ನಟ ದರ್ಶನ್ ಅವರ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ!
ನಟ ದರ್ಶನ್ ಅವರಿಗೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ. ಅದ್ರಲ್ಲೂ ಶೂಟಿಂಗ್ ಸಮಯದಲ್ಲಿ ದರ್ಶನ್ ಅವರಿಗೆ ಆಗಾಗ ಪೆಟ್ಟು ಬೀಳುತ್ತಿದೆ. ಹೀಗಿದ್ದರೂ ಅದೆಲ್ಲ ಎದುರಿಸಿ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನ ರಂಜಿಸುತ್ತಿದ್ದಾರೆ. ಹೀಗಿದ್ದಾಗಲೇ ಮೊನ್ನೆ ಮೊನ್ನೆ ತಮ್ಮ 'ಡೆವಿಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಕೈಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ನಟ ದರ್ಶನ್ ಅವರ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ.
ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಘಟನೆಯಿಂದ ಬೆಚ್ಚಿಬಿದ್ದರು. ಆ ನಂತರ ಕೈ ನೋವು ಇದ್ದರೂ, ನಟ ದರ್ಶನ್ ಅವರು ಶೂಟಿಂಗ್‌ಗೆ ಹಾಜರ್ ಆಗಿದ್ದರು. ಇನ್ನೂ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದರ್ಶನ್ ಅವರ ಕೈಗೆ ಸರ್ಜರಿ ಮಾಡಲಾಗಿದ್ದು. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಅವರು ತಕ್ಷಣಕ್ಕೆ ಶೂಟಿಂಗ್ ಸ್ಪಾಟ್‌ಗೆ ವಾಪಸ್ ಬರಲು ಆಗಲ್ಲ ಎಂಬ ಸುದ್ದಿ ಕೂಡ ಶಾಕ್ ನೀಡಿದೆ. ಅದರಲ್ಲೂ ವೈದ್ಯರು ಈಗ ದರ್ಶನ್ ಅವರಿಗೆ ಕಡ್ಡಾಯ ವಿಶ್ರಾಂತಿಗೆ ಸೂಚನೆ ನೀಡಿರುವ ಕಾರಣಕ್ಕೆ ತಕ್ಷಣಕ್ಕೆ ಶೂಟಿಂಗ್‌ಗೆ ಬರಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ದರ್ಶನ್ ಅವರು ಎಷ್ಟು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ನಟ ದರ್ಶನ್ ಫ್ಯಾನ್ಸ್‌ಗೆ ಆಘಾತ?
'ಕಾಟೇರ' ಸಿನಿಮಾ ಮೂಲಕ ಇತ್ತೀಚೆಗೆ ಕಮಾಲ್ ಮಾಡಿದ್ದ ನಟ ದರ್ಶನ್ ಅವರು ಇದೇ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಶೂಟಿಂಗ್‌ಗೆ ಕೂಡ ಹಾಜರ್ ಆಗಿದ್ದರು. ಇದೇ ಕಾರಣ ಅಭಿಮಾನಿಗಳು ಕೂಡ ಡೆವಿಲ್ ಸಿನಿಮಾ ನೋಡಲು ಕಾಯುತ್ತಿದ್ದರು. ಆದರೆ ದಿಢೀರ್ ಈ ರೀತಿಯ ಘಟನೆ ನಡೆದು ಹೋಗಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಆಘಾತಕ್ಕೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ದರ್ಶನ್ ಅವರು ಬರೋಬ್ಬರಿ 1 ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಮೂಲಕ 'ಡೆವಿಲ್' ಸಿನಿಮಾ ಶೂಟಿಂಗ್ ಮುಂದೂಡಿಕೆ ಆಗಲಿದ್ದು, ಬಿಡುಗಡೆ ಕೂಡ ತಡವಾಗುವ ಸಾಧ್ಯತೆ ಇದೆ.
ದಿಢೀರ್ ಕೈಗೆ ಪೆಟ್ಟು ಬಿದ್ದಿತ್ತು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಗಾಯಗೊಂಡಿದ್ದು, 'ಡೆವಿಲ್' ಚಿತ್ರದ ಚಿತ್ರೀಕರಣದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಎಡಗೈ ನೋವಿನ ನಡುವೆ ಕೂಡ, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದರ್ಶನ್ ಅವರ ಕೈಗೆ ಶಸ್ತ್ರ ಚಿಕಿತ್ಸೆ ಆಗಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಆದಷ್ಟು ಬೇಗ ತಮ್ಮ ನೆಚ್ಚಿನ ನಟ ದರ್ಶನ್ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿ ಎಂದು, ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಈಗ ವೈದ್ಯರ ಸೂಚನೆ ಪ್ರಕಾರ ಇನ್ನೂ 1 ತಿಂಗಳು ವಿಶ್ರಾಂತಿಯ ಪಡೆಯಬೇಕಿದೆ.

'ಡೆವಿಲ್' ಸಿನಿಮಾ ಶೂಟಿಂಗ್...
ಮಿಲನಾ ಪ್ರಕಾಶ್ ಡೈರೆಕ್ಷನ್ ಮಾಡಿರುವ 'ಡೆವಿಲ್' ಸಿನಿಮಾ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಈ ಸಿನಿಮಾಗೆ ದೊಡ್ಡ ಸೆಟ್ ಹಾಕಿ ಫೈಟ್ ಸನ್ನಿವೇಶ ಸೆರೆ ಹಿಡಿಯಲಾಗಿದ್ದು. ಶೂಟಿಂಗ್ ನಡೆಯುವಾಗ ನಟ ದರ್ಶನ್ ಅವರ ಕೈಗೆ ಪೆಟ್ಟಾಗಿತ್ತು ಎನ್ನಲಾಗಿದೆ. ಕೈ ನೋವಿಗೆ ಪಟ್ಟಿ ಧರಿಸಿ ದರ್ಶನ್ ಅವರು ಕೆಲವು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ವೈದ್ಯರು ಆಪರೇಷನ್‌ಗೆ ಸೂಚಿಸಿರುವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅದೆಲ್ಲಾ ಏನೇ ಇದ್ದರೂ, ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ಅವರು ಆದಷ್ಟು ಬೇಗ ಗುಣಮುಖರಾಗಿ ಶೂಟಿಂಗ್‌ನ ಶುರು ಮಾಡಲಿ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ.












Click it and Unblock the Notifications