Darshan Thoogudeepa: ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಸಿನಿಮಾಗೆ ಪ್ರಶಾಂತ್ ನೀಲ್ ಡೈರೆಕ್ಷನ್....
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಉಸಿರು ಬಿಗಿಹಿಡಿದು ಕಾಯ್ತಾ ಇದ್ದಾರೆ, ಕನ್ನಡ ಸಿನಿಮಾ ರಂಗದ ಬಾಕ್ಸ್ ಆಫಿಸ್ ಸುಲ್ತಾನ ಅಂತಾ ಬಿರುದು ಪಡೆದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಬೆಳ್ಳಿ ತೆರೆ ಮೇಲೆ ಅಬ್ಬರಿಸುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗಲೇ, ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ಸಿನಿಮಾಗೆ ಪ್ರಶಾಂತ್ ನೀಲ್ ಡೈರೆಕ್ಷನ್....
ಅದೇನ್ ಹೈಟು, ಅದೇನ್ ಬಾಡಿ... ಅಬ್ಬಬ್ಬಾ ಎರಡು ಕಣ್ಣು ಸಾಲೋದಿಲ್ಲ ಬಿಡಿ... ಹಿಂಗೆ ಕಿಚ್ಚ ಸುದೀಪ್ ದರ್ಶನ್ ತೂಗುದೀಪ್ ಇಬ್ಬರೂ ಒಟ್ಟಿಗೆ ನಿಂತರೆ ಅಭಿಮಾನಿಗಳು ಅದನ್ನ ನೋಡಿ ಜೈ ಜೈ ಅಂತಿದ್ದರು. ಕಿಚ್ಚ ಸುದೀಪ್ & ದರ್ಶನ್ ತೂಗುದೀಪ್ ಜೋಡಿಗೆ ಅಭಿಮಾನದ ಭಾವನೆ ತುಂಬಿ ಕೋಟಿ ಕೋಟಿ ಅಭಿಮಾನಿಗಳು ಬೆಂಬಲ ನೀಡುತ್ತಿದ್ದರು. ಆದರೆ, ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಅವರು ದೂರವಾಗಿ ಹಲವು ವರ್ಷವೇ ಕಳೆದಿವೆ. ಹೀಗಿದ್ದಾಗಲೇ, ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ಸಿನ್ಮಾಗೆ ಪ್ರಶಾಂತ್ ನೀಲ್ ಡೈರೆಕ್ಷನ್, ಹೊಂಬಾಳೆ ಸಂಸ್ಥೆ ಹಣ ಹಾಕುತ್ತದೆ....

ಸುದೀಪ್ & ದರ್ಶನ್ ಒಂದೇ ಸಿನಿಮಾದಲ್ಲಿ...
ಹೊಸ ವರ್ಷದ ಮೊದಲ ದಿನವೇ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಹಬ್ಬಿದ್ದು, ಭಾರಿ ಗಮನ ಸೆಳೆದಿದೆ. ಅದು ಏನು ಅಂದ್ರೆ ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ಅವರು ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದನ್ನೂ ಮೀರಿ ಮತ್ತೊಂದು ವಿಚಾರ ಈಗ ಸಂಚಲನ ಸೃಷ್ಟಿ ಮಾಡುತ್ತಿದ್ದು, ಭಾರಿ ಗಮನ ಸೆಳೆದಿದೆ.
ಪ್ರಶಾಂತ್ ನೀಲ್, ಹೊಂಬಾಳೆ ಸಂಸ್ಥೆ...
ಆ ಸುದ್ದಿ ಏನು ಅಂದ್ರೆ, ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದು & ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಲಿದೆ ಎಂಬ ಸುದ್ದಿ ಹಬ್ಬಿದೆ. ಅಭಿಮಾನಿಗಳು ಈ ರೀತಿಯ ಪೋಸ್ಟ್ ಶೇರ್ ಮಾಡಿಕೊಂಡು ಇದೀಗ ಸಂಭ್ರಮಿಸುತ್ತಿದ್ದು, ಎಲ್ಲೆಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ.
ಒಟ್ನಲ್ಲಿ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ, ಆದರೆ ಇಂತಹ ಒಂದು ಸುದ್ದಿ ಸಿಕ್ಕರೆ ಸಾಕು ಅಂತಾ ಕೋಟಿ ಕೋಟಿ ಕನ್ನಡ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಕಡೆಯಲ್ಲಿ ಈ ಸುದ್ದಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಕೂಡ ಸಂಭ್ರಮ ತರಲಿದ್ದು, ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಕೂಡ ಸಂಭ್ರಮ ತರಲಿದೆ. ಹೀಗಾಗಿಯೇ, ಈ ಸುದ್ದಿ ನಿಜವಾಗಲಿ ಅಂತಾ ಕಾಯುತ್ತಿದ್ದಾರೆ ಕೋಟಿ ಕೋಟಿ ಫ್ಯಾನ್ಸ್!












Click it and Unblock the Notifications