‘ಡಿ-ಬಾಸ್’ ದರ್ಶನ್ ಅರ್ಜುನ ಆನೆ ಬಗ್ಗೆ ಹೇಳಿದ್ದು ಏನು?

ನಟ 'ಡಿ-ಬಾಸ್' ದರ್ಶನ್ ಅವರಿಗೆ ಪ್ರಾಣಿಗಳ ಬಗ್ಗೆ, ಅರಣ್ಯದ ಬಗ್ಗೆ, ಪ್ರಕೃತಿಯ ಕುರಿತು ಎಷ್ಟೆಲ್ಲಾ ಕಾಳಜಿ & ಪ್ರೀತಿ ಇದೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗಿದ್ದಾಗ ಕೆಲ ದಿನಗಳ ಹಿಂದೆ ಕನ್ನಡಿಗರನ್ನ ಅಗಲಿದ್ದ ದಸರಾ ಆನೆ 'ಅರ್ಜುನ' ಬಗ್ಗೆ ಮತ್ತೊಮ್ಮೆ ಡಿ-ಬಾಸ್ ದರ್ಶನ್ ಮಾತನಾಡಿದ್ದಾರೆ. ಹಾಗಾದ್ರೆ ದಸರಾ ಆನೆ 'ಅರ್ಜುನ'ನ ಬಗ್ಗೆ ನಟ ದರ್ಶನ್ ಅವರು ಹೇಳಿದ್ದೇನು? ಬನ್ನಿ ತಿಳಿಯೋಣ.

ಅಂದಹಾಗೆ ಹಾಸನದ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು, ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿದ್ದ. 2023ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಈ ಘಟನೆ ಜನರನ್ನ ತೀವ್ರ ನೋವಿಗೆ ತಳ್ಳಿತ್ತು. ಅರ್ಜುನ ಆನೆ ಸಾವು ಕನ್ನಡಿಗರನ್ನು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿತ್ತು. ಅದರಲ್ಲೂ, 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಬಗ್ಗೆ ಕನ್ನಡಿಗರು ಪ್ರೀತಿಯನ್ನು ಹೊಂದಿದ್ದರು.

Challenging Star Darshan Spoke About Elephant Arjuna

ಕಾಡಾನೆ ಜೊತೆ ಸೆಣೆಸಾಟ ನಡೆಸಿ ಕನ್ನಡ ನಾಡಿನ ಜನರ ಜೀವನ ರಕ್ಷಣೆ ಮಾಡುವಾಗ ಅರ್ಜುನ ಮೃತಪಟ್ಟಿದ್ದ. ಹೀಗಿದ್ದರೂ ಅರ್ಜುನ ಆನೆಯ ಬಗ್ಗೆ ಸರ್ಕಾರ & ಅರಣ್ಯ ಇಲಾಖೆ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಟ ದರ್ಶನ್ ಧ್ವನಿ ಎತ್ತಿದ್ದಾರೆ. ಹಾಗಾದ್ರೆ ಡಿ-ಬಾಸ್ ದರ್ಶನ್ ಅವರು ಇದೀಗ ಅರ್ಜುನ ಆನೆ ಬಗ್ಗೆ ಹೇಳಿದ್ದೇನು? ಅರ್ಜುನ ಆನೆಯ ಕುರಿತು ದರ್ಶನ್ ಅವರು ಬರೆದುಕೊಂಡಿರುವುದು ಏನು? ಮುಂದೆ ಓದಿ.

ಅರ್ಜುನನ ಬಗ್ಗೆ ಯಾಕೆ ನಿರ್ಲಕ್ಷ್ಯ?

ಹೌದು ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ನಟ ದರ್ಶನ್ ಅವರು 'ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿ ಆಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು.' ಎಂದು ಕೋರಿದ್ದಾರೆ.

ಅರಣ್ಯ ಇಲಾಖೆ ಏನು ಮಾಡುತ್ತಿದೆ?

ಒಟ್ನಲ್ಲಿ ಮೂಖ ಪ್ರಾಣಿಗಳ ವಿಚಾರದಲ್ಲಿ ಆಳುವ ವರ್ಗದ ಅಸಢ್ಯೆ ಮುಂದುವರಿಯುತ್ತಿದ್ದು ಜನ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅದ್ರಲ್ಲೂ ನಮ್ಮ ನಾಡಿಗೆ ಹೆಮ್ಮೆ ತಂದಿದ್ದ ದಸರಾ ಆನೆ 'ಅರ್ಜುನ' 2012 ರಿಂದ 2019ರ ತನಕ ಅಂಬಾರಿ ಹೊತ್ತಿದ್ದ. ಈ ಮೂಲಕವಾಗಿ ಅರ್ಜುನ ಆನೆ ಮೈಸೂರು ದಸರಾ ಮಹೊತ್ಸವದಲ್ಲಿ ಮಿಂಚಿದ್ದ. ಆದರೆ ಕಾಡಾನೆ ಸೆರೆಹಿಡಿದು ನಾಡಲ್ಲಿ ಇರುವ ಜನರನ್ನ ರಕ್ಷಣೆ ಮಾಡುವ ಕೆಲಸದಲ್ಲಿ ಜೀವ ಬಿಟ್ಟಿದ್ದ. ಹೀಗೆ ಮನುಷ್ಯನ ಒಳಿತಿಗೆ ತನ್ನ ಜೀವವನ್ನೇ ಬಿಟ್ಟಿರುವ, ಅರ್ಜುನ ಆನೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಆರೋಪ ಇದೀಗ ಕೇಳಿಬಂದಿದೆ. ಹೀಗಾಗಿ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರ ಆಕ್ರೋಶ ಇನ್ನಷ್ಟು ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+