'ಅಯ್ಯೋ ಲವ್ ಅಲ್ಲ'..: ಸೋನಾಲ್-ತರುಣ್ ಮದುವೆಯ ಅಸಲಿ ಕಥೆ ಇಲ್ಲಿದೆ
ಬೆಂಗಳೂರು, ಜುಲೈ 28: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಇದೇ ಆಗಸ್ಟ್ 11 ರಂದು ತರುಣ್ ಸುಧೀರ್ - ಸೋನಾಲ್ ಮಂಥೆರೊ ವಿವಾಹ ಮಹೋತ್ಸವ ಜರುಗಲಿದೆ.
ತರುಣ್ ಸುಧೀರ್ - ಸೋನಾಲ್ ಮದುವೆಯ ಬಗ್ಗೆ ಕಾಸ್ಟೂಮ್ ಡಿಸೈನರ್ ರಶ್ಮಿ ಅನೂಪ್ ರಾವ್ ಮಾತನಾಡಿದ್ದಾರೆ. ನ್ಯೂಸ್‌ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಸೋನಾಲ್ ಮತ್ತು ತರುಣ್ ಅವರ ಮದುವೆ ಕ್ರೈಸ್ತ ಸಂಪ್ರದಾಯದಂತೆ ಕೂಡ ನಡೆಯುತ್ತದೆ. ಆದರೆ ಅದರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಈ ಮದುವೆ ಆದ ಮೇಲೆ ಸ್ಪಲ್ಪ ಸಮಯ ಕೊಟ್ಟೇ ಅದನ್ನು ಮಾಡುತ್ತಿದ್ದಾರೆ. ಅದು ಮಂಗಳೂರಿನಲ್ಲಿ ನಡೆಯುತ್ತದೆ. ಸೋನಾಲ್ ಅವರ ಊರಿನಲ್ಲಿ ನಡೆಯುತ್ತದೆ. ಅವರ ಕಡೆಯವರೆಲ್ಲಾ ಬರಬೇಕು ಹೀಗಾಗಿ ಮಂಗಳೂರಲ್ಲೇ ನಡೆಸಬೇಕು ಅಂದುಕೊಂಡಿದ್ದಾರೆ' ಎಂದರು.

ಸೋನಾಲ್ ಮತ್ತು ತರುಣ್ ಅವರ ಪ್ರೀತಿ ಬಗ್ಗೆ ಮಾತನಾಡಿದ ಅವರು, 'ಅವರ ಪ್ರೀತಿ ಬಗ್ಗೆ ಎಲ್ಲರೂ ನನ್ನನ್ನು ಕೇಳುತ್ತಿದ್ದಾರೆ. ನನಗೆ ಒಂದಿಬ್ಬರು ಈ ಬಗ್ಗೆ ಮೊದಲೇ ಕೇಳಿದ್ದರು. ಆದರೆ ಸೋನಲ್ ಬಾಯಿಯಿಂದ ಈ ವಿಚಾರ ಒಳ್ಳೆಯದು ಎನ್ನುವುದು ನನಗಿತ್ತು. ಅವರಿಗೆ ಯಾವಾಗ ಸರಿ ಅನಿಸಿತೋ ಅವಾಗ ನನಗೆ ಹೇಳಿದ್ದಾರೆ. ಐದು ದಿನ ಕಾಸ್ಟೂಮ್ ಬೇಕು ಅಂತಾ.
ನಾನು ನೋಡಿರುವ ಹಾಗೇ, ನನಗೆ ಗೊತ್ತಿರುವ ಹಾಗೇ ಲವ್ ಸ್ಟೋರಿ ಅಂತಾ ಏನೂ ಇಲ್ಲ. ಈ ಮದುವೆಯಾಗುತ್ತಿರುವುದಕ್ಕೆ ನಮಗೆಲ್ಲಾ ಖುಷಿ ಇದೆ. ಅವರಿಬ್ಬರು ಒಳ್ಳೆ ಜೋಡಿ. ಎಲ್ಲರೂ ಸೇರಿಕೊಂಡು ಮದುವೆ ಮಾಡುತ್ತಿದ್ದಾರೆ. ಹೀಗಾಗಿ ತುಂಬಾ ಖುಷಿ ಇದೆ ಎಂದರು. ಇದು ಒಂದು ಅರೇಂಜ್ಡ್ ಮ್ಯಾರೇಜ್. ನನಗೆ ಗೊತ್ತಿರುವ ಹಾಗೇ ಇದು ವೆರಿ ವೆಲ್ ಅರೇಂಜ್ಡ್ ಮ್ಯಾರೇಜ್. ಅವರ ತಾಯಿ ಹತ್ತಿರ ಮಾತನಾಡಿ ಆಗಿರುವಂತದ್ದು.
ನನಗೆ ಸೋನಾಲ್ ಹೇಳಿರುವ ಪ್ರಕಾರ, ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ಇದು ಅರೇಂಜ್ಡ್ ಮ್ಯಾರೇಜ್. ಫಸ್ಟ್ ಪ್ರೋಪೋಸಲ್ ದರ್ಶನ್ ಸರ್ ಕಂಡೆಯಿಂದ ಬಂದಿದೆ. ಅವರೇ ಈ ಸಂಬಂಧವನ್ನು ಮಾತನಾಡಿದ್ದು. ಈ ವಿಚಾರವನ್ನು ಅವರು ಪ್ರೆಸ್‌ಮೀಟ್ ಮಾಡಿ ಹೇಳಬಹುದು. ಅದಕ್ಕೆ ದರ್ಶನ್ ಸರ್ ಹೇಳಿದ್ದು ಮದುವೆ ದಿನಾಂಕನ ಮುಂದೆಕ್ಕೆ ಹಾಕುವುದು ಬೇಡ ಅಂತಾ. ಅದೆಲ್ಲಾ ನ್ಯೂಸ್ ಅಲ್ಲಿ ಬಂದಿದೆ' ಎಂದರು.

'ಸೋನಾಲ್ ಮತ್ತು ತರುಣ್ ಇಬ್ಬರೂ ಆಪ್ತರು ನನಗೆ. ಸೋನಾಲ್ ನನಗೆ ತುಂಬಾ ಹತ್ತಿರ. ಎಕ್ಕ ಸಕ..ಪಿಲಿ ಬೈಲು ಯಮುನಕ್ಕಾ ಸಿನಿಮಾದಿಂದಲೂ ಸೋನಾಲ್ ಹೆಸರು ಕೇಳುತ್ತಾ ಬಂದಿದ್ದೆ. ನನ್ನ ಪತಿಯೂ ಮಂಗಳೂರುವರು ಆಗಿರುವುದರಿಂದ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಸೋನಾಲ್ ಹೆಸರು ಕೇಳುತ್ತಾ ಬಂದಿದ್ದೆ. ಆದರೆ 2016ರಲ್ಲಿ ನನಗೆ ಸೋನಾಲ್ ಪರಿಚಯ ಆಗಿದ್ದು, ಎಂಎಲ್‌ಎ ಸಿನಿಮಾ ಸಮಯದಲ್ಲಿ. ಇಷ್ಟು ಕ್ಲೋಸ್ ಆಗುತ್ತೇವೆ ಎಂದುಕೊಂಡಿರಲಿಲ್ಲ.
ಅವರ ಒಳ್ಳೆತನಕ್ಕೆ ಒಳ್ಳೆ ಜೀವನ ಸಿಕ್ಕಿದೆ. ನಾನು ನಮ್ಮ ಮನೆಯವರೆಲ್ಲಾ ಖುಷಿಯಾಗಿದ್ದೇವೆ. ಸೋನಾಲ್ ಒಳ್ಳೆ ಮನೆಗೆ ಹೋಗುತ್ತಿದ್ದಾರೆ ಎನ್ನುವ ಸಂತೋಷ ಇದೆ. ಇಬ್ಬರಿಗೂ ಜೀವನದ ಮೌಲ್ಯ ಗೊತ್ತು. ಹೀಗಾಗಿ ಇಬ್ಬರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಇದೆ' ಎಂದು ರಶ್ಮಿ ಖುಷಿ ವ್ಯಕ್ತಪಡಿಸಿದರು.












Click it and Unblock the Notifications