ದರ್ಶನ್‌ರ ಕಾಟೇರ ಹವಾ ಭಾರತದ ಜೊತೆಗೆ ವಿದೇಶದಲ್ಲೂ ಜೋರಾಗಿದೆ!

ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಕೇಳಿಬರುತ್ತಿರುವ ಒಂದೇ ಒಂದು ಹೆಸರು ಕಾಟೇರ ಮಾತ್ರ. ಇನ್ನೆನು 2023 ಮುಗಿಯುವ ಹೊತ್ತಿಗೆ ಕನ್ನಡ ನಾಡಿನ ಸಿನಿ ಮಂದಿರಗಳಲ್ಲಿ, ಅಬ್ಬರದಿಂದ ರಿಲೀಸ್ ಆಗಿದ್ದ ಕನ್ನಡಿಗರ ಸಿನಿಮಾ 'ಕಾಟೇರ' ಮುನ್ನುಗ್ಗಿದೆ. ಹೀಗೆ ನೋಡ ನೋಡತ್ತಲೇ, ಹಿಂದಿನ ಸಿನಿಮಾಗಳ ಹಲವು ದಾಖಲೆ ಪುಡಿ ಪುಡಿ ಮಾಡಿ ಮುನ್ನುಗ್ಗಿರುವ 'ಕಾಟೇರ' 100 ಕೋಟಿ ಕ್ಲಬ್ ಸೇರಿದೆ. ಇದೇ ವೇಳೆ ವಿದೇಶದಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೇಗೆ ರೆಸ್ಪಾನ್ಸ್ ಸಿಗ್ತಿದೆ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ವಿದೇಶದಲ್ಲು ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಾಗಿ ದರ್ಶನ್‌ರ ಸಿನಿಮಾ ನೋಡಲು ಬೇರೆ ದೇಶದಲ್ಲೂ, ಫ್ಯಾನ್ಸ್ ಕಾಯ್ತಾರೆ. ಇದೀಗ ಹೊರ ದೇಶದಲ್ಲೂ 'ಕಾಟೇರ' ಅಬ್ಬರ ತೋರಲು ಶುರು ಮಾಡಿದೆ. ಕಾಟೇರ ರಿಲೀಸ್ ಆಗಿ ಒಟ್ಟಾರೆ 9 ದಿನ ಕಳೆದಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆದಿದೆ. ಇದೇ ಸಮಯಕ್ಕೆ, ಒಮನ್ ದೇಶದ ಥಿಯೇಟರ್‌ನಲ್ಲಿ ದರ್ಶನ್ ಅವರ ಕಾಟೇರ ಸಿನಿಮಾ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಈ ಬಗ್ಗೆ ಅಭಿಮಾನಿಗಳು ವಿಡಿಯೋ ಕೂಡ ಶೇರ್ ಮಾಡಿದ್ದಾರೆ.

Challenging Star Darshans Movie Kaatera Roaring In Overseas Also

ವಿದೇಶದಲ್ಲೂ ಟಿಕೆಟ್‌ಗೆ ಡಿಮ್ಯಾಂಡ್!

ಹೌದು ಕರ್ನಾಟಕದ ಜೊತೆ ಭಾರತದ ವಿವಿಧ ರಾಜ್ಯದಲ್ಲಿ ಡಿಸೆಂಬರ್ 29ರಂದು ರಿಲೀಸ್ ಆಗಿದ್ದ, ಕನ್ನಡಿಗರ ಕಾಟೇರ ಈಗ ವಿದೇಶದಲ್ಲೂ ಅಬ್ಬರಿಸುತ್ತಿದೆ. ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶದಲ್ಲೂ ಅಬ್ಬರಿಸುತ್ತಿದೆ. ಅದೇ ರೀತಿ ಒಮನ್ ದೇಶದ ಥಿಯೇಟರ್‌ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಸ್ಟ್ರೇಲಿಯಾ ಮತ್ತಿತರ ಕಡೆಗಳಲ್ಲಿ ಕೂಡ ಕಾಟೇರ ಸಿನಿಮಾ ಇದೇ ರೀತಿಯ ಅಬ್ಬರದ ಪ್ರದರ್ಶನ ನೀಡ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಭರ್ಜರಿಯಾಗಿ ಓಡಾಡ್ತಿದೆ. ಅಭಿಮಾನಿ ಒಬ್ಬರು ಈ ಬಗ್ಗೆ ವಿಡಿಯೋ ಶೇರ್ ಮಾಡಿದ್ದು, ವಿದೇಶದಲ್ಲೂ ಕಾಟೇರ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ವಿಡಿಯೋಗಾಗಿ ಮುಂದೆ ನೋಡಿ.

200 ಕೋಟಿ ರೂಪಾಯಿ ಕ್ಲಬ್?

ಕಾಟೇರ ಸಿನಿಮಾ ರಿಲೀಸ್ ಆದ ದಿನವೇ ಫ್ಯಾನ್ಸ್ ಫಿಕ್ಸ್ ಆಗಿದ್ದರು. ಕನ್ನಡ ಇಂಡಸ್ಟ್ರಿಗೆ, ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಕ್ಕಾ ಅಂತಾ. ಕೋಟಿ ಕೋಟಿ ದರ್ಶನ್ ಫ್ಯಾನ್ಸ್ ಇಟ್ಟಿದ್ದ ಈ ಎಲ್ಲ ನಿರೀಕ್ಷೆ ಹುಸಿಯಾಗಿಲ್ಲ. ಭರ್ಜರಿಯಾಗಿ ಗೆದ್ದು ಬೀಗಿದೆ ಕನ್ನಡಿಗರ ಕಾಟೇರ. ಈಗಾಗಲೇ 'ಕಾಟೇರ' 100 ಕೋಟಿ ಕ್ಲಬ್ ಸೇರಿದ್ದು ಇದೀಗ 200 ಕೋಟಿ ರೂಪಾಯಿ ಕ್ಲಬ್ ಕಡೆಗೆ ಹೆಜ್ಜೆ ಹಾಕಿದೆ. ಇದೇ ರೀತಿ ಅಬ್ಬರ ತೋರಿಸಿದರೆ ಇನ್ನೇನು ಕೆಲವೇ ದಿನದಲ್ಲಿ ಅದನ್ನೂ ಸಾಧಿಸುವ ನಿರೀಕ್ಷೆ ಇದೆ.

ಹೊಸ ವರ್ಷಕ್ಕೆ ದೊಡ್ಡ ಗಿಫ್ಟ್

2023 ಮುಗಿದಿದ್ದು 2024 ಬಂದೇ ಬಿಟ್ಟಿದೆ ಹೊಸ ವರ್ಷಕ್ಕೆ ಕಾಲಿಟ್ಟು ಆಗಿದೆ. ವರ್ಷದ ಕೊನೆಯಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಅದರಲ್ಲೂ ದರ್ಶನ್ ಅವರ ಫ್ಯಾನ್ಸ್‌ಗೆ ದೊಡ್ಡ ಉಡುಗೊರೆಯೂ ಸಿಕ್ಕಿದೆ. ಕಾಟೇರ ಮೂಲಕ ದರ್ಶನ್ ಅವರು ಖದರ್ ತೋರಿಸಿದ್ದಾರೆ. ಈ ಮೂಲಕ, ಸ್ಯಾಂಡಲ್‌ವುಡ್‌ನಲ್ಲಿ ಅಂದ್ರೆ ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ. ಇನ್ನು ಹಲವು ದಿನ ಕಾಲ ಇದೇ ರೀತಿಯಾಗಿ ಕಾಟೇರ ಸಿನಿಮಾ ಅಬ್ಬರಿಸಿ ತನ್ನ ಗಳಿಕೆಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ.

Challenging Star Darshans Movie Kaatera Roaring In Overseas Also

ಒಟ್ನಲ್ಲಿ ಕಾಟೇರ ಸಿನಿಮಾ ಕನ್ನಡ ನಾಡಿನಲ್ಲಿ ಅಬ್ಬರಿಸುವ ಜೊತೆಗೆ ವಿದೇಶದಲ್ಲೂ ಕನ್ನಡಿಗರ ಖದರ್ ತೋರಿಸುತ್ತಿದೆ. ಹಾಗೇ ಹೊರ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕಾಟೇರನ ಅಬ್ಬರ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾಟೇರ ಸಿನಿಮಾ ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆ ಸೃಷ್ಟಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ದಾಖಲೆಗಳು ಮತ್ತಷ್ಟು ಹೆಚ್ಚಾಗುವ ಬಗ್ಗೆ ಕೂಡ ನಿರೀಕ್ಷೆ ಇದೀಗ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+