Darshan Thoogudeepa: ರೇಣುಕಾಸ್ವಾಮಿ ಸಂಸಾರಕ್ಕೆ 5 ಕೋಟಿ ರೂಪಾಯಿ ಹಣ ಕೊಡಲು ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ ಅವರಿಗೆ ಇದೀಗ ಹೇಗಾದರೂ ಮಾಡಿ ರೇಣುಕಾಸ್ವಾಮಿ ಕೊಲೆ ಕೇಸ್ ಕಂಟಕ ದಾಟಿ, ಬಳ್ಳಾರಿ ಜೈಲಿನಿಂದ ಹೊರಗೆ ಬರಬೇಕು ಅಷ್ಟೇ. ದರ್ಶನ್ ತೂಗುದೀಪ್ ಈ ಸಮಯದಲ್ಲಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದರೆ ಸಾಕು ಅವರ ಜೀವನವು ಅದ್ಧೂರಿಯಾಗಿ ಇರಲಿದೆ. ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದರ್ಶನ್ ತೂಗುದೀಪ್, ಬಾಕ್ಸ್ ಆಫಿಸ್ ಸುಲ್ತಾನ ಆಗಿ ಮೆರೆಯುತ್ತಾರೆ ಎಂಬುದು ಅವರ ಅಭಿಮಾನಿಗಳ ಮಾತಾಗಿದೆ. ಇತಹ ಪರಿಸ್ಥಿತಿಯಲ್ಲಿ, ರೇಣುಕಾಸ್ವಾಮಿ ಸಂಸಾರಕ್ಕೆ 5 ಕೋಟಿ ರೂಪಾಯಿ ಹಣ ಕೊಡಲು ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ, ಅವರ ಆಸ್ತಿ ಇದೀಗ ದರ್ಶನ್ ತೂಗುದೀಪ್ ಅವರ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಹೆಸರಿನಲ್ಲಿದೆ ಎಂಬ ಆರೋಪ ಇದೆ. ಹೀಗಿದ್ದಾಗ ತಮ್ಮ ಆಸ್ತಿ ವಿಚಾರವನ್ನು ದರ್ಶನ್ ತೂಗುದೀಪ್ ಎಲ್ಲೂ ಬಾಯಿಬಿಟ್ಟಿಲ್ಲ. ಆದರೆ ದರ್ಶನ್ ತೂಗುದೀಪ್ ಒಂದು ಸಿನಿಮಾಗೆ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಗಾಂಧಿ ನಗರದಲ್ಲಿ ಓಡಾಡುತ್ತದೆ. ಆದರೆ ದರ್ಶನ್ ತೂಗುದೀಪ್ ತಾವು ಒಂದು ಸಿನಿಮಾಗೆ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುವ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಪರಿಸ್ಥಿತಿ ಹೀಗಿದ್ದಾಗ, ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಸಂಸಾರಕ್ಕೆ 5 ಕೋಟಿ ರೂಪಾಯಿ ಹಣ ಕೊಡಲು...

ರೇಣುಕಾಸ್ವಾಮಿ ಸಂಸಾರಕ್ಕೆ 5 ಕೋಟಿ?
ಪವಿತ್ರಾ ಗೌಡಗೆ ಆಶ್ಲೀಲವಾಗಿ ಮೆಸೇಜ್ ಕಳುಹಿಸಿ, ಕೆಟ್ಟದಾಗಿ ನಡೆದುಕೊಂಡ ಎಂಬ ಕಾರಣ ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ನಾನು ಮಾಡಿಲ್ಲ & ನನಗೂ ರೇಣುಕಾಸ್ವಾಮಿ ಕೊಲೆಗೂ ಸಂಬಂಧ ಇಲ್ಲ ಅಂತಾ ದರ್ಶನ್ ತೂಗುದೀಪ್ ಅವರು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುತ್ತಿದ್ದಂತೆ ರೇಣುಕಾಸ್ವಾಮಿ ಮನೆಗೆ ಹೋಗಿ, ರೇಣುಕಾಸ್ವಾಮಿ ಸಂಸಾರಕ್ಕೆ 5 ಕೋಟಿ ಪರಿಹಾರ ನೀಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಹೋಗಿ...
ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರ ಬರುತ್ತಿದ್ದಂತೆ ಚಿತ್ರದುರ್ಗ ನಗರದ ರೇಣುಕಾಸ್ವಾಮಿ ಮನೆಗೆ ಹೋಗಿ, 5 ಕೋಟಿ ರೂಪಾಯಿ ಪರಿಹಾರ ನೀಡಲಿದ್ದಾರೆ. ಈ ಮೂಲಕ ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮನಿಗೆ ದರ್ಶನ್ ತೂಗುದೀಪ್ ಸಾಂತ್ವನ ಹೇಳುತ್ತಾರೆ ಎಂಬ ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಹರಡಿಸಲಾಗುತ್ತಿದೆ. ಆದರೆ ಈ ಸುದ್ದಿ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ದರ್ಶನ್ ತೂಗುದೀಪ್ ಅವರೇ ಆಗಲಿ, ಅಥವಾ ಅವರ ಕುಟುಂಬದ ಸದಸ್ಯರೇ ಆಗಲಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಸುದ್ದಿ ಭಾರಿ ಕುತೂಹಲ ಕೆರಳಿಸಿದೆ.
ದರ್ಶನ್ ಕುಟುಂಬಸ್ಥರ ವಿಶೇಷ ಪೂಜೆ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜೈಲು ಸೇರಿದ ಕಾರಣಕ್ಕೆ ಇದೀಗ ದರ್ಶನ್ ತೂಗುದೀಪ್ ಅವರ ಕುಟುಂಬಸ್ಥರಿಗೆ ತುಂಬಾ ನೋವಾಗಿದೆ. ಹೀಗಾಗಿ ಕಟುಂಬದ ಸದಸ್ಯರು ಪದೇ ಪದೇ ವಿಶೇಷ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗೇ ನಟರಾದ ದರ್ಶನ್ ತೂಗುದೀಪ್ ಆದಷ್ಟು ಬೇಗ ಬಿಡುಗಡೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಗೆ ಕೂಡ ಈ ಸಮಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.
ಪವಿತ್ರಾ ಗೌಡಗೆ ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಡುವೆ ಸಂಬಂಧ ಇದೀಗ ಸರಿಯಾಗಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ದರು ಎಂಬ ಆರೋಪ ಕೇಳಿಬಂತು. ಪೊಲೀಸರು ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗೆ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆಯುತ್ತಿರುವ ಸಮಯದಲ್ಲೇ, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಸಹವಾಸವೇ ಸಾಕು ಅಂತಾ ಇದೀಗ ನಿರ್ಧರಿಸಿದ್ದಾರೆ. ಹೀಗಾಗಿ ದರ್ಶನ್ ತೂಗುದೀಪ್ ಜೈಲಿಂದ ಹೊರಗೆ ಬಂದ ನಂತರ ಪವಿತ್ರಾ ಗೌಡ ಸಹವಾಸ ಬಿಟ್ಟು ಬಿಡುತ್ತಾರೆ ಎಂಬ ಮಾತು ಕೇಳಿಬಂದಿದೆ.
ವಿಜಯಲಕ್ಷ್ಮೀ & ದರ್ಶನ್ ಲವ್ ಸ್ಟೋರಿ!
ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಅವರು ಸಂಬಂಧಿಕರು. ಹೀಗಿದ್ದಾಗಲೇ ಅವರು ಕೆಲಸ ಮಾಡುವ ಜಾಗದಲ್ಲೇ ಲವ್ ಆಗಿರುತ್ತದೆ. ಆ ನಂತರ ಇಬ್ಬರೂ ಮದುವೆಯನ್ನ ಕೂಡ ಆಗುತ್ತಾರೆ. ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದ ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಅವರ ವೈವಾಹಿಕ ಜೀವನ ಆರಂಭದಲ್ಲಿ ಚನ್ನಾಗಿಯೇ ಇತ್ತು. ಆದ್ರೆ ಬರುತ್ತಾ ಬರುತ್ತಾ ಅವರ ಜೀವನದಲ್ಲಿ ಬಿರುಗಾಳಿ ಎದ್ದಿತ್ತು.
ಹೀಗೆ ನೋಡ ನೋಡುತ್ತಲೇ, ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಜಗಳ ಆಡಲು ಶುರು ಮಾಡಿಬಿಟ್ಟರು. ಮತ್ತೆ ಈ ಜಗಳವೇ ಕೊನೆಗೆ ದರ್ಶನ್ ತೂಗುದೀಪ್ ಅವರನ್ನ 2011 ರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವಂತೆ ಮಾಡಿಬಿಟ್ಟಿತ್ತು. ತಮ್ಮ ಸ್ವಂತ ಹೆಂಡತಿ ವಿಜಲಕ್ಷ್ಮೀ ಮೇಲೆ ದರ್ಶನ್ ತೂಗುದೀಪ್ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕೊನೆಗೆ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ಪರದಾಡಿಬಿಟ್ಟರು ದರ್ಶನ್ ತೂಗುದೀಪ್.












Click it and Unblock the Notifications