Darshan Thoogudeepa: ಬಳ್ಳಾರಿ ಜೈಲಿನಲ್ಲಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನು ನೋವಿಗೆ ಭಯಾನಕ...
ಬಳ್ಳಾರಿ ಜೈಲಿನಲ್ಲಿ ತುಂಬಾ ನೋವು ತಿಂದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ, ಆರೋಗ್ಯ ಕೂಡ ದಿಢೀರ್ ಕೈಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡದೇ ಇದ್ದರೂ, ಅವರನ್ನು ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ ಎಂಬ ಆರೋಪವನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾಡ್ತಿದ್ದಾರೆ. ಹೀಗಿದ್ದಾಗಲೆ, ಬಳ್ಳಾರಿ ಜೈಲಿನಲ್ಲಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನು ನೋವಿಗೆ ಭಯಾನಕ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ದರ್ಶನ್ ತೂಗುದೀಪ್ ಅವರು ದೊಡ್ಡ ಹವಾ ಇಟ್ಟಿದ್ದಾರೆ. ಹೀಗಾಗಿ ದರ್ಶನ್ ಅವರಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗ ಕೂಡ ಇದೆ. ದರ್ಶನ್ ತೂಗುದೀಪ್ ಸಿನಿಮಾ ಅಂದ್ರೆ ಕೋಟಿ ಕೋಟಿ ಜನರು ಕಾಯುತ್ತಾರೆ. ಇದೇ ಕಾರಣಕ್ಕೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳನ್ನ ದೊಡ್ಡ ಬಜೆಟ್‌ನಲ್ಲಿ ತೆಗೆಯುತ್ತಾರೆ, ಆದರೆ ಇದೇ ರೀತಿ ಅದ್ಧೂರಿಯಾಗಿ ಸಿನಿಮಾ ಶೂಟಿಂಗ್ ಮಾಡುವಾಗಲೇ ದರ್ಶನ್ ತೂಗುದೀಪ್ ಅವರ ಜೀವಕ್ಕೆ ಕಂಟಕ ಎದುರಾಗಿತ್ತು.

ಕುದುರೆ ಮೇಲಿಂದ 11 ವರ್ಷಗಳ...
ಹೌದು, 2013ರ ಸಮಯದಲ್ಲಿ ಸಿನಿಮಾ ಶೂಟಿಂಗ್ ಒಂದು ನಡೆಯುವ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಅವರು ಕುದುರೆ ಮೇಲಿಂದ ಜಾರಿ ಬಿದ್ದಿದ್ದರು. ಬೃಂದಾವನ ಸಿನಿಮಾ ಶೂಟಿಂಗ್ ಸಮಯದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಓಡಾಡ್ತಿದೆ. ಹೀಗೆ ಸುಮಾರು 11 ವರ್ಷಗಳ ಹಿಂದೆ ಬಿದ್ದು ನೋವು ಕೂಡ ಮಾಡಿಕೊಂಡಿದ್ದರು ದರ್ಶನ್ ತೂಗುದೀಪ್ ಅವರು. ಅದೇ ನೋವು ಈಗ ಕಾಡುತ್ತಿದ್ದು, ಈ ಕಾರಣಕ್ಕೆ ಇದೀಗ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ ಎಂಬ ಆರೋಪ ಕೇಳಿ ಬಂದಿದೆ.
ಡಿ-ಬಾಸ್.. ಡಿ-ಬಾಸ್.. ಅಂತಿದ್ದಾರೆ ಫ್ಯಾನ್ಸ್!
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಬಿಟ್ಟು ಕೊಡುವುದಿಲ್ಲ. ಯಾಕಂದ್ರೆ ಅಭಿಮಾನಿಗಳಿಗೆ ಡಿ-ಬಾಸ್ ಮೇಲೆ ಪ್ರೀತಿ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಅಭಿಮಾನಿಗಳು ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಜೈಕಾರ ಹಾಕುತ್ತಿದ್ದಾರೆ. ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆದ ನಂತರ ಹೊಸ ಶಕ್ತಿ ರೂಪುಗೊಂಡಂತೆ ಆಗಿದೆ.
ದರ್ಶನ್ ತೂಗುದೀಪ್ ಅವರಿಗೆ ಸರ್ಜರಿ?
ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಗೆ ತುಂಬಾ ಟೆನ್ಷನ್ ಆಗುತ್ತಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರ ಆರೋಗ್ಯ ಕೈಮೀರಿದ್ದು, ಬಿಜಿಎಸ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಹಾಗೇ, ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್ ಮಾಡಿ, ಬೆನ್ನಿಗೆ ಸರ್ಜರಿ ಮಾಡಲಾಗುತ್ತೆ ಎಂಬ ಮಾಹಿತಿ ಸಿಗುತ್ತಿದೆ.
ಡಿ-ಬಾಸ್ ಬೇಗ ಗುಣಮುಖರಾಗಲಿ...
ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.












Click it and Unblock the Notifications