ನಟಿ ಛಾಯಾ ಸಿಂಗ್ ಗರ್ಭಿಣಿ, ಅಭಿಮಾನಿಗಳಿಗೆ ಸಿಕ್ಕಿತು ಭರ್ಜರಿ ಸುದ್ದಿ... Chaya Singh
ಕನ್ನಡದ ನಟಿ ಛಾಯಾ ಸಿಂಗ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದರು. ಅಲ್ಲದೆ ಛಾಯಾ ಸಿಂಗ್ ಅವರಿಗೆ ಇಂದಿಗೂ ಸಿನಿಮಾಗಳಲ್ಲಿ ಭಾರಿ ಡಿಮ್ಯಾಂಡ್ ಇದ್ದು, ಛಾಯಾ ಸಿಂಗ್ ಅವರ ನಟನೆಗೆ ಕೋಟಿ ಕೋಟಿ ಅಭಿಮಾನಿಗಳು ಕೂಡ ಇದ್ದಾರೆ. ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಗೆ ಭೈರತಿ ರಣಗಲ್ ಸಿನಿಮಾದಲ್ಲಿ ತಂಗಿ ಪಾತ್ರದಲ್ಲಿ ಮಿಂಚಿದ್ದರು ನಟಿ ಛಾಯಾ ಸಿಂಗ್ ಅವರು...
ಛಾಯಾ ಸಿಂಗ್ ಅವರು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಇವತ್ತು ನಿನ್ನೆಯಲ್ಲ, ಬರೋಬ್ಬರಿ ಎರಡೂವರೆ ದಶಕ ಅಂದ್ರೆ 25 ವರ್ಷಗಳ ಹಿಂದೆ. 2000ರ ಸಮಯದಲ್ಲಿ ಮುನ್ನುಡಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದರು. ನಂತರ 2002ರ ಸಮಯದಲ್ಲಿ ಬಂದ 'ತುಂಟಾಟ' ಸಿನಿಮಾ ಮೂಲಕ ದೊಡ್ಡ ಹೆಸರನ್ನೂ ಸಂಪಾದನೆ ಮಾಡಿದರು. 'ತುಂಟಾಟ' ಸಿನಿಮಾದಲ್ಲಿ ಅನಿರುದ್ಧ್ ಜೊತೆ ಮಿಂಚಿದ ನಂತರ ಛಾಯಾ ಸಿಂಗ್‌ಗೆ ಹತ್ತಾರು ಸಿನಿಮಾ ಆಫರ್ ಕೂಡ ಬಂದವು. ಇದೀಗ ಅಮೃತಧಾರೆ ಧಾರಾವಾಹಿ ಮೂಲಕ ಕನ್ನಡಿಗರ ಮನೆ & ಮನಸ್ಸಿಗೆ ಹತ್ತಿರವಾಗಿದ್ದಾರೆ. ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಗರ್ಭಿಣಿ, ಅಭಿಮಾನಿಗಳಿಗೆ ಸಿಕ್ಕಿತು ಭರ್ಜರಿ ಸುದ್ದಿ...

ನಟಿ ಛಾಯಾ ಸಿಂಗ್ ಅಭಿಮಾನಿಗಳು...
ಅಮೃತಧಾರೆ ಧಾರಾವಾಹಿ ಟಿಆರ್‌ಪಿ ಲೆಕ್ಕಾಚಾರದಲ್ಲೂ ದೊಡ್ಡ ದಾಖಲೆ ಬರೆದು, ಕನ್ನಡ ಟಿವಿ ಚಾನಲ್ ಲೋಕದಲ್ಲೇ ಹೊಸ ಹವಾ ಎಬ್ಬಿಸಿರುವ ಸೀರಿಯಲ್. ಅದರಲ್ಲೂ ನಟಿ ಛಾಯಾ ಸಿಂಗ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಅಮೃತಧಾರೆ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದು, ನಟಿ ಛಾಯಾ ಸಿಂಗ್ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರ ನಿರ್ವಹಿಸುತ್ತಾರೆ.
ನಟಿ ಛಾಯಾ ಸಿಂಗ್ ಅಂದ್ರೆ ಅಮೃತಧಾರೆ ಧಾರಾವಾಹಿ ಭೂಮಿಕಾ ಇದೀಗ ಗರ್ಭಣಿ ಆಗಿದ್ದು, ಹೀಗಾಗಿ ಅವರ ಪತಿ ಸಿಕ್ಕಾಪಟ್ಟೆ ಕೇರ್ ಕೂಡ ತಗೋತಿದ್ದಾರೆ. ಆದರೆ ಗಂಡನ ಆ ಕೇರಿಂಗ್ ತುಂಬಾನೇ ಇರಿಟೇಷನ್ ಮಾಡುತ್ತಿದೆ ಅಂತಾ ನಟಿ ಗುಡುಗಿದ್ದಾರೆ. ಇದು ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದು, ಸೀರಿಯಲ್‌ನ ವಿಲನ್‌ಗಳ ಅಬ್ಬರ ಕೂಡ ಹೆಚ್ಚಾಗಿದೆ!
ಗಂಡ & ಹೆಂಡತಿಯ ನಿಜ ಬದುಕಿನ ಹೊಂದಾಣಿಕೆ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರ ನಿರ್ವಹಿಸುವ ನಟಿ ಛಾಯಾ ಸಿಂಗ್ ಅವರು ನಿಜ ಜೀವನದಲ್ಲೂ ಮದುವೆ ಆಗಿದ್ದು, ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ನಟ ಕೃಷ್ಣಾರನ್ನ ಮದುವೆ ಆಗಿರುವ ನಟಿ ಛಾಯಾ ಸಿಂಗ್, ಸಿನಿಮಾ & ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ & ಬಂಗಾಳಿ ಸಿನಿಮಾಗಳಲ್ಲಿ ಕೂಡ ಮಿಂಚಿದ್ದರು ಛಾಯಾ ಸಿಂಗ್. ಈ ಮೂಲಕ ನಟಿ ಛಾಯಾ ಸಿಂಗ್ ಅವರಿಗೆ ಈಗ ಕೂಡ ಸಿಕ್ಕಾಪಟ್ಟೆ ಆಫರ್ಸ್ ಬರುತ್ತಿದ್ದು, ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ.












Click it and Unblock the Notifications