Darshan Thoogudeepa: ಟೀಸರ್ ಬಿಡುಗಡೆಗೆ ಮುನ್ನ ಬದಲಾಯ್ತು 'ಡೆವಿಲ್' ಟೈಟಲ್!

ಫೆಬ್ರವರಿ 16ರಂದು ನಟ ದರ್ಶನ್ ತೂಗುದೀಪ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ ಎಂದು ನಟ ದರ್ಶನ್‌ ಈಗಾಗಲೇ ಹೇಳಿದ್ದು ಅಭಿಮಾನಿಗಳಿಗೆ ಸಿಗಲು ಆಗಲ್ಲ ಎಂದು ಕ್ಷಮೆ ಕೂಡ ಕೇಳಿದ್ದಾರೆ. ಆದರೂ ರಾಜ್ಯಾದ್ಯಂತ ಅವರ ಅಭಿಮಾನಿಗಳು ಡಿಬಾಸ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೇ ಅವರ 'ಡೆವಿಲ್' ಸಿನಿಮಾ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಆದರೆ ಟೀಸರ್ ಬಿಡುಗಡೆಗೆ ಮುನ್ನವೇ 'ಡೆವಿಲ್' ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆಯಾಗಿದೆ. ಸಿನಿಮಾ ಸೆಟ್ಟೇರಿದಾಗ 'ಡೆವಿಲ್ ದಿ ಹೀರೋ' ಅಂತಿದ್ದ ಟೈಟಲ್ ಈಗ 'ದಿ ಡೆವಿಲ್' ಎಂದು ಬದಲಾವಣೆಯಾಗಿದೆ. ದಿಢೀರ್ ಎಂದು ಟೈಟಲ್‌ನಲ್ಲಿ ಮಾರ್ಪಾಡು ಮಾಡಿದ್ಯಾಕೆ ಎಂದು ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ.

darshan thoogudeep new devil movie title change ahead of teaser release

ಟೀಸರ್ ಬಗ್ಗೆ ಹೆಚ್ಚಿದ ಕುತೂಹಲ

ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ದರ್ಶನ್‌ ತೂಗುದೀಪ ಅವರ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರ ಡೆವಿಲ್ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ. ಡೆವಿಲ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಜೈಲುಪಾಲಾಗಿದ್ದರು. ಆರು ತಿಂಗಳು ಜೈಲಿನಲ್ಲಿದ್ದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ ಸದ್ಯ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಶೂಟಿಂಗ್‌ ಆರಂಭಿಸುವ ಸೂಚನೆ ಕೊಟ್ಟಿದ್ದಾರೆ. ಬೆನ್ನು ನೋವಿಗೆ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದು ಸರ್ಜರಿ ಅನಿವಾರ್ಯ ಎಂದು ಹೇಳಿದ್ದಾರೆ. ನಿರ್ಮಾಪಕರು ತುಂಬಾ ಕಾದಿದ್ದಾರೆ ಎಲ್ಲಿಯವರೆಗೆ ಆಗುತ್ತೋ ಅಲ್ಲಿಯವರೆಗೆ ಆಪರೇಷನ್ ಮುಂದೆ ಹಾಕುತ್ತೇನೆ ಎಂದು ದರ್ಶನ್ ಹೇಳಿದ್ದು, ಇಂಜೆಕ್ಷನ್ ಪಡೆದು ಶೂಟಿಂಗ್ ಮಾಡಲಿದ್ದಾರೆ.

ಮಿಲನ, ರಿಷಿ, ವಂಶಿ, ತಾರಕ್‌ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಪ್ರಕಾಶ್ 'ದಿ ಡೆವಿಲ್‌' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತವಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ದಿ ಡೆವಿಲ್ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ದರ್ಶನ್‌ರನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ವರ್ಷಾಂತ್ಯದಲ್ಲೇ ಡೆವಿಲ್‌ ತೆರೆಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+