Darshan Thoogudeepa: ಡಿ-ಬಾಸ್ ದರ್ಶನ್ ಜೀವನದಿಂದ ದೂರ ಹೋಗಲು ಪವಿತ್ರಾ ಗೌಡ ಮಹತ್ವದ...
ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದಲ್ಲಿ ರೇಣುಕಾಸ್ವಾಮಿ ಘಟನೆ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ. ಪವಿತ್ರಾ ಗೌಡ ಜೊತೆಗಿನ ಆತ್ಮೀಯ ಗೆಳೆತನವೇ ಈಗಿನ ಪರಿಸ್ಥಿತಿಗೆ ಕಾರಣ ಅನ್ನೋ ಆರೋಪ ಕೂಡ ಮಾಡುತ್ತಿದ್ದಾರೆ ಕೆಲವರು. ಡಿ-ಬಾಸ್ ದರ್ಶನ್ ತೂಗುದೀಪ್ ಸಾಲು ಸಾಲು ಸಂಕಷ್ಟಗಳನ್ನ ಅನುಭವಿಸಿ ಈಗ ತಾನೆ ಒಂದಷ್ಟು ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತಿದ್ದರು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ಜೀವನದಿಂದ ದೂರ ಹೋಗಲು ಪವಿತ್ರಾ ಗೌಡ ಮಹತ್ವದ...
ಡಿ-ಬಾಸ್ ದರ್ಶನ್ ತೂಗುದೀಪ್ ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತಿದ್ದದ್ದು ಪವಿತ್ರಾ ಗೌಡರನ್ನು ಅನ್ನೋದು ಅವರ ವಿರೋಧಿಗಳ ಆರೋಪ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆಯ ನಂತರ ಇಡೀ ಊರಿಗೆ ಇಬ್ಬರ ನಡುವೆ ಎಷ್ಟು ಗಟ್ಟಿಯಾದ ಸ್ನೇಹ ಇತ್ತು ಅನ್ನೋದು ಗೊತ್ತಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಹೋದಾಗ ದೊಡ್ಡ ಸದ್ದು ಮಾಡಿತ್ತು. ಹೀಗೆ ಒಬ್ಬರು ಮತ್ತೊಬ್ಬರ ಮೇಲೆ ಅಪಾರವಾದ ಗಟ್ಟಿ ಸಂಬಂಧ ಇಟ್ಟುಕೊಂಡಿದ್ದರು. ಇಂತಹ ಸಮಯದಲ್ಲಿ ಪವಿತ್ರಾ ಗೌಡ ಬಗ್ಗೆ ಹೊಸ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!

ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್...
ರೇಣುಕಾಸ್ವಾಮಿ ಅಶ್ಲೀಲವಾಗಿ ಕೆಟ್ಟ ಕೆಟ್ಟ ಮೆಸೇಜ್ ಮಾಡುತ್ತಾ, ಪವಿತ್ರಾ ಗೌಡ ಅವರ ಕುರಿತು ಅಶ್ಲೀಲವಾಗಿ ಮಾತನಾಡಿದ್ದ ಅಂತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಅಂತಾ ಅವನ ಮೇಲೆ ಹಲ್ಲೆ ಮಾಡಿ ಮರ್ಮಾಂಗ ಸಿಪ್ಪೆ ಸುಲಿದು ಡಿ-ಬಾಸ್ ದರ್ಶನ್ ತೂಗುದೀಪ್ & ಸ್ನೇಹಿತರು ಕೊಲೆ ಮಾಡಿದ್ದಾರೆಂಬ ಆರೋಪ ಇದೆ. ಹೀಗಿದ್ದಾಗ, ಡಿ-ಬಾಸ್ ದರ್ಶನ್ ಜೀವನದಿಂದ ದೂರ ಹೋಗಲು ಪವಿತ್ರಾ ಗೌಡ ಮಹತ್ವದ...
ಸಂಜಯ್ ಸಿಂಗ್ ಜೊತೆಗೆ ಮೊದಲ ಮದುವೆ
ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಕಳೆದ 10 ವರ್ಷದಿಂದ ಸ್ನೇಹ ಇದೆ. 2014 ರಲ್ಲಿ ದರ್ಶನ್ ತೂಗುದೀಪ್ ಅವರ ಸ್ನೇಹ ಮಾಡುವುದಕ್ಕೂ ಮೊದಲು, ಪವಿತ್ರಾ ಗೌಡಗೆ ಮಾಜಿ ಗಂಡ ಅಂದ್ರೆ ಸಂಜಯ್ ಸಿಂಗ್ ಜೊತೆಗೆ ಮದುವೆ ಆಗಿತ್ತು. ಆದರೆ ಸಂಸಾರದಲ್ಲಿ ಬಿರುಕು ಮೂಡಿದ ಕಾರಣಕ್ಕೆ ಪವಿತ್ರಾ ಗೌಡ & ಸಂಜಯ್ ಸಿಂಗ್ ದೂರವಾಗಿದ್ದರು.
ಹೀಗೆಲ್ಲಾ ಪವಿತ್ರಾ ಗೌಡ ಮೊದಲ ಗಂಡನಿಂದ ದೂರವಾದ ನಂತರ 2014ರ ಸಮಯದಲ್ಲಿ 'ಬುಲ್ ಬುಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಪರಿಚಯ ಆಗಿ ಸ್ನೇಹ ಬೆಳೆಸಿದ್ದರು. ಆದರೆ ರೇಣುಕಾಸ್ವಾಮಿ ಭೀಕರವಾಗಿ ಕೊಲೆಯಾದ ಕೇಸ್ ಡಿ-ಬಾಸ್ ದರ್ಶನ್ ಅವರು ಮತ್ತು ಪವಿತ್ರಾ ಗೌಡ ತಲೆಗೆ ಸುತ್ತಿಕೊಂಡ ನಂತರ ಇಬ್ಬರೂ ದೂರವಾಗಿ ಹೋದರಾ?
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ....
ಹೌದು, ಕೋರ್ಟ್‌ಗೆ ಬಂದಾಗ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಇಬ್ಬರು ಒಬ್ಬರನ್ನು ಮತ್ತೊಬ್ಬರು ಮಾತನಾಡಿಸಿಲ್ಲ ಎನ್ನಲಾಗಿದೆ. ಅದರಲ್ಲೂ ಪವಿತ್ರಾ ಗೌಡ ಇದೇ ಸಮಯದಲ್ಲಿ ಕಣ್ಣೀರು ಹಾಕಿದ್ದಾರೆ ಅಂತಾ ಕೂಡ ಹೇಳಾಗುತ್ತಿದೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಮಾತನಾಡದೆ ಹೋಗಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಹೀಗೆ, ಡಿ-ಬಾಸ್ ದರ್ಶನ್ ಜೀವನದಿಂದ ದೂರ ಹೋಗಲು ಪವಿತ್ರಾ ಗೌಡ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಾಗಿ ಇಬ್ಬರ ನಿರ್ಧಾರದ ಬಗ್ಗೆ ಈ ಸಮಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.












Click it and Unblock the Notifications