200 ಕೋಟಿ ರೂ. ಗಳಿಸಿದ ‘ಕಾಟೇರ’ ಸಡನ್ ಸರ್ಪ್ರೈಸ್, ‘ಕಾಟೇರ-2’ ಪಕ್ಕಾ?
ಕನ್ನಡಿಗರ 'ಕಾಟೇರ' ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದ್ದು, ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಎಂಬ ಮಾತು ಇದೆ. ಆದರೆ 200 ಕೋಟಿ ರೂಪಾಯಿ ಗಳಿಸಿರುವ ಬಗ್ಗೆ ನಿರ್ಮಾಪಕರು ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಿದ್ದಾಗ, ನಿನ್ನೆ ದಿಢೀರ್ ವಿಶೇಷ ಸುದ್ದಿಗೋಷ್ಠಿ ಕರೆದಿದ್ದ 'ಕಾಟೇರ' ಟೀಂ ಲಕ್ಷ ಲಕ್ಷ ಬೆಲೆ ಬಾಳುವ ಕಾರು ಗಿಫ್ಟ್ ಆಗಿ ನೀಡಿತು. ಈ ವೇಳೆ 'ಕಾಟೇರ-2' ಕುರಿತು ಡಿ-ಬಾಸ್ ದರ್ಶನ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಕ್ರಿಸ್‌ಮಸ್ ರಜೆ ಸಂಭ್ರಮದಲ್ಲಿ 'ಕಾಟೇರ' ಹೊಸ ವರ್ಷಕ್ಕೆ ಉಡುಗೊರೆ ಎನ್ನುವಂತೆ ರಿಲೀಸ್ ಆಗಿತ್ತು. ಡಿಸೆಂಬರ್ 29ಕ್ಕೆ ರಿಲೀಸ್ ಆಗಿದ್ದ ಕಾಟೇರ ಹೊಸ ಹೊಸ ದಾಖಲೆ, ನಿರ್ಮಾಣ ಮಾಡಿತ್ತು. ನೋಡ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು, ತನ್ನ ತಾಕತ್ ತೋರಿಸಿತ್ತು ಕನ್ನಡಿಗರ ಈ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನು ಮೀರಿಸಿ ಕನ್ನಡಿಗರ 'ಕಾಟೇರ' ಫ್ಯಾನ್ಸ್‌ಗೆ ಹಬ್ಬವನ್ನೇ ಕೊಟ್ಟಿತ್ತು. ಹೀಗಿದ್ದಾಗಲೇ 'ಕಾಟೇರ-2' ಬರುತ್ತಾ? ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಸ್ವತಃ ನಟ ದರ್ಶನ್ ಅವರೇ, ಉತ್ತರ ನೀಡಿದ್ದಾರೆ.

'ಕಾಟೇರ-2' ಯಾವಾಗ ಬರುತ್ತೆ?
ಅಂದಹಾಗೆ ನಿನ್ನೆ ಸಂಜೆ ದಿಢೀರ್ 'ಕಾಟೇರ' ಸಿನಿಮಾ ತಂಡದಿಂದ ಪ್ರೆಸ್ ಮೀಟ್ ಕರೆದು, ಮಾಹಿತಿ ಹಂಚಿಕೊಳ್ಳಲಾಯಿತು. ಇದೇ ವೇಳೆ ಡಿ-ಬಾಸ್ ದರ್ಶನ್ ಅವರು ಕೂಡ ಇದ್ದರು. ಥಿಯೇಟರ್‌ನಲ್ಲಿ ಧೂಳೆಬ್ಬಿಸಿ, ಕೋಟಿ ಕೋಟಿ ರೂಪಾಯಿ ಬಾಚಿದ್ದ ಕಾಟೇರ ಸಿನಿಮಾಗಾಗಿ ಕೆಲಸ ಮಾಡಿದ್ದ ಕೆಲಸಗಾರರಿಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ದೊಡ್ಡ ಉಡುಗೊರೆ ನೀಡಿದ್ದಾರೆ. ಕಾಟೇರ ಸಿನಿಮಾಗೆ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ & ನಟ ಸೂರಜ್‌ಗೆ ಕಾರು ಉಡುಗೊರೆ ನೀಡುವ ಮೂಲಕ ಸರ್ಪ್ರೈಸ್ ಕೊಡಲಾಗಿದೆ. ಹಾಗೇ ಈ ಸಮಯದಲ್ಲೇ 'ಕಾಟೇರ-2' ಬರುತ್ತಾ? ಅನ್ನೋ ಬಗ್ಗೆ, ಉತ್ತರ ಕೊಟ್ಟಿದ್ದಾರೆ ನಟ ದರ್ಶನ್ ಅವರು. ಆ ಬಗ್ಗೆ ತಿಳಿಯಲು ಮುಂದೆ ಓದಿ.
ಸರ್ಪ್ರೈಸ್ ಪ್ರೆಸ್ ಮೀಟ್ ಕಾಟೇರ ಸಿನಿಮಾದ ಗೆಲುವಿಗಾಗಿ ಮೂರು ಕಾರುಗಳನ್ನು ಉಡುಗೊರೆಯಾಗಿ ಕೊಟ್ಟ @RocklineEnt ಸಂಭಾಷಣೆಗಾರ ಮಾಸ್ತಿ, ಬರಹಗಾರ ಜಡೇಶ್ ಸರ್, ಮತ್ತು ನಟ ಸುರೇಶ್ ಗೆ ಕಾರು ಉಡುಗೊರೆ ಕೊಟ್ಟ ಡಿ ಬಾಸ್ ತಂಡ 😍❤️#BossOfSandalwood #DevilTheHero#DBoss #Kaatera @TharunSudhir @dasadarshan pic.twitter.com/ikZwkr6xmC
— 𝐃 𝐁𝐎𝐒𝐒 ✯✮✬ (@_dboss_fan) May 2, 2024
'ಕಾಟೇರ ಅಲ್ಲಿಗೆ ಮುಗಿಯಿತು...'
ಅಷ್ಟಕ್ಕೂ ತರುಣ್ ಸುಧೀರ್ ನಿರ್ದೇಶನ ಮಾಡಿ, ರಾಕ್‌ಲೈನ್ ವೆಂಕಟೇಶ್ ಹಣ ಹಾಕಿದ್ದ ಈ ಸಿನಿಮಾ ಕನ್ನಡಿಗರ ಕೀರ್ತಿ ಪತಾಕೆಯನ್ನು ಮತ್ತೆ ಜಾಗತಿಕವಾಗಿ ಹಾರಿಸಿತ್ತು. ಅದ್ರಲ್ಲೂ ಈ ಕಾಲಘಟ್ಟದಲ್ಲೂ 'ಕಾಟೇರ' ಸಿನಿಮಾ ಭರ್ಜರಿಯಾಗಿ 100 ದಿನ ಪೂರೈಸಿ ದಾಖಲೆ ಬರೆದಿದೆ. ಈ ಸಮಯದಲ್ಲಿ, ವಿಶೇಷ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡುವಾಗ ನಟ ದರ್ಶನ್ ಅವರಿಗೆ ಪ್ರಶ್ನೆ ಒಂದು ಕೇಳಿಬಂತು. ಅದು ಏನೆಂದರೆ 'ಕಾಟೇರ-2' ಯಾವಾಗ? ಅಂತಾ. ಇದಕ್ಕೆಲ್ಲಾ ಉತ್ತರ ನೀಡಿದ ನಟ ಡಿ-ಬಾಸ್ ದರ್ಶನ್ ಅವರು, 'ನಾನು ಸೀಕ್ವೆಲ್ ಮಾಡಲ್ಲ. ಕಾಟೇರ ಅಲ್ಲಿಗೆ ಮುಗಿಯಿತು. ನನಗೆ ಸೀಕ್ವೆಲ್ ಇಷ್ಟ ಇಲ್ಲ. ಹಾಗೇ ಗೆದ್ದ ಎತ್ತಿನ ಬಾಲವನ್ನ ಹಿಡಿಯಬಾರದು. ಕಾಟೇರ ಕಥೆ ಇನ್ನೂ ಎಳೆಯಬಾರದು' ಎಂದಿದ್ದಾರೆ ನಟ ದರ್ಶನ್ ಅವರು.












Click it and Unblock the Notifications