Darshan Thoogudeepa: ಸಂಕ್ರಾಂತಿಗೆ ಫೋಸ್ಟು, ಫೋಟೋ ಶೇರ್ ಮಾಡಿಕೊಳ್ಳದ ಪವಿತ್ರಾ ಗೌಡ... ಮುರಿದುಬಿದ್ದ ಪ್ರೇಮ...

ಎಲ್ಲಾ ಹಾಳಾಗಿ ಹೋಯ್ತು... ಒಂದು ಕಡೆ ಬಳ್ಳಾರಿ ಜೈಲಿಗೆ ಕನ್ನಡದ ಸ್ಟಾರ್ ನಟ ಹೋಗುವ ಪರಿಸ್ಥಿತಿ ಎದುರಾಯ್ತು... ಇನ್ನೊಂದು ಕಡೆ ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆಯೂ ನಡೆದು ಹೋಯ್ತು. ಹಿಂಗೆ ಕನ್ನಡ ಸಿನಿಮಾ ಅಭಿಮಾನಿಗಳು ಎಲ್ಲಾ ಕಡೆಯೂ ಚರ್ಚೆ ಮಾಡುತ್ತಿದ್ದಾರೆ & ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಕಿರಿಕ್ ಕೂಡ ಶುರುವಾಗಿದೆ.

ಅಂದಹಾಗೆ, ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ & ಪವಿತ್ರಾ ಗೌಡ ಕುರಿತಾಗಿ ಸೋಷಿಯಲ್ ಮೀಡಿಯದಲ್ಲಿ ಚರ್ಚೆಗಳು ಈಗಲೂ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಈ ವಿಚಾರ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗಿದ್ದಾಗಲೇ, ಸಂಕ್ರಾಂತಿಗೆ ಫೋಸ್ಟು & ಫೋಟೋ ಶೇರ್ ಮಾಡಿಕೊಳ್ಳದ ಪವಿತ್ರಾ ಗೌಡ... ಮುರಿದುಬಿದ್ದ ಪ್ರೇಮ...

Darshan Thoogudeepa And Pavithra Gowda Social Media Update

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಅತ್ಯುತ್ತಮ ಸ್ನೇಹ ಇತ್ತು. ಇಬ್ಬರ ನಡುವೆ ಈ ರೀತಿ ಸ್ನೇಹ & ಸಂಬಂಧ ಮೂಡಿ 10 ವರ್ಷಗಳೇ ಕಳೆದಿವೆ. ಹೀಗಿದ್ದಾಗ 6 ತಿಂಗಳ ಹಿಂದೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿ ಹೆಣವಾಗಿ ಬೆಂಗಳೂರಿನ ರಾಜಕಾಲುವೆ ಪಕ್ಕದಲ್ಲಿ ಸಿಕ್ಕ ನಂತರ ದರ್ಶನ್ ತೂಗುದೀಪ್, ಪವಿತ್ರಾ ಗೌಡ ನಡುವೆ ದೊಡ್ಡ ಕಾಡ್ಗಿಚ್ಚೇ ಹೊತ್ತಿಕೊಂಡಿತ್ತು!

ಮುರಿದುಬಿದ್ದ ಪ್ರೇಮದ ಸಂಕೇತ?

ಹೌದು, ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದ. ಅಲ್ಲದೆ ತನ್ನ ಅಶ್ಲೀಲ ಫೋಟೋ ಕೂಡ ಸೋಷಿಯಲ್ ಮೀಡಿಯಾ ಮೂಲಕ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿ, ಚಿತ್ರದುರ್ಗ ನಗರದಿಂದಲೇ ರೇಣುಕಾಸ್ವಾಮಿಯ ಅಪಹರಣ ಮಾಡಿ ಕರೆದುಕೊಂಡು ಬರಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇಷ್ಟೆಲ್ಲದರ ನಡುವೆ ಇದೀಗ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಅವರ ಬಗ್ಗೆ....

ಡಿ-ಬಾಸ್ ದರ್ಶನ್ ಅವರ ಫೋಟೋಗಳು...

ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುತ್ತಿದ್ದರು. ಈ ರೀತಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕವೇ ಪವಿತ್ರಾ ಗೌಡ ಸಂಚಲನ ಸೃಷ್ಟಿ ಮಾಡುತ್ತಿದ್ದರು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ ಇರುವ ಫೋಟೋಗಳು, ಪಾರ್ಟಿ ಮಾಡುವ ಫೋಟೋಗಳು, ಮಗಳ ಜೊತೆಗೆ ಇರುವ ಫೋಟೋಗಳನ್ನ ಶೇರ್ ಮಾಡಿ ವೈರಲ್ ಆಗುತ್ತಿದ್ದರು ಪವಿತ್ರಾ ಗೌಡ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಜೈಲು ಸೇರಿ ಹೊರಗೆ ಬಂದ ನಂತರ, ಸಂಕ್ರಾಂತಿ ಹಬ್ಬಕ್ಕೂ ಯಾವುದೇ ಪೋಸ್ಟ್ ಹಾಕಿಲ್ಲ ಪವಿತ್ರಾ ಗೌಡ ಅವರು.

ಇದೆಲ್ಲಕ್ಕಿಂತ ಹೆಚ್ಚಾಗಿ, ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆ ಇದ್ದ ಫೋಟೋಗಳನ್ನ ಕೂಡ ಶೇರ್ ಮಾಡುತ್ತಿಲ್ಲ. ಇದೇ ವಿಚಾರವಾಗಿ ಈಗ ಸೋಷಿಯಲ್ ಮೀಡಿಯಾ ಮಂದಿ ಚರ್ಚೆ ಮಾಡುತ್ತಿದ್ದು, ಮುರಿದುಬಿದ್ದ ಪ್ರೇಮದ ಸಂಕೇತ ಇರಬಹುದಾ? ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+