150 ಕೋಟಿ ಕ್ಲಬ್ ಸೇರಿದ ‘ಕಾಟೇರ’, ಚಾಲೆಂಜಿಂಗ್ ಸ್ಟಾರ್ ಸಿನಿಮಾ ಕರಿಯರ್‌ನ ಹೊಸ ಇತಿಹಾಸ ಸೃಷ್ಟಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗಿನ ಹೈಪ್ ಇರುತ್ತೆ & ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕಾಯ್ತಾರೆ. ಅದೇ ರೀತಿ ಕಾಟೇರ ಸಿನಿಮಾ ಕೂಡ, ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆಗಳನ್ನು ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಆ ಬಗ್ಗೆ ಇದೀಗ ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.
'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನವು ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. 6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 7ನೇ ದಿನಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗೆ ಬಿಡುಗಡೆಯಾದ 2 ವಾರಕ್ಕೆಲ್ಲ ದರ್ಶನ್ ಅವರ ಸಿನಿಮಾ ಬರೋಬ್ಬರಿ 150 ಕೋಟಿ ರೂಪಾಯಿ ಕ್ಲಬ್ ಸೇರಿದೆಯಂತೆ.
ಹೆಚ್ಚಾಗುತ್ತಲೇ ಇದೆ 'ಕಾಟೇರ' ಸ್ಕ್ರೀನ್
ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದಲ್ಲಿ ಈಗ ಕಾಟೇರ ತಲ್ಲಣ ಸೃಷ್ಟಿ ಮಾಡಿದೆ. ಹಾಗೇ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸ್ಕ್ರೀನ್ ಹೆಚ್ಚು ಮಾಡಿಕೊಳ್ಳುತ್ತಿದೆ. ಅದರಲ್ಲೂ, ಸಿಂಗಲ್ ಸ್ಕ್ರೀನ್ ಕಾಟೇರ ಹವಾ ನೋಡಿ ಸಂಭ್ರಮಿಸಿದೆ. ಈಗಾಗಲೇ 150 ಕೋಟಿ ರೂಪಾಯಿ ಗಳಿಸಿದ ಕಾಟೇರ, ಈಗಲೂ ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಈ ಸಿನಿಮಾನ ಅಭಿಮಾನಿಗಳು ಈ ಕ್ಷಣಕ್ಕೂ ಸಂಭ್ರಮಿಸುತ್ತಿದ್ದಾರೆ. ಹಾಗಾದ್ರೆ ವಿದೇಶದಲ್ಲಿ ಈ ಸಿನಿಮಾಗೆ ಪ್ರತಿಕ್ರಿಯೆ ಹೇಗಿದೆ?
ವಿದೇಶದಲ್ಲೂ ಹವಾ ಬಲು ಜೋರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ವಿದೇಶದಲ್ಲೂ, ಸಖತ್ ಫ್ಯಾನ್ಸ್ ಇದ್ದಾರೆ. ಹೀಗಾಗಿ ದರ್ಶನ್‌ರ ಸಿನಿಮಾ ನೋಡಲು ಬೇರೆ ದೇಶದಲ್ಲೂ ಕಾಯ್ತಾರೆ. ಈಗ ಹೊರ ದೇಶದಲ್ಲೂ 'ಕಾಟೇರ' ಅಬ್ಬರ ತೋರಲು ಶುರು ಮಾಡಿದೆ. ಕಾಟೇರ ರಿಲೀಸ್ ಆಗಿ ಒಟ್ಟಾರೆ 2 ವಾರ ಕಳೆದು, 3ನೇ ವಾರಕ್ಕೆ ಕಾಲಿಟ್ಟಿದೆ. ಇದರ ಜೊತೆ ಗಲ್ಲಾ ಪೆಟ್ಟಿಗೆಯಲ್ಲಿ ಕೂಡ ಹೊಸ ಇತಿಹಾಸ ಬರೆದಿದೆ.
ಯಾವಾಗ ರಿಲೀಸ್ ಆಗಿತ್ತು ಕಾಟೇರ?
ಕರ್ನಾಟಕ ಜೊತೆ ಭಾರತದ ವಿವಿಧ ರಾಜ್ಯದಲ್ಲಿ ಡಿಸೆಂಬರ್ 29ಕ್ಕೆ ರಿಲೀಸ್ ಆಗಿದ್ದ, ಕನ್ನಡಿಗರ ಕಾಟೇರ ಈಗ ವಿದೇಶದಲ್ಲೂ ಅಬ್ಬರಿಸುತ್ತಿದೆ. ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶದಲ್ಲೂ ಅಬ್ಬರಿಸುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಆಸ್ಟ್ರೇಲಿಯಾ ಮತ್ತಿತರ ಕಡೆ ಕೂಡ ಕಾಟೇರ ಸಿನಿಮಾ ಇದೆ ರೀತಿ ಅಬ್ಬರದ ಪ್ರದರ್ಶನ ನೀಡ್ತಿದೆ. ಒಟ್ಟಿನಲ್ಲಿ ಕನ್ನಡಿಗರ ಈ ಸಿನಿಮಾ ಎಲ್ಲೆಲ್ಲೂ ಅಬ್ಬರ ತೋರುತ್ತಿದ್ದು, ಇನ್ನೇನು ಮತ್ತಷ್ಟು ದಾಖಲೆ ನಿರ್ಮಾಣ ಆಗೋದು ಗ್ಯಾರಂಟಿ.

ಮೊದಲನೇ ದಿನವೆ ಫ್ಯಾನ್ಸ್ ಫಿಕ್ಸ್!
ಕಾಟೇರ ರಿಲೀಸ್ ಆದ ದಿನವೇ ಫ್ಯಾನ್ಸ್ ಫಿಕ್ಸ್ ಆಗಿದ್ದರು ಕನ್ನಡ ಇಂಡಸ್ಟ್ರಿಗೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಕ್ಕಾ ಅಂತ. ಕೋಟಿ ಕೋಟಿ ದರ್ಶನ್ ಫ್ಯಾನ್ಸ್ ಇಟ್ಟಿದ್ದ ಎಲ್ಲ ನಿರೀಕ್ಷೆ ಹುಸಿಯಾಗಿಲ್ಲ. ಭರ್ಜರಿಯಾಗಿ ಗೆದ್ದು ಬೀಗಿದೆ ಕನ್ನಡಿಗರ ಕಾಟೇರ. ಈಗಾಗಲೇ ಕಾಟೇರ 150 ಕೋಟಿ ಕ್ಲಬ್ ಸೇರಿದ್ದು ಇದೀಗ 200 ಕೋಟಿ ರೂಪಾಯಿ ಕ್ಲಬ್ ಕಡೆಗೆ ಹೆಜ್ಜೆ ಹಾಕಿದೆ. ಇದೇ ರೀತಿ ಅಬ್ಬರ ತೋರಿಸಿದರೆ ಇನ್ನೇನು ಕೆಲವೇ ದಿನದಲ್ಲಿ, ಅದನ್ನೂ ಕೂಡ ಸಾಧಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಜೋರಾಗಿದೆ. ಅಲ್ಲದೆ ನಟ ದರ್ಶನ್ ಅವರ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ದೊಡ್ಡ ಗಿಫ್ಟ್ ಸಿಕ್ಕಂತಾಗಿದೆ.
ಒಟ್ನಲ್ಲಿ ಕನ್ನಡಿಗರ ಕಾಟೇರ ಮತ್ತಷ್ಟು ದಿನ ಇದೇ ರೀತಿ ಥಿಯೇಟರ್ ಅಂಗಳದಲ್ಲಿ ಅಬ್ಬರಿಸಿ, ಹಲವಾರು ದಾಖಲೆ ತನ್ನ ಹೆಸರಿಗೆ ಬರೆದುಕೊಳ್ಳುವ ಮುನ್ಸೂಚನೆ ಸಿಗುತ್ತಿದೆ. ಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಸಿನಿಮಾವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಹಾಗೇ ಕನ್ನಡ ಸಿನಿಮಾ ಪ್ರೇಕ್ಷಕರಿಗೂ ಸಿನಿಮಾ ತುಂಬಾ ಇಷ್ಟವಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಸಿನಿಮಾ ಕಾಟೇರ ತುಂಬಾ ನಿರೀಕ್ಷೆಗಳ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, 200 ಕೋಟಿ ರೂಪಾಯಿ ಕಡೆಗೆ ನುಗ್ಗುತ್ತಿದೆ. ಆದರೆ ಈ ವೇಳೆ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಅದ್ರಲ್ಲೂ ಈ ಘಟನೆ ಹಿಂದೆ ನಟ ದರ್ಶನ್ ಅವರ ಶತ್ರುಗಳ ಕೈವಾಡ ಇದೆ ಅನ್ನೋ ಸುದ್ದಿ ಮತ್ತಷ್ಟು ಆಕ್ರೋಶ ಮೊಳಗಿಸಿತ್ತು. ಇದೀಗ ಫ್ಯಾನ್ಸ್ ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದು. ಹಾಗೇ ತಮ್ಮ ನೆಚ್ಚಿನ ನಟನಿಗೆ ಸಪೋರ್ಟ್ ಮಾಡ್ತಿದ್ದಾರೆ.












Click it and Unblock the Notifications