ಚಿಕ್ಕಣ್ಣನ ‘ಉಪಾಧ್ಯಕ್ಷ’ ನೋಡಿ ಡಿ-ಬಾಸ್ ದರ್ಶನ್ ಬಿದ್ದು ಬಿದ್ದು ನಕ್ಕಿದ್ದು ಯಾಕೆ?

ಡಿ-ಬಾಸ್ ದರ್ಶನ್ ಅಂದ್ರೆ ಕನ್ನಡ ಸಿನಿಮಾ ರಂಗದಲ್ಲಿ ಒಂದು ಗತ್ತು ಇದೆ, ಇನ್ನು ಇವರ ಬೆನ್ನಿಗೆ ಕೋಟ್ಯಂತರ ಅಭಿಮಾನಿಗಳ ಬೆಂಬಲ ಕೂಡ ಇದೆ. ಹಾಗೇ ದರ್ಶನ್ ಅವರ ಆತ್ಮೀಯ ವ್ಯಕ್ತಿ ಚಿಕ್ಕಣ್ಣ ಅವರು ಕೂಡ ಹೀರೋ ಆಗಿ ಹೊಸ ಲೈಫ್ ಶುರು ಮಾಡಿದ್ದಾರೆ. ಹೀಗಾಗಿ, ಇದೀಗ ಚಿಕ್ಕಣ್ಣ ಅವರ ಸಿನಿಮಾ 'ಉಪಾಧ್ಯಕ್ಷ' ನೋಡಿದ್ದಾರೆ ಡಿ-ಬಾಸ್ ದರ್ಶನ್ ಅವರು. ಆದರೆ ಇದೇ ವೇಳೆ ನಟ ದರ್ಶನ್ ಬಿದ್ದು ಬಿದ್ದು ನಕ್ಕಿದ್ದು ಯಾಕೆ ಅಂತಾ ಗೊತ್ತಾ?

ನಟ ದರ್ಶನ್ & ಚಿಕ್ಕಣ್ಣ ನಡುವೆ ಆತ್ಮೀಯ ಸಂಬಂಧವಿದೆ. ಇದು ಪದೇ ಪದೇ ಪ್ರೂವ್ ಆಗ್ತಾ ಇದೆ. ಅದ್ರಲ್ಲೂ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದಾರೆ. ಆದರೆ ಇದುವರೆಗೂ 'ಉಪಾಧ್ಯಕ್ಷ' ಸಿನಿಮಾವನ್ನ ನಟ ದರ್ಶನ್ ಅವರು ನೋಡಿರಲಿಲ್ಲ. ಈ ಕೊರಗು ಅಭಿಮಾನಿಗಳಿಗು ಕೂಡ ಕಾಡುತ್ತಾ ಇತ್ತು. ಆದರೆ ಇದೀಗ ಆ ಆಸೆ ಕೂಡ ಈಡೇರಿದ್ದು, ನಟ ದರ್ಶನ್ ಅವರು ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿರುವ 'ಉಪಾಧ್ಯಕ್ಷ' ಸಿನಿಮಾ ನೋಡಿದ್ದಾರೆ. ಹಾಗೇ ಸಿನಿಮಾ ಬಗ್ಗೆ ಮುಕ್ತ, ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Challenging Star Darshan Watched Chikkanna Starrer Upadhyaksha Kannada Movie

ದರ್ಶನ್ ಬಿದ್ದು ಬಿದ್ದು ನಕ್ಕಿದ್ದೇಕೆ?

ಅಷ್ಟಕ್ಕೂ ವಿಶೇಷ ಪ್ರದರ್ಶನದಲ್ಲಿ 'ಉಪಾಧ್ಯಕ್ಷ' ಸಿನಿಮಾ ನೋಡಿದ ನಟ ದರ್ಶನ್ ಅವರು ಚಿಕ್ಕಣ್ಣನ ನಟನೆಗೆ ಫಿದಾ ಆಗಿದ್ದಾರೆ. ಹಾಗೇ ಮೇಕಿಂಗ್ ಬಗ್ಗೆಯೂ ಖುಷಿ ವ್ಯಕ್ತಪಡಿಸಿದ್ದು, ಇದರ ಜೊತೆಗೆ ಬಿದ್ದು ಬಿದ್ದು ನಕ್ಕಿದ್ದಾರೆ. ಯಾಕಂದ್ರೆ 'ಉಪಾಧ್ಯಕ್ಷ' ಸಿನಿಮಾದಲ್ಲಿ ಡಿ-ಬಾಸ್ ದರ್ಶನ್ ಅವರ 'ರಾಬರ್ಟ್' ಸಿನಿಮಾ ಸೀನ್ ಇದೆ. ಅದರಲ್ಲಿ ದರ್ಶನ್ ಅವರ ಫೈಟಿಂಗ್ ಸೀನ್ ನೋಡಿ, ಚಿಕ್ಕಣ್ಣ ಇನ್ಸ್‌ಪೈರ್ ಆಗುತ್ತಾರೆ. ಆದರೆ ಕೊನೆಯಲ್ಲಿ ಇದನ್ನೆಲ್ಲ ಕಾಮಿಡಿ, ಕಾಮಿಡಿಯಾಗಿ ತೋರಿಸಲಾಗಿದೆ. ಇದೇ ಸೀನ್ ನೋಡಿ ಈಗ ನಟ ದರ್ಶನ್ ಮನಸ್ಸು ತುಂಬಿ ನಕ್ಕಿದ್ದಾರೆ. ಹಾಗೇ ಚಿಕ್ಕಣ್ಣನ ಬೆನ್ನು ತಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಚಿಕ್ಕಣ್ಣನ ಡಾನ್ಸ್ ಬಗ್ಗೆ ದರ್ಶನ್ ಹೇಳಿದ್ದೇನು?

ಸಿನಿಮಾ ನೋಡಿದ ಬಳಿಕ 'ಉಪಾಧ್ಯಕ್ಷ' ಚಿತ್ರದ ಬಗ್ಗೆ ಮಾತನಾಡಿರುವ ಡಿ-ಬಾಸ್ ದರ್ಶನ್ ಅವರು, ಚಿಕ್ಕಣ್ಣನ ಡಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹಾಗೇ ಸಿನಿಮಾ ಮೇಕಿಂಗ್‌ನ ಬಗ್ಗೆ ನಿರ್ದೇಶಕರಿಗೂ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಇದೀಗ ನಟ ದರ್ಶನ್ ಅವರ ಈ ಮಾತುಗಳು ವೈರಲ್ ಆಗುತ್ತಿವೆ. ಹಾಗೇ ಕಾಟೇರ & ಉಪಾಧ್ಯಕ್ಷ ಭೇಟಿ ಆಗಿರುವ ಬಗ್ಗೆ, ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಶುರುವಾಗಿದೆ.

Challenging Star Darshan Watched Chikkanna Starrer Upadhyaksha Kannada Movie

ಹಂತ ಹಂತವಾಗಿ ಬೆಳೆದ ಚಿಕ್ಕಣ್ಣ

ಕನ್ನಡ ಸಿನಿ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ದರು ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದಿದ್ದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ ಕನ್ನಡ ಸಿನಿಮಾ ರಂಗದಲ್ಲಿ ಬಿಡುವೇ ಇಲ್ಲದ ನಟನಾಗಿ ಬೆಳೆದು ನಿಂತಿದ್ದಾರೆ ಚಿಕ್ಕಣ್ಣ. ಈ ನಟ ಮೊದಲನೆ ಬಾರಿಗೆ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ಸಮಯದಲ್ಲೇ ಕಾಟೇರ ದರ್ಶನ್ ಅವರು ಚಿಕ್ಕಣ್ಣನ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಚಿಕ್ಕಣ್ಣ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಿಡುಗಡೆಯಾಗಿ 2 ವಾರಕ್ಕೆ ಸುಮಾರು 10 ಕೋಟಿ, ಕಲೆಕ್ಷನ್ ಮಾಡಿದೆ ಎನ್ನುವ ಮಾತು ಓಡಾಡುತ್ತಿದೆ. ಹೀಗೆ 10 ಕೋಟಿ ರೂಪಾಯಿ ಗಳಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಓಡಾಡುತ್ತಿದೆ. ಆದರೆ ಈ ಕುರಿತು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಉಪಾಧ್ಯಕ್ಷ ಚಿತ್ರ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಚರ್ಚೆ ಜೋರಿದೆ. ಈಗಲೂ ಈ ಸಿನಿಮಾ ಹತ್ತಾರು ಚಿತ್ರ ಮಂದಿರದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗೇ ದರ್ಶನ್ ಅವರು ಕೂಡ ಸಿನಿಮಾ ನೋಡಿರುವುದು ಈಗ ಮತ್ತಷ್ಟು ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+