Get Updates
Get notified of breaking news, exclusive insights, and must-see stories!

Lakshmi: ನೀವು ಸ್ಮಾರ್ಟ್ ಆಗಿದ್ರೆ ನನ್ನತ್ರ ಬನ್ನಿ.. ಇಲ್ಲದಿದ್ದರೆ ಬೇಡ ಎಂದ ನಟಿ ಲಕ್ಷ್ಮಿ: "ಗಾಳಿ ಸೋಕುತ್ತೆ ಅಂತೀನಿ" ಟ್ರೋಲ್

Lakshmi: ಬಹುಭಾಷಾ ನಟಿ ನಟಿ ಲಕ್ಷ್ಮಿ ಅವರು ಕೊಟ್ಟಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಪ್ರಮುಖ ಪಾತ್ರಗಳನ್ನು ಲಕ್ಷ್ಮಿ ಅವರು ಮಾಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗಲೂ ಅವರು ಕೆಲವೊಂದು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುತ್ತಿರುವುದು ಇದೆ. ಆದರೆ ಅವರು ಈಚೆಗೆ ಯೌವನದ ಬಗ್ಗೆ ಹಾಗೂ ಸ್ಮಾರ್ಟ್‌ ಆಗಿದ್ದರೆ ಮಾತ್ರ ನನ್ನ ಹತ್ತಿರ ಬನ್ನಿ ಅಂತ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದರಲ್ಲಿ ತಪ್ಪೇನಿದೆ ಅಂತ ಹೇಳಿದರೆ ಇನ್ನೂ ಕೆಲವರು ಇದೆಂತಹ ಹೇಳಿಕೆ ಇವರ ಮೇಲಿದ್ದ ಗೌರವವೇ ಹೋಯ್ತು ಅಂತಲೂ ಹೇಳಿದ್ದಾರೆ. ಇಷ್ಟಕ್ಕೂ ಹಿರಿಯ ನಟಿ ಲಕ್ಷ್ಮಿ ಅವರು ಹೇಳಿದ್ದೇನು. ಅದು ವಿವಾದ ಸ್ವರೂಪವನ್ನು ಪಡೆದುಕೊಂಡಿರುವುದು ಯಾಕೆ ಅಂತ ನೋಡೋಣ.

ಈಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಿತ್ತು. ಅದರಲ್ಲಿ ನಟಿ ಲಕ್ಷ್ಮಿ ಅವರ ಪ್ರತಿಕ್ರಿಯೆಯನ್ನು ಸಹ ಪಡೆದುಕೊಳ್ಳಲಾಗಿದೆ. ಇನ್ನು ಇದೇ ಮಾತುಗಳನ್ನು ಅವರು ಈ ಹಿಂದೆ ಜೀ ಕನ್ನಡದ ವೀಕೆಂಡ್‌ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಹೇಳಿದ್ದಾರೆ. ಅದೇ ಮಾತುಗಳನ್ನು ಪುನರಾವರ್ತಿಸಿದ್ದು. ಈ ವಿಚಾರವು ಭಾರೀ ಚರ್ಚೆಯಾಗಿದೆ. ಆದರೆ ಈ ವಿಷಯವಾಗಿ ಪರ -ವಿರೋಧ ಚರ್ಚೆ ನಡೆದಿದೆ.

Come to me only if you are smart otherwise don t says actress Lakshmi troll

ನಟಿ ಲಕ್ಷ್ಮಿ "ಸ್ಮಾರ್ಟ್" ಬಗ್ಗೆ ಹೇಳಿದ್ದೇನು ?

ಒಮ್ಮೆ ವಿಶಾಖಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಒಬ್ಬಳು ಜಯಾ ಅಂತ ನನ್ನ ಗೆಳತಿ ನನ್ನನ್ನು ನೋಡಲು ಬಂದಿದ್ದಳು. ಅವಳ ತಲೆ ಕಲೆ ಕೂದಲು ಬೆಳ್ಳಗಾಗಿತ್ತು. ಸೊರಗಿ ಹೋದಂತೆ ಮೊಮ್ಮಗನನ್ನು ಆಡಿಸುತ್ತಾ ಕೂಳಿತುಕೊಂಡಿದ್ದಳು. ಲಕ್ಷ್ಮಿ ನನ್ನ ಫ್ರೆಂಡ್ ಅಂತ ಹೇಳಿ ಕಳುಹಿಸಿದ್ದಳು. ಆಕೆ ನನ್ನ ಸೀನಿಯರ್, ತುಂಬಾ ವರ್ಷ ಫೇಲ್ ಆಗಿದ್ದಾಳೆ. ಅವಳ ಜೊತೆ ನಾನು ಸೇರಲ್ಲ, ಮಾತನಾಡಲ್ಲ ಎಂದುಬಿಟ್ಟೆ ಎಂದು ನಟಿ ಲಕ್ಷ್ಮಿ ಅವರು ನಕ್ಕಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದರು.

ನೀನು ಎಷ್ಟೇ ವಯಸ್ಸಾಗಿದ್ದರೂ ಅದನ್ನು ಯಾಕೆ ತೋರಿಸಿಕೊಳ್ತೀಯಾ. ಇರುವುದು ಒಂದೇ ಜೀವನ. ಚೆನ್ನಾಗಿರಿ.. ವಯಸ್ಸಾದರೆ ವಯಸ್ಸಾದಂತೆ ಇರಬೇಕಂತ ಏನಿಲ್ಲ. ಅಯ್ಯೋ ನನಗೆ ವಯಸ್ಸಾಯ್ತು ಎನ್ನಬಾರದು. ಅವರ ಎಜರ್ನಿ ಹೋಗಿಸಿಕೊಂಡು ನಮ್ಮನ್ನು ಅವರಂತೆ ಎಳೆದುಕೊಂಡು ಬಿಡುತ್ತಾರೆ. ಅಂತಹವರ ಜೊತ ನಾನು ಸೇರಲ್ಲ. ನನ್ನ ಫ್ರೆಂಡ್ಸ್, ನೆಂಟರು ಯಾರೇ ಆಗಿದ್ದರೂ ಸ್ಮಾರ್ಟ್ ಆಗಿದ್ದರೆ ಮಾತ್ರ ನನ್ನ ಬಳಿ ಬನ್ನಿ. ಇಲ್ಲದಿದ್ದರೆ ನಿಮ್ಮ ಗಾಳಿ ನನಗೂ ಸೋಕಿಬಿಡುತ್ತೆ ಅಂತೀನಿ ಎಂದು ನಟಿ ಲಕ್ಷ್ಮಿ ಅವರು ಹೇಳಿದ್ದಾರೆ. ಇದೇ ಮಾತುಗಳನ್ನು ಅವರು ಈಗಲೂ ಹೇಳಿದ್ದಾರೆ. ಆದರೆ ಸ್ಮಾರ್ಟ್ ಎನ್ನುವ ವಿಚಾರವು ಹಲವರನ್ನು ಕೆರಳಿಸಿದೆ.

ಮಮತಾ ಅರಸೀಕೆರೆ ಎನ್ನುವವರು, ಲಕ್ಷ್ಮಿ ಅವರ ಉದ್ದೇಶ , ಜೀವನದಲ್ಲಿ ಉತ್ಸಾಹವಿಲ್ಲದ, ಮಂಕಾಗಿರುವ ಜೀವಿಗಳು ತಮ್ಮ ಹತ್ತಿರ ಬರಬಾರದು, ತಮಗೂ ನಿರುತ್ಸಾಹ ಕವಿಯಬಹುದು ಅನ್ನುವ ಮನೋಭಾವದ್ದಾಗಿದೆ. ಸರಿಯಾಗಿ ನಾವ್ಯಾರೂ ಅರ್ಥ ಮಾಡಿಕೊಂಡಿಲ್ಲ. ಅವರ ಮಾತಿನ ಅರ್ಥ, ಸ್ವಲ್ಪ ಉತ್ಪ್ರೇಕ್ಷೆಯಲ್ಲಿ ಏನೊ ಹೇಳಲು ಹೋಗಿ ಮತ್ತೇನೊ ಹೇಳಿದ್ದಾರೆ. ಒಟ್ಟಾರೆ ತಮ್ಮ ಸುತ್ತ ಸಂಭ್ರಮವೇ ಇರಬೇಕು ಅನ್ನೋದು ತಾತ್ಪರ್ಯ. ಹಾಗಂತ ತಮ್ಮನ್ನು ಕಾಣಲು ಬಂದ ಸ್ನೇಹಿತೆಯನ್ನು ಅವರ ಕಳಾಹೀನ ಸ್ಥಿತಿ ಕಂಡು ಭೇಟಿಯೇ ಆಗದೆ ಹೋದದ್ದು ಸರಿಯಲ್ಲ. ಅವರ ಗೆಳತಿ ಬಗ್ಗೆ ಬರೆದದ್ದು ವಿಪರೀತಾರ್ಥ ಕೊಡುತ್ತದೆ. (ಈ ಸಂಗತಿ ನಿಜವೇ ಆಗಿದ್ದರೆ ...)

ಬಹುಶಃ ಲಕ್ಷ್ಮಿಯವರನ್ನು ಕಂಡು ಅವರ ಸ್ನೇಹಿತೆ ತನ್ನ ಬದುಕಿನ ರೀತಿಯನ್ನು ಬದಲಾಯಿಸಿಕೊಳ್ಳುವ ಅವಕಾಶವಿತ್ತು. ಅಷ್ಟೊಂದು ತೀವ್ರವಾಗಿ ಜೀವಂತಿಕೆಯಿಂದಿರುವ ಲಕ್ಷ್ಮಿಯವರು ಅವರ ಸ್ನೇಹಿತೆಯನ್ನು ಭೇಟಿ ಮಾಡಿ ತಿಳಿ ಹೇಳಿ ಅವರ ಬದುಕಿನ ಸ್ವಾದವನ್ನೂ ಹೆಚ್ಚಿಸಬಹುದಿತ್ತು ಎಂದಿದ್ದಾರೆ.

ಈ ರೀತಿ ನಿರಾಕರಿಸುವ ಮೂಲಕ ಸಾರ್ವಜನಿಕವಾಗಿಯೂ ತಪ್ಪು ಸಂದೇಶ ನೀಡಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ವಯಸ್ಸಾದವರೂ ಸ್ಮಾರ್ಟ್‌ ಆಗಿ ಇರಬೇಕು ಎನ್ನುವುದರಲ್ಲಿ ಅರ್ಥವೇನಿದೆ. ಇನ್ನೂ ಎಲ್ಲರೂ ಸ್ಮಾರ್ಟ್‌ ಆಗಿಯೂ ಚಂದವಾಗಿಯೂ ಕಾಣಬೇಕು ಎನ್ನುವುದು ಲಕ್ಷ್ಮಿ ಅವರ ಮಾತು ಬಾಹ್ಯ ಸೌಂದರ್ಯದ ಸಂಕೇತವಷ್ಟೇ. ಅಂತರಂಗ ಸೌಂದರ್ಯ ಹಾಗೂ ಸಂವೇದನಶೀಲತೆಯ ಬಗ್ಗೆ ಅವರು ಮಾತನಾಡಿಲ್ಲ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+