ದರ್ಶನ್‌ ಅಣ್ಣ ಅವರಿಗೆ ಹೀಗೆ ಕರೆದಿರುವುದು ನಾನೇ ನೋಡಿದ್ದೀನಿ: ಧನ್ವೀರ್

ಬೆಂಗಳೂರು, ಏಪ್ರಿಲ್‌ 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ನ ನಟ ದರ್ಶನ್ ಅವರು ಜೈಲು ಸೇರಿದ್ದರು. ದರ್ಶನ್‌ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಟ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಗೌಡ ಅವರು ವಿಜಯಲಕ್ಷ್ಮಿ ಅವರ ಜೊತೆಗೆ ಸಹೋದರಂತೆ ಸಾಥ್‌ ಕೊಟ್ಟಿದ್ರು. ಇದೀಗ ದರ್ಶನ್‌ ಅವರು ಬಿಡುಗಡೆಯಾಗಿದ್ದು, ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಗೌಡ ಅಭಿನಯದ ವಾಮನ ಚಿತ್ರದ ಅಮ್ಮನ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ಡಿಜಿಟಲ್ನಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡಿದ್ದಾರೆ.

ನಟ ಧನ್ವೀರ್ ನಟನೆಯ ವಾಮನ ಸಿನಿಮಾ ಇದೇ ಏಪ್ರಿಲ್ 10ರಂದು ರಿಲೀಸ್‌ಗೆ ಸಜ್ಜಾಗಿದೆ. ವಾಮನ ಸಿನಿಮಾ ಮೊದಲಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ ಅದರಲ್ಲೂ ನಟ ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಚಿತ್ರದ ಒಂದು ಹಾಡನ್ನು ಸಖತ್ ಇಷ್ಟ ಪಟ್ಟಿದ್ದಾರೆ. ಅದುವೇ ಮುದ್ದು ರಾಕ್ಷಸಿ. ಈ ಹಾಡು ನನಗೆ ಇಷ್ಟ ನನ್ನ ಹೆಂಡತಿಗೂ ಮನೆಯಲ್ಲಿ ಕೆಲವೊಮ್ಮೆ ಮುದ್ದು ರಾಕ್ಷಸಿ ಎಂದು ಕರೆದಿದ್ದೀನಿ ಎಂದು ದರ್ಶನ್ ಹೇಳಿದ್ದರು. ಈ ವಿಚಾರವನ್ನು ನಟ ಧನ್ವೀರ್ ಕೂಡ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.

Darshan Has Called Wife Muddu Rakshasi I Have Seen Said Dhanveer Gowda

ಈ ಕುರಿತು ನಟ ಧನ್ವೀರ್‌ ಅವರು ಮಾತನಾಡಿ, ಮದ್ದು ರಾಕ್ಷಸಿ ಹಾಡು ದರ್ಶನ್‌ಗೆ ತುಂಬಾ ಇಷ್ಟ ಆಗಿದೆ. ಟ್ರಾವಲ್ ಮಾಡುವ ಸಮಯದಲ್ಲಿ ಎರಡು ಮೂರು ಸಲ ಹಾಡು ಕೇಳಿರುವುದು ನಾನು ಕೇಳಿಸಿಕೊಂಡಿದ್ದೀನಿ. ಇನ್ನು ಅಣ್ಣ ಮನೆಯಲ್ಲಿ ಅಕ್ಕಂತೆ ಮುದ್ದು ರಾಕ್ಷಸಿ ಎಂದು ಕರೆದಿರುವುದನ್ನು ನಾನು ಕೇಳಿಸಿಕೊಂಡಿದ್ದೀನಿ. ಇಷ್ಟ ಆಗಿದೆ ಅನ್ನೋದು ಕೇಳಿ ಖುಷಿ ಆಯ್ತು. ಯಾವತ್ತು ನಾನು ದರ್ಶನ್‌ ಸರ್‌ನ ಬಳ್ಳಾರಿಯಿಂದ ಕರೆದುಕೊಂಡು ಬಂದ್ವಿ ಆ ದಿನ ಯಾವತ್ತೂ ಮರೆಯಲು ಆಗುವುದಿಲ್ಲ ಏಕೆಂದರೆ ಆ ಕಷ್ಟದ ದಿನಗಳನ್ನು ಹತ್ತಿರದಿಂದ ನೋಡಿದ್ದೀವಿ ಎಂದು ಧನ್ವೀರ್ ಖಾಸಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ಇನ್ನೂ ವಿಶೇಷ ಎಂದರೆ ವಿಜಯಲಕ್ಷ್ಮೀ ದರ್ಶನ್‌ ಅವರಿಂದ ಈ ಹಾಡನ್ನು ರಿಲೀಸ್​ ಮಾಡಿಸಲಾಗಿದೆ. ಮತ್ತೊಂದು ವಿಶೇಷ ಎಂದರೆ ವಾಮನ ಚಿತ್ರದ ಅಮ್ಮನ ಹಾಡು ಬರುವ ಮುನ್ನ ಆರಂಭದಲ್ಲಿಯೇ ವಿಜಯಲಕ್ಷ್ಮೀ ದರ್ಶನ್‌ಗೆ ತುಂಬು ಹೃದಯದ ಧನ್ಯವಾದಗಳು ಅಂತ ಹಾಕಲಾಗಿದೆ. ಸಿನಿಮಾ ರಿಲೀಸ್‌ಗೆ ಯಾವೆಲ್ಲಾ ಥಿಯೇಟರ್‌ಗಳು ಬೇಕು ಹಾಗೂ ಎಷ್ಟು ಬೇಕು ಎಂದು ವಿತರಕರ ಜೊತೆ ಮಾತುಕತೆ ನಡೆಯುತ್ತಿದೆ.

ನಾನು ಖಂಡಿತ ಸಿನಿಮಾವನ್ನು ಜನರೊಟ್ಟಿಗೆ ಥಿಯೇಟರ್‌ನಲ್ಲಿ ನೋಡುತ್ತೀನಿ. ಮುಂದಕ್ಕೆ ನಾವು ಕೆಲಸ ಮಾಡಬೇಕು ಅಂದ್ರೆ ಜನರೊಟ್ಟಿಗೆ ಕುಳಿತಾಗ ಕೇಳಿ ಬರುವ ಶಿಳೆ ಮತ್ತು ಚಪ್ಪಾಳೆನೇ ಹುಮ್ಮಸು. ಅಣ್ಣ ಶೂಟಿಂಗ್‌ನಲ್ಲಿ ಇರುತ್ತಾರೆ ಫ್ರೀ ಆದ್ಮೇಲೆ ಸಿನಿಮಾ ತೋರಿಸುತ್ತೀನಿ. ಸಿನಿಮಾ ನೋಡುತ್ತೀನಿ ಎಂದು ಅಣ್ಣ ಹೇಳಿದ್ದಾರೆ ಅವರ ಡೇಟ್‌ಗಳನ್ನು ನೋಡಿಕೊಂಡು ದಿನ ಫಿಕ್ಸ್ ಮಾಡಬೇಕು ಎಂದು ನಟ ಧನ್ವೀರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+