ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ಇಷ್ಟೆಲ್ಲಾ ವಿಶೇಷ ಸೌಲಭ್ಯಗಳು ಸಿಗುತ್ತವೆ-ಸ್ಫೋಟಕ ಮಾಹಿತಿ ಬಿಚ್ಚಿದ ಮಾಜಿ ಖೈದಿ
Darshan Thoogudeepa: ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೊದಲಿನಿಂದಲೂ ಗಾಂಜಾ, ಸಿಗಟರೇಟ್, ಮೊಬೈಲ್ ಸಫ್ಲೈ ಆಗುತ್ತಿವೆ ಎನ್ನುವ ನಿದರ್ಶನಕ್ಕೆ ನಟ ದರ್ಶನ್ ರಾಜಾತಿಥ್ಯವೇ ಸಾಕ್ಷಿಯಾಗಿದೆ. ಇದೀಗ ಜೈಲಿನಲ್ಲಿ ಏನೆಲ್ಲಾ ಕರ್ಮಕಾಂಡಗಳು ನಡೆಯುತ್ತಿದ್ದವು ಎಂದು ಇತ್ತೀಚೆಗಷ್ಟೇ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಂಡಿದ್ದ ಚಿತ್ರದುರ್ಗ ಮೂಲದ ಸಿದ್ಧರೂಢ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ಸಿದ್ದಾರೂಢ ಎಂಬುವವರು ಸನ್ನಡತೆಯ ಆಧಾರದ ಮೇಲೆ ಬಿಡುಗೊಂಡಿದ್ದರು. ಹಾಗೆಯೇ ಆ ವೇಳೆ, ನಾನು ದರ್ಶನ್‌ನ್ನು ಭೇಟಿಯಾಗಿದ್ದು, ಅವರು ತುಂಬಾ ಸುರಗಿದ್ದಾರೆ. ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಪುಂಗಿದ್ದರು. ಅಷ್ಟೇ ಅಲ್ಲದೆ, ದರ್ಶನ್‌ಗೆ ಯೋಗಾಸನವನ್ನು ಹೇಳಿಕೊಟ್ಟು ಬಂದಿದ್ದೇನೆ ಎಂದು ಹೇಳಿದ್ದರು.

ಆದರೆ ಬಳಿಕ ಸಿದ್ಧರೂಢ ಎಂಬ ಮಾಜಿ ಖೈದಿ ದರ್ಶನ್‌ನನ್ನು ಭೇಟಿಯೇ ಆಗಿಲ್ಲ. ಸುಮ್ಮನೆ ಸುಳ್ಳು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದರು. ಇನ್ನು ಇದೀಗ ಥರ್ಡ್ ಐ ಎನ್ನುವ ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲೆ ಏನೆಲ್ಲಾ ನಡೆಯುತ್ತವೆ ಎಂದು ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
"ಜೈಲನಲ್ಲಿ ಇರುವವರು ಒಂದು ಮಾತು ಹೇಳುತ್ತಾರೆ, ದುಡ್ಡು ಇರುವವನುಗೆ ಜೈಲು ಅಂತಾ. ದೊಡ್ಡು ಇಲ್ಲದೆ ಇರುವವರಿಗೆ ನಕರ. ದುಡ್ಡಿರುವವರಿಗೆ ಹೊರಗಿನ ಪ್ರಪಂಚ ಕಾಣುವುದಿಲ್ಲ ಎಂಬ ಒಂದು ವಿಚಾರ ಬಿಟ್ರೆ, ಅವರು ಏನು ಬೇಕಾದರೂ ತರಿಸಿಕೊಂಡು ಇರಬಹುದು. ಜೈಲಲ್ಲಿದ್ದು ಹೊರಗಡೆ ಹೋಗಿ ಶಾಪಿಂಗ್ ಮಾಡಿಕೊಂಡು ಬರಬಹುದು," ಅಂತಲೂ ಹೇಳಿದ್ದಾರೆ.
"ಕೆಲವು ಅಧಿಕಾರಿಗಳು ಲಂಚ ತೆಗೆದುಕೊಂಡು ಖೈದಿಗಳಿಗೆ ಆರಾಮಾಗಿ ಐಷಾರಾಮಿ ಜೀವನ ನಡೆಸುವುದಕ್ಕೆ ಬಿಡುತ್ತಾರೆ. ರಂಗನಾಥ್ ಅಂತಹವರು ಮಾತ್ರ ಫ್ರೀ ಬಿಡುವುದಿಲ್ಲ, ಅವರು ಫುಲ್ ಸ್ಟ್ರಿಕ್ಟ್.. ಲಂಚಕ್ಕೆ ಆಸೆ ಪಡುವ ಕೆಲವು ಅಧಿಕಾರಿಗಳು ದೊಡ್ಡಿನ ಆಸೆಗಾಗಿ ಕೆಲವು ಖೈದಿಗಳಿಗೆ ರಾಜಾತಿಥ್ಯದ ಅವಕಾಶವನ್ನು ಮಾಡಿಕೊಡುತ್ತಾರೆ. ಅಂದರೆ, ಫೋನ್, ಸಗರೇಟ್ ಸೇರಿದಂತೆ ಎಲ್ಲವನ್ನು ಕದ್ದುಮುಚ್ಚಿ ಕೊಡುತ್ತಾರೆ. ಗಾಂಜಾವನ್ನು ಕೂಡ ತರಿಸಿಕೊಳ್ಳುತ್ತಾರೆ," ಎಂದು ಹೇಳಿದ್ದಾರೆ.
ಡಿಐಜಿ ಖಡಕ್ ಸೂಚನೆ: ಇನ್ನು ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಆರೋಪ ಹಿನ್ನೆಲೆ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಾಶ್ರಿ ಅವರನ್ನು ನೇಮಿಸಲಾಗಿದೆ.
ಇದೀಗ ಪರಪ್ಪನ ಅಗ್ರಹಾರಕ್ಕೆ ಎಂಟ್ರಿ ಕೊಟ್ಟ ಡಿಐಜಿ ದಿವ್ಯಾಶ್ರಿ & ಟಿಂ ಜೈಲಾಧಿಕಾರಿಗಳಿಗೆ ಕೆಲವು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ರೌಡಿಶೀರ್‌ಗಳಾ ನಾಗ & ಟೀಂ ಬ್ಯಾರಕ್‌ಗಳ ಮೇಲೆ ಹದ್ದಿನ ಕಣ್ಣಿಡಬೇಕು. ರಾಜಾತಿಥ್ಯದಂತಹ ಪ್ರಕರಣಗಳಿ ಮರುಕಳಿಸಬಾರದು. ಸಿಸಿಟಿವಿ ಕ್ಯಾಮೆಯಾ ಸರಿಯಾಗಿ ಮಾನಿಟರ್ ಮಾಡಿ. ಹಾಗೆಯೇ ಬಾಲ ಮುದುರಿಕೊಂಡಿ ನಿಮ್ಮ ಪಾಡಿಗೆ ನೀವು ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಹೈಫೈ ಕಡೆ ಗಮನಹರಿಸಿದ್ರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications