Darshan Thoogudeepa: ದರ್ಶನ್ ವಿರುದ್ಧ ಮಹತ್ವದ ಸಾಕ್ಷಿ ಪತ್ತೆ: ಹೇಗಿತ್ತು ಇದರ ಆಪರೇಷನ್?
ಬೆಂಗಳೂರು ಆಗಸ್ಟ್ 4: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗದೀಪ ಬೇರೆಯವರ ಹೆಸರಿನ ಸಿಮ್ ಬಳಸಿದ್ದು ಯಾಕೆ ಎನ್ನುವ ಮಾಹಿತಿಯನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಸ್ಥಳ ಮಹಜರು, ಸಿಸಿಟಿವಿ ಹಾಗೂ ಎಲ್ಲಾ ಆರೋಪಿಗಳ ಫೋನ್‌ಗಳನ್ನು ಪೋಲಿಸರು ಚೆಕ್ ಮಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸ್ವಂತ ಸಿಮ್ ಬದಲು ಬೇರೊಂದು ಹೆಸರಿನಲ್ಲಿ ಸಿಮ್ ಬಳಕೆ ಮಾಡಿದ್ದು ಯಾಕೆ? ಈ ಸಿಮ್ ಯಾರದ್ದು ಎನ್ನುವುದನ್ನು ತಿಳಿದುಕೊಳ್ಳುವುದು ಮಾತ್ರ ಬಾಕಿ ಇದೆ.
ಇದರ ಪತ್ತೆ ಕಾರ್ಯದಲ್ಲಿರುವ ಪೊಲೀಸರು ಸಿಮ್ ಮೂಲ ಹುಡುಕುತ್ತಾ ಹೊರಟಿದ್ದಾರೆ. ಸಿಮ್ ಕೊಟ್ಟ ದರ್ಶನ್ ಸ್ನೇಹಿತನ ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಬಳಸಿದ್ದ ಬೇರೊಂದು ಹೆಸರಿನ ಸಿಮ್ ಕಾರ್ಡ್ ಖರೀದಿಸಿ ತಂದು ಕೊಟ್ಟಿದ್ದ ಸ್ನೇಹಿತನ ವಿಚಾರಣೆಯನ್ನು ನಡೆಸಿರುವ ಪೊಲೀರು 164 ಹೇಳಿಕೆಯನ್ನು ದಾಖಲಿಸಿದ್ದಾರೆ. ಇದು ದರ್ಶನ್ ವಿರುದ್ಧದ ಮಹತ್ವದ ಸಾಕ್ಷಿಯೂ ಆಗಲಿದೆ.

ದರ್ಶನ್ ಸ್ನೇಹಿತನಿಂದ ಯಾವ ಉದ್ದೇಶಕ್ಕಾಗಿ ಸಿಮ್ ಖರೀದಿಸಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಇನ್ನೂ ಸಿಮ್ ಕಾರ್ಡ್ ಬೇರೆಯವರ ಹೆಸರಿನಲ್ಲಿ ಇದ್ದರೆ ಪೊಲೀಸರು ಹೇಗೆ ಟ್ರೇಸ್ ಮಾಡ್ತಾರೆ ಗೊತ್ತಾ? ಇದನ್ನು ತಿಳಿದುಕೊಳ್ಳೋಣ.
ಹೇಗಿರುತ್ತೆ ಆಪರೇಷನ್?
* ಮೊದಲು ನಂಬರ್ ಯಾವ ಕಂಪನಿಯದ್ದು ಅಂತ ಚೆಕ್ ಮಾಡಲಾಗುತ್ತೆ
* ಬಳಿಕ ಆ ನಂಬರ್ ಯಾರ ಹೆಸರಲ್ಲಿ ಇದೆ ಅಂತ ಕಂಪನಿಗೆ ರಿಕ್ವಿಜೇಷನ್ ಕೊಡುವ ಪ್ರೊಸೆಸ್ ನಡೆಯುತ್ತದೆ
* ನಂತರ ಮೊಬೈಲ್ ಕಂಪನಿಯಿಂದ ಸಿಮ್ ಕಾರ್ಡ್ ಮಾಲೀಕನ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ
* ಬಳಿಕ ಆ ವ್ಯಕ್ತಿಯ ಹೆಸರಿನಲ್ಲಿ ಬೇರೆ ಯಾವ ಸಿಮ್ ಇದೆ ಅಂತ ಚೆಕ್ ಮಾಡಲಾಗುತ್ತೆ
* ಇದಾದ ನಂತರ ಆ ವ್ಯಕ್ತಿ ಪೊಲೀಸರಿಗೆ ಸಿಕ್ಕರೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗುತ್ತದೆ
* ಸಿಕ್ಕಿಲ್ಲ ಅಂದರೆ ಟವರ್ ಲೊಕೇಷನ್ ಮೂಲಕ ಆತನನ್ನು ಪತ್ತೆ ಮಾಡಲಾಗುತ್ತದೆ.
ಹೀಗೆ ದರ್ಶನ್‌ಗೆ ನೀಡಲು ಸಿಮ್ ಖರೀದಿ ಮಾಡಿದ್ದ ವ್ಯಕ್ತಿ ಕೂಡ ಮತ್ತೊಂದು ಸಿಮ್ ಖರೀದಿ ಮಾಡಿದ್ದನು. ಇದರಿಂದ ಆತನನ್ನು ಪತ್ತೆ ಮಾಡಲು ಸುಲಭವಾಗಿತ್ತು. ಈಗ ಆತನಿಂದ ಹೇಳಿಕೆಯನ್ನು ಪಡೆಯಲಾಗಿದೆ. ಆದರೆ ಆತ ಯಾರು ಎನ್ನುವ ಸುಳಿವನ್ನು ಮಾತ್ರ ಪೊಲೀಸರು ಬಿಟ್ಟುಕೊಟ್ಟಿಲ್ಲ.

ಇನ್ನೂ ದರ್ಶನ್ ಕೇಸ್‌ನಲ್ಲಿ ಸಾಕ್ಷಿಗಳನ್ನು ಟೈಟ್ ಮಾಡಲು ಪೊಲೀಸರು ಯೋಚನೆ ಮಾಡುತ್ತಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಗಳ ಜೊತೆಗೆ ಆರೋಪಿಗಳ ಫೋಟೋ ಮ್ಯಾಚಿಂಗ್ ಮಾಡಲಾಗುತ್ತಿದೆ. ಕೆಲ ಸಿಸಿಟಿವಿ ಕ್ಯಾಮಾರಾದಲ್ಲಿ ರಾತ್ರಿ ವಿಡಿಯೋ ಸಿಕ್ಕಿದ್ದು ದೃಶ್ಯ ಸ್ಪಷ್ಟವಾಗಿಲ್ಲ. ಆರೋಪಿಗಳ ಫೋಟೋ ಮ್ಯಾಚ್ ಮಾಡಿ ಕಂಪ್ಯಾರಿಸನ್ ಮಾಡಿದ ಬಳಿಕ ಪ್ರಮಾಣ ಪತ್ರ ಪಡೆಯಲಾಗುತ್ತದೆ.
ಎವಿಡೆನ್ಸ್ ಆಕ್ಟ್ 65 ಅಡಿಯಲ್ಲಿ ಪ್ರಮಾಣ ಪತ್ರ ಪಡೆದು ಇದು ಎಡಿಟೆಡ್ ಅಲ್ಲ ಕಂಪ್ಯಾರಿಸನ್ ಇಮೇಜ್ ಅಂತ ನೀಡುತ್ತಾರೆ. ಈ ಮೂಲಕ ಸಿಸಿಟಿವಿ ದೃಶ್ಯದಲ್ಲಿ ಇರೋದು ಇದೇ ವ್ಯಕ್ತಿ ಅಂತ ಖಾತರಿಯಾಗುತ್ತದೆ. ಈ ಮೂಲಕ ದರ್ಶನ್ ವಿರುದ್ಧ ಸಾಕ್ಷಿಗಳನ್ನು ಟೈಟ್ ಮಾಡೋ ಯೋಜನೆಯಲ್ಲಿ ಪೊಲೀಸರು ಇದ್ದಾರೆ.
ಒಟ್ಟಿನಲ್ಲಿ ದರ್ಶನ್ ವಿರುದ್ಧದ ಸಾಕ್ಷಿಗಳನ್ನು ಪೊಲೀಸರು ಎಲ್ಲೂ ಕೂಡ ಬಿಟ್ಟು ಕೊಟ್ಟಿಲ್ಲ. ದರ್ಶನ್ ವಿರುದ್ಧದ ಸಾಕ್ಷಿಗಳನ್ನು ಸಂಗ್ರಹ ಮಾಡುವಲ್ಲಿ ಸಾಕಷ್ಟು ಗುಪ್ತತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಬಗೆದಷ್ಟು ಸಿಗುತ್ತಿರುವ ಮಾಹಿತಿಗಳನ್ನು ಕೆಲ ಹಾಕಿ ದರ್ಶನ್ ಜೈಲುವಾಸವನ್ನು ಪೊಲೀಸರು ಗಟ್ಟಿಗೊಳಿಸುತ್ತಿದ್ದಾರೆ. ಹೀಗಾಗಿ ದರ್ಶನ್ ಅವರಿಗೆ ಇನ್ನಷ್ಟು ಕಷ್ಟದ ಸಮಯಗಳು ಎದುರಾಗುವ ಸಾಧ್ಯತೆ ಇದೆ.












Click it and Unblock the Notifications