ಡಿಬಾಸ್ ಅಭಿಮಾನಿಗಳಿಗೆ "ಡೆವಿಲ್" ಟೀಂನಿಂದ ಹೊರಬಿತ್ತು ಭರ್ಜರಿ ಗುಡ್‌ನ್ಯೂಸ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan Thoogudeepa) ಅವರ ಅಭಿಮಾನಿಗಳು "ಡೆವಿಲ್" ಸಿನಿಮಾಗಾಗಿ ತುದಿಗಾಗಲಲ್ಲಿ ನಿಂತಿದ್ದಾರೆ. ಇದೀಗ ಚಿತ್ರತಂಡವು ಡಿಬಾಸ್ ಅಭಿಮಾನಿಗಳಿಗಾಗಿ ಬಿಗ್ ಅಪ್ಡೇಟ್ ಹಾಗೂ ಸಿಹಿಸುದ್ದಿ ನೀಡಿದೆ. ಡೆವಿಲ್ ಸಿನಿಮಾದ ಅಪ್ಡೇಟ್ ಕೊಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಡಿಮ್ಯಾಂಡ್ ಮಾಡುತ್ತಿದ್ದರು. ಇದೀಗ ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಲು ಡೆವಿಲ್ ಚಿತ್ರತಂಡ ಮುಂದಾಗಿದೆ. ದಿ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ದಿನಾಂಕ ಕೂಡ ಘೋಷಿಸಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಆಗುವುದಾಗಿ ಹೇಳಿದೆ.
ದರ್ಶನ್ ಅಭಿನಯದ ಮುಂಬರುವ ಕನ್ನಡ ಆಕ್ಷನ್ ಸಿನಿಮಾ 'ಡೆವಿಲ್' ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಇತ್ತೀಚೆಗಷ್ಟೇ ರಾಜಸ್ಥಾನ, ಬೆಂಗಳೂರು ಹಾಗೂ ವಿದೇಶದಲ್ಲೂ ಶೂಟಿಂಗ್ ನಡೆಸಲಾಗಿತ್ತು. ದರ್ಶನ್ ಅವರು ಭರ್ಜರಿ ಬ್ಯುಸಿ ಶೆಡ್ಯೂಲ್ ಹಾಗೂ ತೀವ್ರ ಪ್ರಚಾರ ಇದಕ್ಕೆ ಮತ್ತಷ್ಟು ಚಾಲನೆ ನೀಡಲಿದೆ. ಚಿತ್ರದಲ್ಲಿ ದರ್ಶನ್ ಅವರು "ಕನ್ವರಲಾಲ್" ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಪೋಸ್ಟರ್ ಕೂಡ ರಿಲೀಸ್ ಮಾಡಿತ್ತು.

ಇನ್ನು ಕೆಲವು ಆಕ್ಷನ್ ದೃಶ್ಯಗಳು ಮತ್ತು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುವ ಉದ್ದೇಶದಲ್ಲಿದ್ದಾರೆ. ಈ ಸಂಬಂಧ ದರ್ಶನ್ ದೂರ ಪ್ರಯಾಣಕ್ಕೆ ಹೈಕೋರ್ಟ್ ಅನುಮತಿ ಪಡೆದಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್, ರಾಜಸ್ಥಾನ ಮುಂತಾದ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಆರಂಭವಾಗಿವೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ಹಂತಕ್ಕೆ ಬರಲಿದೆ ಎಂಬ ಸುಳಿವು ನೀಡಿದೆ.
ದರ್ಶನ್ ನಟನೆಯ 'ಡೆವಿಲ್' ಸಿನಿಮಾದ ಚಿತ್ರೀಕರಣ ದರ್ಶನ್ ಅವರು ಜೈಲು ಸೇರಿದ್ದು, ಆರೋಗ್ಯ ವಿಚಾರಗಳ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿತ್ತು. ದರ್ಶನ್ ಜಾಮೀನು ಮೇಲೆ ಬಿಡುಗಡೆಯಾದ ಬಳಿಕ ಚಿತ್ರದ ಚಿತ್ರೀಕರಣ ಮತ್ತೆ ಶುರುವಾಗಿತ್ತು. ಹಾಗಾಗಿ ಶೂಟಿಂಗ್ ವೇಗವಾಗಿ ಸಾಗಿ ಅಂತಿಮ ಹಂತ ತಲುಪಿದೆ.
ಅತ್ತಿಬೆಲೆಯಲ್ಲಿ ಮೋಷನ್ ಪೋಸ್ಟರ್ ರಿಲೀಸ್
ಈ ಬಗ್ಗೆ ಶ್ರೀ ಜೈಮಾತಾ ಕಂಬೈನ್ಸ್ ಮಾಹಿತಿ ಹಂಚಿಕೊಂಡಿದೆ. ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ 'ದಿ ಡೆವಿಲ್' ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19 ಶನಿವಾರದಂದು ಸಂಜೆ 8 ಗಂಟೆಗೆ ನಮ್ಮ ಸೋಷಿಯಲ್ ಮೀಡಿಯಾ ಪೇಜ್ ಹಾಗೂ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್‌ಗಳ ಸಮ್ಮುಖದಲ್ಲೂ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಸಿಹಿಸುದ್ದಿ ನೀಡಿದೆ.












Click it and Unblock the Notifications