ಕಾಟೇರ ‘ಡಿ-ಬಾಸ್’ ದರ್ಶನ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ!
ದರ್ಶನ್ ಅವರ ಅಭಿಮಾನಿಗಳು ಈಗ ಫುಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಇನ್ನೇನು ನಟ ದರ್ಶನ್ ಅವರ ಹುಟ್ಟುಹಬ್ಬ ಬಂದೇ ಬಿಡುತ್ತೆ. ಫೆಬ್ರವರಿ 16ಕ್ಕೆ ದರ್ಶನ್ ಅವರ ಬರ್ತ್ ಡೇ ಬೇರೆ ಇದೆ. ಹೀಗಿದ್ದಾಗಲೇ 'ಕಾಟೇರ' ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹಾಗಾದ್ರೆ ಖುಷಿಗೆ ಕಾರಣ ಏನು? ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಸಂಭ್ರಮಿಸಲು ಕಾರಣವಾದ ಸಂಗತಿ ಯಾವುದು? ಮುಂದೆ ಓದಿ.
'ಕಾಟೇರ' ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹಿಂದೆ ಎಂದೂ ಮಾಡಿರದ, ಮುಂದೆಯೂ ಮಾಡಲು ಕಷ್ಟವಾಗುವ ಸಾಧನೆ ಮಾಡಿದೆ. ಕನ್ನಡ ಸಿನಿಮಾ ರಂಗದಲ್ಲಿ ಮಾತ್ರ ಬಿಡುಗಡೆ ಆಗಿ, ಬರೋಬ್ಬರಿ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಸಿನಿಮಾ ಎನ್ನುವಂತಹ ಹೆಮ್ಮೆ ಕೂಡ ಕಾಟೇರ ಸಿನಿಮಾಗೆ ಇದೆ. ಹೀಗಿದ್ದಾಗಲೇ ಕಾಟೇರ ಮತ್ತೊಂದು ಹೊಸದಾದ ದಾಖಲೆ ಬರೆದಿದೆ. ಇಷ್ಟು ದಿನ ಬೆಳ್ಳಿತೆರೆ ಅಂದ್ರೆ ಥಿಯೇಟರ್ ಸ್ಕ್ರೀನ್ ಮೇಲೆ ಅಬ್ಬರಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಸಿನಿಮಾ, ಈಗ ಸ್ಮಾಲ್ ಸ್ಕ್ರೀನ್ ಅಂದ್ರೆ ಓಟಿಟಿ ಅಖಾಡದಲ್ಲೂ ಅಬ್ಬರಿಸಿದೆ.

200 ಕೋಟಿ ಜೊತೆ ಮತ್ತೊಂದು ಸಾಧನೆ!
ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್ ಹಣ ಮಾಡಿದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಚಿತ್ರ, 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಹಾಗೇ ಓಟಿಟಿಗೆ ಕೂಡ ಅದ್ಧೂರಿಯಾಗಿ ಎಂಟ್ರಿಯನ್ನು ಕೊಟ್ಟು, ಅಭಿಮಾನಿಗಳ ಮನಸ್ಸು ಗೆದ್ದಿದೆ.
ಕಾಟೇರ ಸಿನಿಮಾಗೆ ಕನ್ನಡಿಗರ ಜೈಕಾರ!
ಓಟಿಟಿ ಅಖಾಡದಲ್ಲಿ ಕೂಡ, ಸಿನಿಮಾ ನೋಡಿ ಕನ್ನಡಿಗರು ಒಳ್ಳೆಯ ರಿವ್ಯೂ ಕೊಡುತ್ತಿದ್ದಾರೆ. ಇನ್ನು ನಾವು ಈ ಸಿನಿಮಾ ಥಿಯೇಟರ್‌ನಲ್ಲೇ ನೋಡಬೇಕಿತ್ತು. ಮಿಸ್ ಮಾಡಿಕೊಂಡಿದ್ದೀವಿ ಎಂದು ಬೇಸರ ಕೂಡ ಹೊರಹಾಕುತ್ತಿದ್ದಾರೆ. ಹೀಗಿದ್ದಾಗ ಈಗಲಾದರೂ ಓಟಿಟಿ ಅಖಾಡದಲ್ಲಿ ಕಾಟೇರ ನೋಡಿದ್ದು ತುಂಬಾ ಖುಷಿಯಾಗುತ್ತಿದೆ ಎಂದು ಸಂಭ್ರಮಿಸಿದ್ದಾರೆ ಕನ್ನಡಿಗರು. ಈ ಮೂಲಕ ಕಾಟೇರ ಸಂಭ್ರಮ ಮತ್ತೊಮ್ಮೆ ಎಲ್ಲೆಲ್ಲೂ ಮೊಳಗಿದೆ. ಹಾಗೇ ದರ್ಶನ್ ಅವರ ಈ ಸಿನಿಮಾಗೆ ಕನ್ನಡಿಗರು ಜೈಕಾರ ಹಾಕಿದ್ದಾರೆ.
ಎಷ್ಟು ಕೋಟಿ ಗಳಿಸಿತ್ತು ಕಾಟೇರ?
ಕಾಟೇರ ತುಂಬಾ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಸಿನಿಮಾ ಗುರಿ ಮುಟ್ಟಿದೆ. 200 ಕೋಟಿ ರೂ. ಕ್ಲಬ್‌ಗೂ ಸೇರಿದೆ. 'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನವೂ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು.
6ನೇ ದಿನಕ್ಕೆ 9.78 ಕೋಟಿ ಗಳಿಸಿ, 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗೆ ಬಿಡುಗಡೆಯಾದ 2 ವಾರಕ್ಕೆಲ್ಲ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಬಳಿಕ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದೇ ವೇಳೆ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳು ಕೂಡ ಕಾಟೇರ ನೋಡಿ ಸಂಭ್ರಮವನ್ನ ವ್ಯಕ್ತಪಡಿಸುತ್ತಿದ್ದರು. ಇದೀಗ ಓಟಿಟಿಗೆ ಕೂಡ ಎಂಟ್ರಿಯನ್ನ ಕೊಟ್ಟಿರುವ ಈ ಸಿನಿಮಾ, ತನ್ನ ಖದರ್ ತೋರಿಸುತ್ತಿದೆ.
ಹೀಗೆ ದಾಖಲೆ ಬರೆಯುತ್ತಿರಲಿ...
ಕನ್ನಡಿಗರ ಸಿನಿಮಾಗಳು ಅಂದ್ರೆ ಒಂದು ಕಾಲದಲ್ಲಿ ಪರಭಾಷಿಗರು ಮೂಗು ಮುಯುತ್ತಿದ್ದರು. ಆದರೆ ಈಗ ಕನ್ನಡ ಸಿನಿಮಾಗಳ ಖದರ್ ಬದಲಾಗಿ ಹೋಗಿದೆ. ಅದರಲ್ಲೂ ಕಾಟೇರ ಅಬ್ಬರ ನೋಡಿ ಅಭಿಮಾನಿಗಳು ಫುಲ್ ಖುಷಿ ಖುಷಿಯಾಗಿದ್ದಾರೆ. ಓಟಿಟಿ ಅಖಾಡದಲ್ಲಿ ಕೂಡ ಈ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದು ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿಯಲಿ ಎನ್ನುವುದು ದರ್ಶನ್ ಅವರ ಫ್ಯಾನ್ಸ್ ಸೇರಿದಂತೆ ಕನ್ನಡಿಗರ ಆಶಯ.












Click it and Unblock the Notifications