ಉಪಾಧ್ಯಕ್ಷ ಸಿನಿಮಾ ಯಶಸ್ಸಿಗೆ ಇವರೇ ಕಾರಣ ಎಂದ ನಟ ಚಿಕ್ಕಣ್ಣ

ಹುಬ್ಬಳ್ಳಿ, ಫೆಬ್ರವರಿ 03: ಹಾಸ್ಯ ನಟರಾಗಿ ಅಭಿನಯಿಸಿದ ಚಿಕ್ಕಣ್ಣ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ ಚಿತ್ರ ಉಪಾಧ್ಯಕ್ಷ ಸಿನಿಮಾ ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿತ್ತು. ಈ ಚಿತ್ರಕ್ಕೆ ರಾಜ್ಯವ್ಯಾಪಿ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವ ಈ ಹಿನ್ನೆಲೆ ನಟ ಚಿಕ್ಕಣ್ಣ ಧನ್ಯವಾದ ಹೇಳುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಟ ಚಿಕ್ಕಣ್ಣ ಅವರು ಮಾತನಾಡಿ, ಉಪಾಧ್ಯಕ್ಷ ಸಿನಿಮಾ ಯಶಸ್ಸಿಗೆ ಕನ್ನಡಿಗರ ಆಶೀರ್ವಾದವೇ ಕಾರಣ ಎಂದು ಹೇಳಿದ್ದಾರೆ. ನಮ್ಮ ಉಪಾಧ್ಯಕ್ಷ ಚಿತ್ರಕ್ಕೀಗ ಉತ್ತರ ಕರ್ನಾಟಕ‌ ಸೇರಿ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬರುವ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Chikkannas reaction on the success of Vice President movie

ಉಪಾಧ್ಯಕ್ಷ ಮುಖ್ಯಪಾತ್ರದಲ್ಲಿ ನನ್ನ ಮೊದಲ ಚಿತ್ರ ಇದಾಗಿದ್ದು, ಶ್ರೀ ಸಿದ್ದಾರೂಢರ ಹಾಗೂ ಶ್ರೀ ಚಾಮುಂಡಿ ತಾಯಿ ಆಶೀರ್ವಾದದಿಂದ ಸಿನಿಮಾಗೆ ರಾಜ್ಯವ್ಯಾಪಿ ಒಳ್ಳೆಯ ಬೆಂಬಲ ಸಿಗುತ್ತಿದೆ. ಬರುವ ದಿನಗಳಲ್ಲಿ ಕಾಮಿಡಿ ವಿಥ್ ಫ್ಯಾಮಿಲಿ ಎಂಟರ್​ಟೈನ್ಮೆಂಟ್​​ ಚಿತ್ರಗಳನ್ನು ಮತ್ತಷ್ಟು ಮಾಡುತ್ತೇವೆ ಎಂದು ನಟ ಚಿಕ್ಕಣ್ಣ ಹೇಳಿದ್ದಾರೆ.

ಸಿನಿಮಾ ಅದ್ಧೂರಿಯಾಗಿ ಒಂದು ವಾರ ಪೂರ್ಣಗೊಳಿಸಿದೆ. ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರ ಬಹಳ ಚೆನ್ನಾಗಿ ಓಡುತ್ತಿದೆ. ಸಂಪೂರ್ಣ ಕರ್ನಾಟಕದಾದ್ಯಂತ ಉತ್ತಮ ರೆಸ್ಪಾನ್ಸ್ ಇದೆ. ಮೊದಲ ಹಂತದಲ್ಲಿ ಅಪಾಧ್ಯಕ್ಷ ಚಿತ್ರವನ್ನು 150 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವಾರ ಇದಕ್ಕೆ ಮತ್ತೆ 50 ಚಿತ್ರ ಮಂದಿರಗಳು ಆ್ಯಡ್ ಆಗಿವೆ. ಈಗ ಒಟ್ಟು 222 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಕುಟುಂಬ ಸಮೇತರಾಗಿ ಚಿತ್ರ ಪ್ರೇಮಿಗಳು ಬಂದು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ, ಇದು ತುಂಬಾ ಸಂತಸದ ಸಂಗತಿಯಾಗಿದೆ.

ಇನ್ನೂ ಕಲೆಕ್ಷನ್ ಕೂಡಾ ಒಳ್ಳೆಯ ರೀತಿ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಎಲ್ಲ ಚಿತ್ರ ರಸಿಕರು ಬಂದು ಯಾರು ಸಿನಿಮಾ ನೋಡಿಲ್ಲ, ಅವರೆಲ್ಲರೂ ಕುಟುಂಬ ಸಮೇತರಾಗಿ ಚಿತ್ರವನ್ನು ನೋಡಿ ಆರ್ಶೀವಾದ ಮಾಡಬೇಕು. ಇದು ಮುಖ್ಯ ಪಾತ್ರದಲ್ಲಿ ನನ್ನ ಮೊದಲ ಚಿತ್ರವಾಗಿದ್ದು, ಶ್ರೀ ಸಿದ್ದಾರೂಢರ ಹಾಗೂ ಶ್ರೀ ಚಾಮುಡಿ ತಾಯಿ ಆರ್ಶೀವಾದದಿಂದ ಚಿತ್ರಕ್ಕೆ ರಾಜ್ಯವ್ಯಾಪಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಬರುವ ದಿನಗಳಲ್ಲಿ ಕಾಮಿಡಿಯನ್ ವಿಥ್ ಫ್ಯಾಮಿಲಿ ಚಿತ್ರಗಳನ್ನು ಮತ್ತಷ್ಟು ಮಾಡುತ್ತೇವೆ ಎಂದು ತಿಳಿಸಿದರು. ‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+