ಆಗಸ್ಟ್ 14 ಗುರುವಾರ ತಲೆ ಕೂದಲು ಬೋಳಿಸಿ & ಮೀಸೆ ತೆಗೆದು ಪೊಲೀಸರಿಗೆ ಶರಣಾದರಾ ಚಾಲೆಂಜಿಂಗ್... Darshan Thoogudeepa
ತಿನ್ನೋದಕ್ಕೆ ಲಕ್ಷ ಲಕ್ಷ ಖರ್ಚು ಮಾಡುವಷ್ಟು ಹಣ... ಕುಡಿಯೋದಕ್ಕೆ ಲೆಕ್ಕವಿಲ್ಲದಷ್ಟು ಝಣ ಝಣ ಕಾಂಚಾಣ ಸುರಿದು ಎಂಜಾಯ್ ಮಾಡುವ ಗುಣ... ಅದರಲ್ಲೂ ಈ ಎಲ್ಲಾ ಮೋಜು & ಮಸ್ತಿ ಮಾಡಿ ಕೊನೆಗೆ ರಾತ್ರಿ ಹೋಗಿ ವಿಶ್ರಾಂತಿ ಪಡೆಯೋಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ್ದ ರೂಂ... ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ದೊಡ್ಡ ಹೆಸರು ಮಾಡಿದ್ದ ನಟನಿಗೆ ಇದೀಗ ಆಘಾತ & ಉಸಿರು ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಘೋರ ಸಮಯದಲ್ಲೇ ದಿಢೀರ್, ಆಗಸ್ಟ್ 14 ಗುರುವಾರ ತಲೆ ಕೂದಲು ಬೋಳಿಸಿ & ಮೀಸೆ ತೆಗೆದು ಪೊಲೀಸರಿಗೆ ಶರಣಾದರಾ ಚಾಲೆಂಜಿಂಗ್...
ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಿನಿಮಾ ಮೂಲಕವೇ ಪರಿಚಯ ಆಗಿದ್ದವರು. ಕನ್ನಡ ಸಿನಿಮಾ ರಂಗದಲ್ಲಿ ಕಳೆದ 25 ವರ್ಷಗಳಿಂದ ಸಾಲು ಸಾಲು ಸಿನಿಮಾಗಳ ನೀಡುತ್ತಾ ಬಂದಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್, ಇದೀಗ ಮತ್ತೊಂದು ಭರ್ಜರಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡಲು ಬರ್ತಿದ್ದಾರೆ ಅಂತಾ ಅಭಿಮಾನಿಗಳು ನಿರೀಕ್ಷೆಯ ಬೆಟ್ಟವನ್ನೇ ಎದೆಯಲ್ಲಿ ಇದೀಗ ಇಟ್ಟುಕೊಂಡು ಕಾಯುತ್ತಿದ್ದರು. ಆದರೆ ಮಾನ್ಯ ಸುಪ್ರೀಂಕೋರ್ಟ್ ಇಂದು ನೀಡಿದ ತೀರ್ಪಿನ ಬಳಿಕ ದೊಡ್ಡ ಹೃದಯಾಘಾತ ಅಭಿಮಾನಿಗಳಿಗೆ ಎದುರಾಗಿ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, ಆಗಸ್ಟ್ 14 ಗುರುವಾರ ತಲೆ ಕೂದಲು ಬೋಳಿಸಿ & ಮೀಸೆ ತೆಗೆದು ಪೊಲೀಸರಿಗೆ ಶರಣಾದರಾ ಚಾಲೆಂಜಿಂಗ್...

ಆಗಸ್ಟ್ 14 ಗುರುವಾರ ತಲೆ ಕೂದಲು ಬೋಳಿಸಿ...
ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನು ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ, ಪಟ್ಟಣಗೆರೆಯ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಈ ವಿಚಾರ ಕೆಲ ದಿನಗಳ ನಂತರ ಹೊರಗಿನ ಜಗತ್ತಿಗೆ ಗೊತ್ತಾಗಿ ಪೊಲೀಸರು 17 ಆರೋಪಿಗಳ ಅರೆಸ್ಟ್ ಮಾಡಿದ್ದರು. ಹೀಗೆ ಹಲವಾರು ವಿಚಾರಣೆ ಬಳಿಕ ಅಂತಿಮವಾಗಿ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಕೇಸ್ 17 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು.
ತಲೆಯ ಕೂದಲು ಹಾಗೂ ಮೀಸೆ & ಗಡ್ಡ...
ಆದರೆ ಈಗ ಜಾಮೀನು ರದ್ದು ಮಾಡಿ ಎಲ್ಲಾ ಆರೋಪಗಳ ಅರೆಸ್ಟ್ ಮಾಡಲು ಆದೇಶ ನೀಡಲಾಗಿದೆ. ಈ ಸಮಯದಲ್ಲಿ ಪವಿತ್ರಾ ಗೌಡ ಸೇರಿ ರೇಣುಕಾಸ್ವಾಮಿ ಕೊಲೆ ಕೇಸ್ ಉಳಿದ ಆರೋಪಿಗಳು ಲಾಕ್ ಆಗಿದ್ರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತ್ರ ಪೊಲೀಸರ ಕೈಗೆ ಸುಲಭವಾಗಿ ಸಿಗಲೇ ಇಲ್ಲ. ಕೊನೆಗೂ ಪೊಲೀಸರು ಕಾದು ಕಾದು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅರೆಸ್ಟ್ ಮಾಡಿದ್ದಾಗ ಅವರಿಗೆ ಮೀಸೆ & ಗಡ್ಡ ಸೇರಿದಂತೆ ತಲೆಯಲ್ಲಿ ಕೂದಲೇ ಇರಲಿಲ್ಲ ಎನ್ನಲಾಗಿದೆ. ಸೆಂಟ್ರಲ್ ಜೈಲಿಗೆ ಹೋಗುವ ವಿಚಾರ ಗೊತ್ತಾಗಿದ್ದ ಹಿನ್ನೆಲೆಯಲ್ಲಿ ಮೊದಲೇ ತಲೆಯ ಕೂದಲು ಹಾಗೂ ಮೀಸೆ & ಗಡ್ಡ ತೆಗೆಸಿದ್ದರು ಎಂಬ ಮಾತು ಕೇಳಿ ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರ ಬಿದ್ದಿಲ್ಲ, ಹೀಗಾಗಿ ಕಾದು ನೋಡಬೇಕಿದೆ...
200 ಕೋಟಿ ರೂಪಾಯಿ ಹೂಡಿಕೆ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾಗಳಿಗೆ ಅಂತಾನೇ ಕೋಟಿ ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಇದೀಗ ಓಡಾಡುತ್ತಿದೆ. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾನೇ ಸುಮಾರು 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಇದೀಗ ಒಡಾಡುತ್ತಿದೆ. ಆದರೆ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಂಟಕ ಮುಕ್ತರಾಗಿ ಶೀಘ್ರದಲ್ಲೇ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ ಅಂತಾ ಹರಕೆ ಹೊತ್ತು ಬೇಡಿಕೊಳ್ಳುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...
ಸಾಲು ಸಾಲು ಬರೀ ನೋವಿನ ಸುದ್ದಿಗಳೇ...
ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇರುವುದು ಮಾತ್ರವಲ್ಲ, ಹತ್ತಾರು ಸಾವಿರ ವರ್ಷಗಳಿಂದ ಕನ್ನಡ ಭಾಷೆಯನ್ನ ನಮ್ಮ ಕನ್ನಡಿಗರು ಬಳಸುತ್ತಾ ಬಂದಿದ್ದಾರೆ ಅನ್ನೋದು ಭಾಷಾ ತಜ್ಞರ ವಾದ. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಿನಿಮಾ ರಂಗ ಕೂಡ ಬೇಕು, ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಮೂಲಕ ಕನ್ನಡ ಭಾಷೆಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಕನಸು ಕೂಡ ಚಿಗುರೊಡೆದಿತ್ತು. ಆದರೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ತುಂಬಾ ಬರೀ ಸಾವು, ಕೊಲೆ, ಡಿವೋರ್ಸ್... ಹೀಗೆ ಸಾಲು ಸಾಲು ಬರೀ ನೋವಿನ ಸುದ್ದಿಗಳೇ ಬರ್ತಾ ಇವೆ. ಹೀಗಿದ್ದಾಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಇದೀಗ ಜೈಲಿಗೆ ಹೋಗಿರುವುದು ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ...












Click it and Unblock the Notifications