Darshan Thoogudeepa: ದರ್ಶನ್ ಬಗ್ಗೆ ಅನಂತ್ ನಾಗ್ ಶಾಕಿಂಗ್ ಹೇಳಿಕೆ

ದರ್ಶನ್ ತೂಗುದೀಪ್ ಅವರು ಜೈಲಿನಿಂದ ಹೊರಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಅನೇಕ ಆಪ್ತರು ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದಾರೆ. ಇನ್ನೂ ಕೆಲವರು ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ದರ್ಶನ್ ಅವರ ಬಗ್ಗೆ ಕೇಳಿದ್ದಕ್ಕೆ ಕನ್ನಡದ ಹಿರಿಯ ನಟ ಅನಂತ್‌ ನಾಗ್ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

''ದರ್ಶನ್ ಅವರಿಗಿಂತ ಕೆಟ್ಟದಾಗಿನ ಘಟನೆಗಳು ಜಗತ್ತಿನಲ್ಲಿ ನಡೆಯುತ್ತವೆ. ಸಾವಿರಾರು ಪಟ್ಟು ಕೆಟ್ಟದಾದ ಘಟನೆಗಳು ನಡೆದಿವೆ ನಡೆಯುತ್ತಲೇ ಇವೆ. ಸಿನಿಮಾ ನಟನಿಂದ ಆದ ಘಟನೆ ಆಗಿದ್ದರಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು. ಮಾದ್ಯಮದಲ್ಲಿ ಹೆಚ್ಚು ಪ್ರಸಾರ ಮಾಡುತ್ತಿರಬಹುದು. ಆದರೆ ಇದರಿಂದ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ? ಜಗತ್ತಿನಲ್ಲಿ ಯಾವ ಸುದ್ದಿನೇ ಇಲ್ಲ ಎಂಬಂತೆ ದಿನ ನಿತ್ಯ ಅದೇ ಘಟನೆ ತೋರಿಸುತ್ತಿದ್ದರೆ ಹೇಗೆ? ಇದರಿಂದ ಪಬ್ಲಿಸಿಟಿ ಸಿಗಬಹುದು ಅಷ್ಟೇ ಜನರ ಮೇಲೆ ಇದರ ಪರಿಣಾಮ ಏನು?'' ಎಂದು ನಟ ಅನಂತ್‌ ನಾಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Darshan Thoogudeepa Ananth Nag gave shocking statement about Darshan

''ಸಿನಿಮಾ ನಟ ಆಗಿದ್ದರಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು ಬಿಟ್ಟರೆ ಜನರ ಮನಸ್ಸು ಹಾಳಾಗಿ ಹೋಗುತ್ತಿದೆ. ಈ ಸುದ್ದಿಯಿಂದ ಜನ ಪ್ರಭಾವಿತರಾಗಿ ಏನಾದ್ರೂ ಒಳ್ಳೆಯದನ್ನು ಕಲಿಯುತ್ತಾರಾ? ಖಂಡಿತ ಇಲ್ಲ. ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಸುದ್ದಿಗಳನ್ನು ಪದೇ ಪದೇ ತೋರಿಸಬಾರದು'' ಎಂದು ಅವರು ಹೇಳಿದ್ದಾರೆ.

ದರ್ಶನ್ ಜೈಲಿಗೆ ಹೋದಾಗಿನಿಂದ ಅವರ ಬಗ್ಗೆ ಸಿನಿ ತಾರೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನೆದಿದ್ದಾರೆ. ದರ್ಶನ್ ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನೆದು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ಕೂಡ ವಿಚಾರಿಸಿ ಬಂದಿದ್ದಾರೆ.

ಅಲ್ಲದೆ ದರ್ಶನ್ ಬಿಡುಗಡೆಗೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ದರ್ಶನ್ ವಿರುದ್ಧ ಸಿಗುತ್ತಿರುವ ಸಾಕ್ಷ್ಯಗಳು ಅವರ ಕಾನೂನು ಕುಣಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಆದರೆ ದರ್ಶನ್ ಕುಟುಂಬಸ್ಥರು ಮಾತ್ರ ದರ್ಶನ್ ಅವರನ್ನು ಬಿಡಿಸಿಕೊಂಡು ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

Darshan Thoogudeepa Ananth Nag gave shocking statement about Darshan

ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿತ್ಯ ಕೋರ್ಟು ಕಚೇರಿಗೆ ಅಲೆದಾಡುತ್ತ ಗಂಡನ ದರ್ಶನಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೂ ಕೂಡ ದರ್ಶನ್ ಬಿಡುಗಡೆ ಅಷ್ಟೊಂದು ಸುಲಭವಿಲ್ಲ. ಇತ್ತ ದರ್ಶನ್ ಆರೋಗ್ಯವೂ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಅವರಿಗೆ ಜೈಲೂಟ ಹೊಂದಾಣಿಕೆಯಾಗುತ್ತಿಲ್ಲ.

ಹೀಗಾಗಿ ಅವರ ತೂಕ ಹತ್ತು ಕೆಜಿ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅವರು ಮನೆ ಊಟ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ನ್ಯಾಯಾಧೀಶರು ಒಪ್ಪಿಗೆ ನೀಡಿಲ್ಲ. ಹೀಗಾಗಿ ದರ್ಶನ್‌ ಅವರಿಗೆ ಜೈಲೂಟ ಅನಿವಾರ್ಯವಾಗಿ ಹೋಗಿದೆ. ಇದರಿಂದಾಗಿ ದರ್ಶನ್ ಆರೋಗ್ಯದ ಬಗ್ಗೆ ಕುಟುಂಬಸ್ಥರಿಗೆ ಆತಂಕ ಶುರುವಾಗಿದೆ.

200 ಸಾಕ್ಷ್ಯಗಳನ್ನು ಕಲೆ ಹಾಕಿದ ಪೊಲೀಸರು

ದರ್ಶನ್‌ ವಿರುದ್ಧ ಪೊಲೀಸರು 200 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲದೆ ಸಾಕ್ಷ್ಯಗಳು ಒಂದಕ್ಕೊಂದು ಪೂರಕವಾಗಿರುವಂತೆ ಹೊಂದಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಪೊಲೀಸರು ಮಾಡುತ್ತಿದ್ದು ಸಾಕ್ಷ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸಿಸಿಟಿವಿ ದೃಶ್ಯಗಳು ಬಲವಾದ ಸಾಕ್ಷ್ಯಗಳಾಗಿವೆ. ಒಟ್ಟಿನಲ್ಲಿ ದರ್ಶನ್ ಜೈಲುವಾಸ ಈಗಲೇ ಮುಗಿಯುವಂತೆ ಕಾಣಿಸುತ್ತಿಲ್ಲ.

ಸೆಲೆಬ್ರಿಟಿಗಾಗಿ ಜೈಲು ರೂಲ್ಸ್ ಬ್ರೇಕ್!

ದರ್ಶನ್‌ಗಾಗಿ ಜೈಲು ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ ಪೊಲೀಸರು ಎನ್ನುವ ಮಾಹಿತಿ ಲಭ್ಯವಾಗಿದೆ. ಜೈಲು ಸಿಬ್ಬಂದಿ 45 ದಿನದಲ್ಲಿ 30 ಜನ ದರ್ಶನ್ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ವಾರಕ್ಕೆ ಎರಡು ಬಾರಿ ಐದು ಮಂದಿ ಭೇಟಿ ನೀಡಬಹುದು. ಅಗತ್ಯ ಬಿದ್ದಲ್ಲಿ ಜೈಲಾಧಿಕಾರಿಗಳ ಅನುಮತಿ ಅಗತ್ಯ ಇರುತ್ತದೆ.

ಆದರೆ ಇಲ್ಲಿ ಕೇವಲ 45 ದಿನದಲ್ಲಿ 30 ಜನ ಭೇಟಿಗೆ ಅವಕಾಶ ನೀಡಲಾಗಿದೆ. ಒಬ್ಬೊಬ್ಬರೇ ಪ್ರತಿನಿತ್ಯ ಭೇಟಿಗೆ ಅವಕಾಶವಿಲ್ಲ. ಸ್ನೇಹಿತರಿಗೆ, ಕುಟುಂಬಸ್ಥರಿಗೆ, ವಕೀಲರಿಗೆ ವಾರದಲ್ಲಿ ಎರಡು ದಿನ ಮಾತ್ರ ಅವಕಾಶ ನೀಡಲಾಗುತ್ತದೆ. ಹಾಗಾದರೆ ದರ್ಶನ್‌ ಅವರಿಗೆ ಒಂದು ಬೇರೆ ಇನ್ನಿತರ ಕೈದಿಗಳಿಗೆ ಒಂದು ರೂಲ್ಸಾ ಅನ್ನೋ ಪ್ರಶ್ನೆ ಈಗ ಮೂಡಿದೆ. ದರ್ಶನ್ ನೋಡೋದಕ್ಕೆ ಅಂತ ಕೇವಲ 45 ದಿನದಲ್ಲಿ 30 ಜನ ಜೈಲು ಒಳಗೆ ಬಿಡಲಾಗಿದೆ. ಅಂದರೆ ದರ್ಶನ್ ಗಾಗಿ ಪೊಲೀಸರು ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಸೆಲೆಬ್ರಿಟಿ ಆದ್ದರಿಂದ ಜೈಲು ರೂಲ್ಸ್ ಬ್ರೇಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+