D-Boss: ಇವಳು ಇರ್ತಾಳೋ, ಅವಳು ಇರ್ತಾಳೋ: ಆದ್ರೆ ನಂಗೆ ಸಿನಿಮಾ ಮಾತ್ರ ಮುಖ್ಯ ಅಂದ್ರು ‘ಡಿ-ಬಾಸ್’ ದರ್ಶನ್!
ನಟ ದರ್ಶನ್ ಮತ್ತೊಮ್ಮೆ ಗುಡುಗಿದ್ದಾರೆ, ಅದರಲ್ಲೂ ತಮ್ಮ ಶತ್ರುಗಳ ವಿರುದ್ಧ ಇಷ್ಟುದಿನ ನೇರವಾಗಿ ವಾರ್ನಿಂಗ್ ಕೊಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಈಗ ತಮ್ಮ ಬದುಕಿನಲ್ಲಿ ಬಂದ ಹುಡುಗಿಯರ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಅದರಲ್ಲೂ ನಟಿ ಪವಿತ್ರ ಗೌಡ ಹಾಗೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಕ್ಲಾಶ್ ನಡುವೆ, ದರ್ಶನ್ ಅವರೀಗ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ನಟ ದರ್ಶನ್ ಹೇಳಿದ್ದು ಏನು?
ಸಿನಿಮಾ ರಂಗದಲ್ಲಿ ನಟ ದರ್ಶನ್ 25 ವರ್ಷ ಪೂರೈಸಿದ್ದಾರೆ. ಈ ಸಂಭ್ರಮ ಶ್ರೀರಂಗಪಟ್ಟದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಬೃಹತ್ ಸಮಾರಂಭದಲ್ಲಿ, ಸಂಸದೆ ಸುಮಲತಾ ಅಂಬರೀಶ್ ಸೇರಿ ಸಾಕಷ್ಟು ಗಣ್ಯರು ಭಾಗವಹಿಸಿದ್ದರು. ದರ್ಶನ್ ಆಪ್ತರಾದ ಧನ್ವೀರ್ ಗೌಡ, ಚಿಕ್ಕಣ್ಣ ಸೇರಿ ಝೈದ್‌ಖಾನ್, ವಿನೋದ್ ಪ್ರಭಾಕರ್, ವಿನೋದ್ ರಾಜ್ ಹೀಗೆ ದೊಡ್ಡ ದೊಡ್ಡ ಸ್ಟಾರ್ಸ್ ಭಾಗವಹಿಸಿದ್ದರು. ಈ ವೇಳೆ ನಟ ದರ್ಶನ್ ತಮ್ಮ ಸಿನಿಮಾ ಜೀವನದ 25 ವರ್ಷಗಳ ಏಳು ಬೀಳನ್ನು ಪ್ರಸ್ತಾಪ ಮಾಡಿದರು. ಆಗಲೇ ಪರೋಕ್ಷವಾಗಿ ನಟಿ ಪವಿತ್ರ ಗೌಡ ಮತ್ತು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಕ್ಲಾಶ್ ಬಗ್ಗೆಯೂ ಪ್ರಸ್ತಾಪ ಆಯಿತು.

ಇವತ್ತು ಇವಳು ಇರ್ತಾಳೋ...
ಇದೀಗ ನಟ ದರ್ಶನ್ ಅವರು ಹೇಳಿದಂತೆ, ಇವತ್ತು ಇವಳು ಇರ್ತಾಳೋ ಇವಳು, ನಾಳೆ ಅವಳು ಇರ್ತಾಳೋ ಅವಳು, ಹೇ ಹೋಗ್ರೇ ನಿಮ್ ಅಜ್ಜಿ ನಾ ಬಡಿಯಾ ನಿಮಗಳಿಗೆಲ್ಲಾ ತಲೆ ಕೆಡಿಸಿಕೊಂಡು ನಾನ್ ಯಾಕ್ರಯ್ಯ ಕೂತ್ಕೊಳ್ಳಿ? ನನಗೆ ನನ್ನ ಸಿನಿಮಾ, ನನ್ನ ಕೆಲಸ, ನನ್ನ ಮೇಲೆ ದುಡ್ಡು ಹಾಕಿದ ನಿರ್ಮಾಪಕರು, ನನ್ನ ಸಿನಿಮಾ ನಿರ್ದೇಶಕರು, ನನ್ನ ತಂತ್ರಜ್ಞರು ಅಷ್ಟೇ ನನಗೆ ಮುಖ್ಯ ಎಂದಿದ್ದಾರೆ ನಟ ದರ್ಶನ್. ಈ ಮೂಲಕ ನಟ ದರ್ಶನ್ ವೈಯಕ್ತಿಕ ಜೀವನದ ಕುರಿತು ಇದೀಗ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಆ ವಿಡಿಯೋಗೆ ಮುಂದೆ ಓದಿ.
200 ಕೋಟಿ ರೂಪಾಯಿ ಕ್ಲಬ್
ನಟ ದರ್ಶನ್ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅದರಲ್ಲೂ ದರ್ಶನ್ ಅವರ ಕಾಟೇರ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಕ್ರಿಸ್‌ಮಸ್ ರಜೆ ಸಂಭ್ರಮದಲ್ಲೇ 'ಕಾಟೇರ' ಸಿನಿಮಾ ಹೊಸ ವರ್ಷಕ್ಕೆ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿತ್ತು. ಡಿ. 29 ಕ್ಕೆ ಬಿಡುಗಡೆ ಆಗಿದ್ದ ಕಾಟೇರ ಹೊಸ ಹೊಸ ದಾಖಲೆ ನಿರ್ಮಾಣ ಮಾಡಿ, ನೋಡ ನೋಡುತ್ತಲೆ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ತನ್ನ ತಾಕತ್ ತೋರಿಸಿತ್ತು. ಅಲ್ಲದೆ, ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನೂ ಮೀರಿಸಿ ಕನ್ನಡಿಗರ 'ಕಾಟೇರ' ಅಭಿಮಾನಿಗಳಿಗೆ ಹಬ್ಬವನ್ನೇ ಕೊಟ್ಟಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿ ದಾಖಲೆ
ಕೆಜಿಎಫ್ & ಕಾಂತಾರ ಸಿನಿಮಾಗಳು ಈ ಮೊದಲು ಮಿಂಚಿದ್ದವು. 'KGF ಚಾಪ್ಟರ್-1' ಮತ್ತು 'KGF ಚಾಪ್ಟರ್ -2 & 'ಕಾಂತಾರ' ಭರ್ಜರಿ ದಾಖಲೆ ಬರೆದಿದ್ದು ಬಾಕ್ಸ್ ಆಫಿಸ್‌ನಲ್ಲು ಕೋಟಿ ಕೋಟಿ ಗಳಿಸಿದ್ದವು. ಆದರೆ ಕಾಂತಾರ & ಕೆಜಿಎಫ್ ದಾಖಲೆಯನ್ನು ಕೂಡ 'ಕಾಟೇರ' ಅಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಂಬ ಚರ್ಚೆ ನಡಿತಿದೆ. 'KGF-2' 1200 ಕೋಟಿ ರೂಪಾಯಿಯ ಗಳಿಸಿ ಅತಿಹೆಚ್ಚು ಗಳಿಸಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಿಸಿ & ನಟಿಸಿದ್ದ 'ಕಾಂತಾರ' ಸಿನಿಮಾ ಇದೆ.
ಈಗಲೂ ಕಾಟೇರ ಹವಾ ಜೋರು
ಅಷ್ಟಕ್ಕೂ 'KGF'-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಆ ದಾಖಲೆ 'ಕಾಟೇರ' ಮುರಿದಿದೆ ಎನ್ನಲಾಗಿದೆ. 'ಕಾಂತಾರ' ಕನ್ನಡ ವರ್ಷನ್ 160 ಕೋಟಿ ರೂಪಾಯಿ & 'KGF-2' ಸಿನಿಮಾ 165 ಕೋಟಿ ರೂ. ಬಾಚಿತ್ತು. ಹೀಗೆ 'ಕಾಟೇರ' ಸಿನಿಮಾ ಸದ್ಯ ಈ ದಾಖಲೆ ಮುರಿದು ದೊಡ್ಡ ಮೊತ್ತ ಸಂಪಾದಿಸಿದೆ ಅಂತ ಹೇಳಲಾಗುತ್ತಿದೆ. ಈ ಸಿನಿಮಾ ಅಬ್ಬರ ಮುಂದುವರಿಸುತ್ತಾ ಇಂದಿಗೂ ಬಾಕ್ಸ್ ಆಫಿಸ್‌ನಲ್ಲಿ ಅಬ್ಬರಿಸುತ್ತಿದೆ. ಹೀಗಾಗಿ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ. ಇದೇ ವೇಳೆ ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ನಡೆದ 'ಬೆಳ್ಳಿ ಪರ್ವ' ಕಾರ್ಯಕ್ರಮದಲ್ಲೇ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಜೀವನದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.












Click it and Unblock the Notifications