Darshan fan: ನಟ ದರ್ಶನ್ ಮೇಲಿನ ಅತಿಯಾದ ಅಭಿಮಾನವೇ ರೇಣುಕಾಸ್ವಾಮಿ ಜೀವಕ್ಕೆ ಉರುಳಾಯಿತಾ!?
ಬೆಂಗಳೂರು, ಜೂನ್. 11: ಬೇರೆ ಸಿನಿಮಾ ಇಂಡಸ್ಟ್ರಿಗಳು ಚಿತ್ರಗಳ ಕಲೆಕ್ಷನ್ ವಿಷಯದಲ್ಲಿ, ಹೊಸ ಸಿನಿಮಾಗಳ ಬಿಡುಗಡೆ ಬಗ್ಗೆ ಸುದ್ದಿಯಾಗುತ್ತಿದ್ದರೇ, ಸ್ಯಾಂಡಲ್‌ವುಡ್ ಮಾತ್ರ ವಿವಾದ, ಕೊಲೆ, ಡೈವೊರ್ಸ್‌ಗಳಿಂದಲೇ ಸುದ್ದಿಯಾಗುತ್ತಿದೆ. ಸದ್ಯ ಇಡೀ ಕರುನಾಡನ್ನು ಶಾಕ್‌ಗೆ ಒಳಗಾಗಿಸಿರುವುದು ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಬಂಧಿತರಾಗಿರುವುದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೈಸೂರಿನ ರ‍್ಯಾಡಿಸನ್ ಹೋಟೆಲ್ನಲ್ಲಿ ಬಂಧಿಸಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಚಿತ್ರದುರ್ಗದವರು. ಅವರ ತಂದೆ ಕಾಶಿನಾಥ್ ಶಿವನಗೌಡ, ತಾಯಿ ರತ್ನಪ್ರಭಾ, ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಸಹನಾ ಈಗ ಗರ್ಭಿಣಿ. ಇಲ್ಲಿ ಇನ್ನೊಂದು ವಿಷಯವೆಂದರೆ ಆತ ದರ್ಶನ್ ಅಭಿಮಾನಿ.

ದರ್ಶನ್ ಅಭಿಮಾನಿಯಾಗಿದ್ದ ಮೃತ ರೇಣುಕಾಸ್ವಾಮಿ
ಹೌದು.... ಮೃತ ವ್ಯಕ್ತಿ ರೇಣುಕಾಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರಗತಿ ಗ್ರಾಮೀಣ ಬ್ಯಾಂಕ್ ಗಳಿರುವ ಅಪೊಲೋ ಮೆಡಿಕಲ್ನಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್ ಅಭಿಮಾನಿಯಾಗಿರುವ ಇವರು ಅವರ ದರ್ಶನ್ ವಿಜಯಲಕ್ಷ್ಮಿ ಸಂಸಾರದ ಬಗ್ಗೆ ಯೋಚಿಸುತ್ತಿದ್ದರಂತೆ.
ನಟಿ ಪವಿತ್ರಾ ಗೌಡ ಇವರ ಜೀವನದಲ್ಲಿ ಬಂದ ನಂತರ ತನ್ನ ನೆಚ್ಚಿನ ನಟನ ಜೀವನ ಹಾಳಗುತ್ತಿದ್ದೆ ಎಂದು ಭಾವಿಸಿದ್ದ ಇವರು ಪವಿತ್ರಾ ಗೌಡ ಮೇಲೆ ದ್ವೇಷ ಬೆಳಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರ ಬಗ್ಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಇಬ್ಬರನ್ನು ಬಿಟ್ಟು ಹೋಗುವಂತೆ ಮೆಸೇಜ್ ಮಾಡುತ್ತಿದ್ದರು ಎಂಬ ಮಾಹಿತಿಯಿದೆ.

ಮತ್ತೊಂದು ಕಡೆ ಮೃತ ರೇಣುಕಾಸ್ವಾಮಿ ಪವಿತ್ರ ಗೌಡ ಅವರ ಸಂಬಂಧಿಯು ಎಂಬ ಮಾಹಿತಿ ಕೂಡ ತಿಳಿದು ಬಂದಿದೆ. ಮದುವೆಯಾಗಿದ್ದ ಮೃತ ರೇಣುಕಸ್ವಾಮಿ ಪವಿತ್ರ ಗೌಡ ಅವರಿಗೆ ಅಶ್ಲೀಲ ಪೋಟೋ, ಮೆಸೇಜ್ ಕಳುಹಿಸುತ್ತಿದ್ದರು. ಇದಕ್ಕೆ ಕೋಪಗೊಂಡಿರುವ ನಟ ದರ್ಶನ್ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಜೂನ್ 8ರ ಶನಿವಾರ ಮನೆಯಿಂದ ಹೊರಟಿದ್ದ ರೇಣುಕಾಸ್ವಾಮಿ ವಾಪಸ್ ಬಂದಿಲ್ಲ. ಜೂನ್ 9 ರ ಭಾನುವಾರ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿದೆ. ಆ ಬಳಿಕ ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವುದಾಗಿ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.












Click it and Unblock the Notifications