Jyothika: ದಕ್ಷಿಣ ಭಾರತೀಯ ನಟರ ಬಗ್ಗೆ ಮಾತನಾಡಿದ ನಟಿ ಜ್ಯೋತಿಕಾ ಟ್ರೋಲ್! Viral Video
Jyothika: ತಮಿಳಿನ ಖ್ಯಾತ ನಟಿ, ನಿರ್ಮಾಪಕಿ ಮತ್ತು ಸೂರ್ಯ ಅವರ ಪತ್ನಿ ಜ್ಯೋತಿಕಾ ಅವರು ಇದೀಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಅಭಿನಯ ಮತ್ತು ಸಿನಿಮಾಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ನಟ ಸೂರ್ಯ ಮತ್ತು ಜ್ಯೋತಿಕಾ ಅವರದ್ದು ಪ್ರೇಮ ವಿವಾಹ. ವಿವಾಹವಾದ ಮೇಲೆ ಪೋಷಕ ನಟಿ ಪಾತ್ರದಲ್ಲಿ ಹಾಗೂ ವಿಶೇಷ ಪಾತ್ರಗಳಲ್ಲಿ ನಟಿ ಜ್ಯೋತಿಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಇದೀಗ ನಿರ್ಮಾಪಕಿಯೂ ಹೌದು ಆದರೆ ಅವರು ಅನವಶ್ಯಕವಾಗಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮದುವೆಯಾದ ಮೇಲೆ ಕೆಲವೊಂದು ಸ್ಟಾರ್ ನಟಿಯರು ಸಿನಿಮಾಗಳಿಂದ ಕೊಂಚ ದೂರ ಉಳಿಯುವುದು ಇದೆ. ಕನ್ನಡದಲ್ಲೂ ಕೆಲವು ಸ್ಟಾರ್ ನಟಿಯರು ಸಿನಿಮಾದಿಂದ ದೂರ ಸರಿದಿರುವುದು ಇದೆ. ಅದೇ ರೀತಿ ಜ್ಯೋತಿಕಾ ಅವರು ಮೂವಿಗಳಲ್ಲಿ ಅಷ್ಟೊಂದು ಬ್ಯೂಸಿ ಇಲ್ಲ. ಇದೀಗ ದಕ್ಷಿಣದ ಸ್ಟಾರ್ ನಟರ ಬಗ್ಗೆ ನಟಿ ಜ್ಯೋತಿಕಾ ಅವರ ಹೇಳಿಕೆಯು ಹೊಸ ಚರ್ಚೆ ಸೃಷ್ಟಿ ಮಾಡಿದೆ. ಅಲ್ಲದೇ ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜ್ಯೋತಿಕಾ ಅವರ ಹೇಳಿಕೆ ಭಾರೀ ಟ್ರೋಲ್ ಆಗುತ್ತಿದೆ. ಇದಕ್ಕೆ ಪರ - ವಿರೋಧ ಚರ್ಚೆ ನಡೆದಿದೆಯಾದರೂ, ಬಹುತೇಕರು ಜ್ಯೋತಿಕಾ ಮಾತಿಗೆ ಗರಂ ಆಗಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರ ಬಗ್ಗೆ ನಟಿ ಜ್ಯೋತಿಕಾ ಅವರು ಹೇಳಿದ್ದೇನು ಎನ್ನುವ ವಿವರ ನೋಡೋಣ.

ನಟಿ ಜ್ಯೋತಿಕಾ ಅವರ ಹೇಳಿಕೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಶೈಥಾನ್ ಸಿನಿಮಾ ಪ್ರಚಾರದ ಭಾಗವಾಗಿ ಜ್ಯೋತಿಕಾ ಅವರು ಮಾತನಾಡಿದ್ದು, ನಾನು ದಕ್ಷಿಣದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಆದರೆ ದಕ್ಷಿಣದ ಚಿತ್ರರಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲ್ಲ. ಸಿನಿಮಾಗಳ ಪೋಸ್ಟರ್‌ಗಳಲ್ಲಿಯೂ ನಟರ ಚಿತ್ರವೇ ಹೆಚ್ಚಾಗಿ ಎದ್ದು ಕಾಣುತ್ತದೆ. ಆದರೆ, ಹಿಂದಿ ಮತ್ತು ಮಲಯಾಳಂನ ನಟರಾದ ಮಮ್ಮುಟ್ಟಿ ಹಾಗೂ ಅಜಯ್ ದೇವಗನ್ ಸಿನಿಮಾಗಳಲ್ಲಿ ಆ ರೀತಿ ಮಾಡಲಿಲ್ಲ. ಮಹಿಳೆಯರಿಗೂ ಇವರ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ನಟಿ ಜ್ಯೋತಿಕಾ ಅವರು ಹೇಳಿರುವುದೇ ಇದೀಗ ವಿವಾದಕ್ಕೆ ಕಾರಣವಾಗಿದೆ.
ಜ್ಯೋತಿಕಾ ಅವರು ಸಹ ಕಲಾವಿದರನ್ನು ಹೊಗಳುವುದು ಹೊಸದೇನು ಅಲ್ಲ. ಆದರೆ ಅದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಇತರ ನಟರ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಅಲ್ಲದೇ ಹಿಂದಿ ಸಿನಿಮಾಗಳಲ್ಲಿ ಇರುವಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಾರತಮ್ಯ ಇಲ್ಲ ಎಂದೂ ಕೆಲವು ಸಿನಿಮಾ ಪ್ರೇಕ್ಷಕರು ಹೇಳಿದ್ದಾರೆ.












Click it and Unblock the Notifications