‘ಕಾಟೇರ’ನಿಗೆ ಕಂಟಕ: ಪೊಲೀಸ್ ಠಾಣೆಗೆ ಬಂದ ನಟ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಸಿನಿಮಾ ಅಬ್ಬರಿಸುತ್ತಿದೆ. ಹೀಗಿದ್ದಾಗಲೇ ನಟ ದರ್ಶನ್ ಅವರು ಇದೀಗ ದಿಢೀರ್ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ನಟ ದರ್ಶನ್ ಅವರು ಇದೀಗ ದಿಢೀರ್ ಪೊಲೀಸ್ ಠಾಣೆಗೆ ಬಂದಿದ್ದು ಏಕೆ? ಕಾಟೇರ ಸಂಭ್ರಮದಲ್ಲಿ ಇದ್ದ ಚಾಲೆಂಜಿಂಗ್ ಸ್ಟಾರ್‌ಗೆ ಈಗ ಸಮಸ್ಯೆ ಎದುರಾಯ್ತಾ? ಆ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯೋಣ, ಮುಂದೆ ಓದಿ.

ಅಂದಹಾಗೆ ಬೆಂಗಳೂರಿನ ಪ್ರತಿಷ್ಠಿತ ಪಬ್‌‍ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ, ಎನ್ನುವ ಆರೋಪ ಹಿನ್ನೆಲೆ ನಟ ದರ್ಶನ್ (Darshan) ಅವರಿಗೆ ಸಮಸ್ಯೆ ಎದುರಾಗಿದೆ. ಹೀಗಿದ್ದಾಗಲೇ ಅವರು ದಿಢೀರ್ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಸುಬ್ರಹ್ಮಣ್ಯ ನಗರ ಠಾಣೆಗೆ ಹಾಜರಾಗಿದ್ದು ಭಾರಿ ಕೂತೂಹಲ ಕೆರಳಿಸಿದೆ.

Challenging Star Darshan Visites To Police Station In Bengaluru

ಅಲ್ಲದೆ ನಟ ದರ್ಶನ್ ಅವರ ಜೊತೆ, ಕನ್ನಡ ಸಿನಿಮಾ ರಂಗದ ಮತ್ತಷ್ಟು ನಟರು ಕೂಡ ಪೊಲೀಸ್ ಠಾಣೆಗೆ ತೆರಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಏನಾಯ್ತು ಅಂತಾ ಅಭಿಮಾನಿಗಳು ಕೂಡ ಆಘಾತಕ್ಕೆ ಒಳಗಾಗಿದ್ದಾರೆ.

ಪೊಲೀಸರಿಂದ ಬಿಗಿ ಬಂದೋಬಸ್ತ್

ಇನ್ನು ನಟ ದರ್ಶನ್ ಅವರು ಸುಬ್ರಹ್ಮಣ್ಯ ನಗರ ಠಾಣೆಗೆ ಬರಲಿದ್ದಾರೆ ಎನ್ನು ಸುದ್ದಿಯನ್ನ ತಿಳಿದ ತಕ್ಷಣ, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹಾಗೇ ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಹಾಗೂ ಪೊಲೀಸ್ ಠಾಣೆ ಬಳಿ ಕೂಡ ಬ್ಯಾರಿಕೇಡ್ ಹಾಕಿ ನಟ ದರ್ಶನ್ ಅವರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಆಗಮಿಸಿದ್ದರು. ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳ ಸಂಖ್ಯೆಯೇ ಇಲ್ಲಿ ಹೆಚ್ಚಾಗಿತ್ತು.

ಪೊಲೀಸರಿಗೆ ಶುರುವಾಯ್ತು ಸೆಲ್ಫಿ ಕಾಟ!

ಇನ್ನ ಪೊಲೀಸ್ ಠಾಣೆಗೆ ನಟ ದರ್ಶನ್ ಅವರು ಭೇಟಿ ನೀಡಿದ ಸಮಯಕ್ಕೆ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಸುತ್ತುವರಿದ್ದರು. ಅದರಲ್ಲೂ ತಮ್ಮ ನೆಚ್ಚಿನ ನಟನ ಜೊತೆಗೆ ಒಂದು ಸೆಲ್ಫಿ ಫೋಟೋ ತೆಗೆಸಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಇದೇ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಗುಂಪನ್ನು ಚದುರಿಸಿದರು. ಆಗ ಸೆಲ್ಫಿಗೋಸ್ಕರ ನಿಂತ ಅಭಿಮಾನಿಗಳು ಕೂಡ ಬೇಸರದಿಂದ ದೂರ ಹೋಗಿದ್ದಾರೆ.

Challenging Star Darshan Visites To Police Station In Bengaluru

ಕಾಟೇರ ಅಬ್ಬರದ ನಡುವೆ ಬೇಸರ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗಿನ ಹೈಪ್ ಇರುತ್ತೆ & ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕಾಯ್ತಾರೆ. ಅದೇ ರೀತಿ ಕಾಟೇರ ಸಿನಿಮಾ ಕೂಡ, ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆಗಳನ್ನು ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಆದರೆ ಈ ವೇಳೆ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ಅಭಿಮಾನಿಗಳಿಗೆ ಒಂದಷ್ಟು ಗೊಂದಲ ಮೂಡಿಸಿದೆ.

ಒಟ್ನಲ್ಲಿ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ತಮ್ಮ ವಿರುದ್ಧ ಈಗ ಕೇಳಿಬಂದ ಆರೋಪಕ್ಕೆ ವಿವರಣೆ ನೀಡಿದ್ದಾರೆ. ಹೀಗಾಗಿ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ನಟ ದರ್ಶನ್ ಅವರು ಅಲ್ಲಿಂದ ಮನೆಗೆ ತೆರಳಲಿದ್ದು, ಪೊಲೀಸರು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹಾಗೇ ಅಭಿಮಾನಿಗಳು & ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+