮಾನ ಮುಟ್ಟಿಸುತ್ತದೆ. ಹೀಗೆಯೇ ಇಲ್ಲೊಬ್ಬರು ಅಭಿಮಾನಿ ದರ್ಶನ್ ಅವರ ಟ್ಯಾಟೋ, ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಬೆಂಬಲ ಸೂಚಿಸಿದ್ದಾರೆ. ಈ ಫೋಟೋ ಈಗ ಫುಲ್ ವೈರಲ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ. ಅದರಲ್ಲೂ ಈಗ ಬಳ್ಳಾರಿ ಜೈಲಿಗೆ ಹೋಗಿರುವ ನಟ ದರ್ಶನ್ ಅವರಿಗೆ ಮತ್ತಷ್ಟು ಬೆಂಬಲ ಕೊಡ್ತಿದ್ದಾರೆ ಫ್ಯಾನ್ಸ್.

Darshan Thoogudeepa Fan Tattoo Is Getting Viral On Social Media

ಡಿ-ಬಾಸ್ ದರ್ಶನ್ ಅವರಿಗೆ ಆಪತ್ತು?

ದರ್ಶನ್ ತೂಗುದೀಪ್ ಅವರನ್ನು ಅವರ ಅಭಿಮಾನಿಗಳು ಡಿ-ಬಾಸ್ ಅಂತಾನೇ ಕರೆಯುತ್ತಿದ್ರು. ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ, ಸಿಗರೇಟ್, ಬಿಯರ್, ಬಿರಿಯಾನಿ ತಿಂತಿದ್ದಾರೆ ಅನ್ನೋ ಆರೋಪವನ್ನ ವಿರೋಧಿಗಳು ಮಾಡಿದ್ದರು. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಫೋಟೋಸ್ ಸೇರಿದಂತೆ ದರ್ಶನ್ ತೂಗುದೀಪ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.

ಕರ್ನಾಟಕದ ಜೈಲುಗಳ ಕುರಿತಾಗಿ ರಾಷ್ಟ್ರೀಯ ನ್ಯೂಸ್ ಚಾನೆಲ್ ಸೇರಿದಂತೆ ದೊಡ್ಡ ದೊಡ್ಡ ಮಾಧ್ಯಮಗಳಲ್ಲಿ ಕೂಡ ಚರ್ಚೆ ಜೋರಾಗಿದೆ. ಹೀಗಿದ್ದಾಗಲೇ ಮಹಿಳಾ ಅಭಿಮಾನಿ ಒಬ್ಬರು ತಮ್ಮ ಎದೆಯ ಮೇಲೆ ದರ್ಶನ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ, ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಕೂಡ ಮಾಡಿ ಶೇರ್ ಮಾಡಿದ್ದಾರೆ. ಇದು ಈಗ ವೈರಲ್ ಆಗ್ತಿದೆ.

ಸಾಲು ಸಾಲು ಸಿನಿಮಾ ರಿಲೀಸ್!

ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+