190 ಕೋಟಿ ರೂಪಾಯಿ ಗಳಿಸಿದ ‘ಕಾಟೇರ’! ಕಾಂತಾರ & ಕೆಜಿಎಫ್ ದಾಖಲೆಗಳು ಮುರಿದು ಹೋದವಾ?

ಕನ್ನಡಿಗರ ಸಿನಿಮಾ 'ಕಾಟೇರ' ಗಲ್ಲಾಪೆಟ್ಟಿಗೆ ತುಂಬಾ ಕಾಸು ಮಾಡುತ್ತಿದೆ. ತನ್ನ ಕಥೆಯ ಮೂಲಕ ಹಾಗೂ ನಿರೂಪಣೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿರುವ ಕಾಟೇರ ಈಗ ಬಾಕ್ಸ್ ಆಫಿಸ್‌ನಲ್ಲಿ ಕೂಡ ಧೂಳೆಬ್ಬಿಸಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರ, ಹತ್ತಾರು ದಾಖಲೆ ನಿರ್ಮಾಣ ಮಾಡಿದೆ. ಜೊತೆಗೆ ಕಾಂತಾರ & ಕೆಜಿಎಫ್ ದಾಖಲೆಗಳನ್ನೂ ಕಾಟೇರ ಮುರಿದಿದೆಯಾ? ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಆ ಬಗ್ಗೆ ಮಾಹಿತಿಗೆ ಮತ್ತು ಕಾಟೇರ ಇಲ್ಲಿಯವರೆಗೂ ಗಳಿಸಿರುವ ಹಣದ ಬಗ್ಗೆ ತಿಳಿಯಲು ಮುಂದೆ ಓದಿ.

ಕಾಟೇರ ಸಿನಿಮಾ ಇನ್ನೇನು 25 ದಿನ ಪೂರೈಸಲಿದ್ದು, ಅಭಿಮಾನಿಗಳು ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಹೀಗಿದ್ದಾಗಲೇ ಹೊಸ ಸುದ್ದಿಯೊಂದು ಹಲ್‌ಚಲ್ ಎಬ್ಬಿಸಿದೆ. ಅದು ಏನಪ್ಪಾ ಅಂದ್ರೆ ನಟ ದರ್ಶನ್ ಅವರ 'ಕಾಟೇರ' ಇದೀಗ ಗಲ್ಲಾಪೆಟ್ಟಿಗೆ ಅಲ್ಲಾಡಿಸಿ ಹೊಸ ಇತಿಹಾಸ ನಿರ್ಮಿಸಿದೆ ಎನ್ನಲಾಗಿದೆ. ಇದರ ಜೊತೆ ಕನ್ನಡ ಸಿನಿಮಾ ರಂಗದಲ್ಲಿ ಹಲ್‌ಚಲ್ ಎಬ್ಬಿಸಿದ್ದ ಕಾಂತಾರ & ಕೆಜಿಎಫ್ ದಾಖಲೆ ಕೂಡ ಬ್ರೇಕ್ ಮಾಡಿದೆ ಎನ್ನಲಾಗಿದೆ. ಹಾಗಿದ್ರೆ ಈ ಸುದ್ದಿ ಹಿಂದಿನ ಸತ್ಯ ಏನು? ಕಾಟೇರ ಇಲ್ಲಿವರೆಗೂ ಗಳಿಸಿರುವ ಹಣ ಎಷ್ಟು ಕೋಟಿ?

Challenging Star Darshan Movie Kaatera Reached 190 Crore Club

190 ಕೋಟಿ ಗಳಿಸಿದ ಕಾಟೇರ!

'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನವೂ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. 6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗೆ ಬಿಡುಗಡೆಯಾದ 2 ವಾರಕ್ಕೆಲ್ಲ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈಗ 25ನೇ ದಿನಕ್ಕೆ ಕಾಲಿಡುವ ಸಮಯಕ್ಕೆ ದರ್ಶನ್ ಅವರ ಕಾಟೇರ ಭರ್ಜರಿ 190 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.

ಕಾಂತಾರ & ಕೆಜಿಎಫ್ ದಾಖಲೆ?

ಅಂದಹಾಗೆ ಕನ್ನಡ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಕೊಟ್ಟಿದ್ದ ಕೀರ್ತಿ ಕೆಜಿಎಫ್ & ಕಾಂತಾರ ಸಿನಿಮಾಗೆ ಸಲ್ಲಬೇಕಿದೆ. 'KGF ಚಾಪ್ಟರ್-1' & 'KGF ಚಾಪ್ಟರ್‌ -2 ಹಾಗೂ 'ಕಾಂತಾರ' ಭರ್ಜರಿ ದಾಖಲೆ ಬರೆದು, ಬಾಕ್ಸ್ ಆಫಿಸ್‌ನಲ್ಲಿ ಕೋಟಿ ಕೋಟಿಯನ್ನ ಗಳಿಸಿದ್ದವು. ಆದರೆ ಈಗ ಕಾಂತಾರ & ಕೆಜಿಎಫ್ ದಾಖಲೆಯನ್ನು ಕೂಡ 'ಕಾಟೇರ' ಅಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಂಬ ಚರ್ಚೆ ನಡಿತಿದೆ. 'KGF-2' 1200 ಕೋಟಿ ರೂಪಾಯಿಯ ಗಳಿಸಿ ಅತಿಹೆಚ್ಚು ಗಳಿಸಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಿಸಿ & ನಟಿಸಿದ್ದ 'ಕಾಂತಾರ' ಸಿನಿಮಾ ಇದೆ.

ಕಾಟೇರ ಅಬ್ಬರ ಬಲು ಜೋರು

ಕಾಂತಾರ ಸಿನಿಮಾ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಾ ಇದೀಗ ಹೇಳಲಾಗುತ್ತಿದೆ. ನಂತರದ ಸ್ಥಾನದಲ್ಲಿ 250 ಕೋಟಿ ರೂಪಾಯಿ ಬಾಚಿದ್ದ, KGF-1 ಸಿನಿಮಾ ಇದೆ. ಇಷ್ಟೆಲ್ಲದರ ನಡುವೆ ಈ ಮೂರು ಸಿನಿಮಾಗಳು ಕರ್ನಾಟಕದಲ್ಲಿ ಗಳಿಸಿದ್ದು ಎಷ್ಟು? ಇದೀಗ ಕಾಟೇರ ಎರಡೂ ಸಿನಿಮಾಗಳ ದಾಖಲೆ ಮುರಿದು ಮುಂದೆ ನುಗ್ಗಿದೆಯಾ? ಪೂರ್ತಿ ಮಾಹಿತಿಗೆ ಮುಂದೆ ಓದಿ.

Challenging Star Darshan Movie Kaatera Reached 190 Crore Club

ಅಷ್ಟಕ್ಕೂ 'KGF'-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆ ದಾಖಲೆ 'ಕಾಟೇರ' ಮುರಿದಿದೆ ಎನ್ನಲಾಗಿದೆ. ಹಾಗೂ 'ಕಾಂತಾರ' ಕನ್ನಡ ವರ್ಷನ್, 160 ಕೋಟಿ ರೂಪಾಯಿ & 'KGF-2' ಸಿನಿಮಾ 165 ಕೋಟಿ ರೂ. ಬಾಚಿತ್ತು. ಹೀಗಾಗಿ 'ಕಾಟೇರ' ಸಿನಿಮಾ ಸದ್ಯ, ಈ ದಾಖಲೆ ಮುರಿದು ಈಗ 190 ಕೋಟಿ ರೂಪಾಯಿಯನ್ನ ಸಂಪಾದಿಸಿದೆ ಅಂತಾ ಹೇಳಲಾಗಿದೆ. ಇಷ್ಟೆಲ್ಲದರ ಮಧ್ಯೆ 'ಜೇಮ್ಸ್' ಹಾಗೂ 'ವಿಕ್ರಾಂತ್‌ ರೋಣ' ಸಿನಿಮಾ ಕಲೆಕ್ಷನ್ ಅನ್ನು ಕೂಡ 'ಕಾಟೇರ' ಮೀರಿಸಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+