‘ಕಾಟೇರ’ ಗಳಿಸಿದ್ದು ಒಟ್ಟು 59 ಕೋಟಿ ರೂಪಾಯಿ, ಎಷ್ಟು ದಿನಕ್ಕೆ ಗೊತ್ತೆ?

ಕನ್ನಡಿಗರ 'ಕಾಟೇರ' ಸಿನಿಮಾ ಅಬ್ಬರದ ಎದುರು ಪ್ರೇಕ್ಷಕರು ಶರಣಾಗಿ ಹೋಗಿದ್ದಾರೆ. ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಕರಿಯರ್‌ಗೆ ಮತ್ತೊಂದು ದೊಡ್ಡ ಮುಕುಟ ಮಣಿ ಅನ್ನೋ ಮಾತು ಕೇಳಿಬರುತ್ತಿವೆ.

ಹೀಗಿದ್ದಾಗಲೇ ತನ್ನ ಬಾಕ್ಸ್ ಆಫಿಸ್ ಓಟ ಕೂಡ ಮುಂದುವರಿಸಿರುವ 'ಕಾಟೇರ' ಸಿನಿಮಾ ಕೋಟಿ, ಕೋಟಿ ಗಳಿಸಿದೆ. ಈವರೆಗೆ ಒಟ್ಟು 59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ 'ಕಾಟೇರ', ಎಷ್ಟು ದಿನಕ್ಕೆ ಗೊತ್ತೆ?

Darshan Movie Kaatera Collected This Much Of Amount In The Box Office

ಹೌದು, ಕಾಟೇರ ಸಿನಿಮಾ ರಿಲೀಸ್ ಆದ ದಿನವೇ ಅಭಿಮಾನಿಗಳು ಫಿಕ್ಸ್ ಆಗಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಕ್ಕಾ ಅಂತಾ. ಕೋಟಿ, ಕೋಟಿ ದರ್ಶನ್ ಅವರ ಅಭಿಮಾನಿಗಳು ಇಟ್ಟಿದ್ದ ಈ ನಿರೀಕ್ಷೆ ಹುಸಿಯಾಗಿಲ್ಲ.

ಭರ್ಜರಿಯಾಗಿ ಗೆದ್ದು ಬೀಗಿದೆ ಕನ್ನಡಿಗರ 'ಕಾಟೇರ'. ಅದರಲ್ಲೂ ಮೊದಲ ಎರಡು ದಿನ, 37.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ 3ನೇ ದಿನವು ತನ್ನ ಗೆಲುವಿನ ಭರ್ಜರಿ ಓಟವನ್ನು ಮುಂದುವರಿಸಿದೆ. ಹಾಗಾದರೆ ಈ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ?

ರಾಜ್ಯದ ಮೂಲೆ ಮೂಲೆಯಲ್ಲೂ ಅಬ್ಬರ

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಹಳೇ ಮೈಸೂರು ಭಾಗದಲ್ಲಿ 'ಕಾಟೇರ' ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಹೀಗಿದ್ದಾಗ ನಿನ್ನೆ ಕೂಡ ಭಾನುವಾರ ಅದರಲ್ಲೂ ಹೊಸ ವರ್ಷದ ಹಿಂದಿನ ದಿನ. ಹೀಗಾಗಿ ಶುಕ್ರವಾರ & ಶನಿವಾರದ ಬಾಕ್ಸ್ ಆಫಿಸ್‌ ದಾಖಲೆಗಿಂತ ಹೆಚ್ಚಾಗಿ 'ಕಾಟೇರ' ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ನಿಜವಾಗಿ ಬರೋಬ್ಬರಿ 21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಕನ್ನಡಿಗರ ಕಾಟೇರ ಸಿನಿಮಾ. ಈ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ.

Darshan Movie Kaatera Collected This Much Of Amount In The Box Office

100 ಕೋಟಿ ಕ್ಲಬ್ ಗ್ಯಾರಂಟಿ?

2023 ಮುಗಿದಿದ್ದು 2024 ಬಂದೇ ಬಿಟ್ಟಿದೆ ಹೊಸ ವರ್ಷಕ್ಕೆ ಕಾಲಿಟ್ಟು ಆಗಿದೆ. ಇನ್ನೂ ವರ್ಷದ ಕೊನೆಗೆ ಕನ್ನಡ ಸಿನಿಮಾ ರಂಗಕ್ಕೆ, ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್‌ಗೆ ದೊಡ್ಡ ಉಡುಗೊರೆ ಸಿಕ್ಕಿದೆ. 'ಕಾಟೇರ' ಮೂಲಕ ದರ್ಶನ್ ಅವರು, ಖದರ್ ತೋರಿಸಿದ್ದಾರೆ.

ಈ ಮೂಲಕ ಸ್ಯಾಂಡಲ್‌ವುಡ್ ಅಂದ್ರೆ ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ ಚಿತ್ರ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಕಾಟೇರ ಚಿತ್ರ, ಅಬ್ಬರಿಸಿ ತನ್ನ ಗಳಿಕೆಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಈ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+