ಚೈತ್ರಾ ಕುಂದಾಪುರ ತಂದೆ ಆರೋಪಕ್ಕೆ ಇದೇ ಕಾರಣ: ಚೈತ್ರಾ ತಾಯಿ ಹೇಳಿದ್ದೇನು ?!
Chaitra Kundapura: ಚೈತ್ರಾ ಕುಂದಾಪುರ ವಿವಾದವು ಹೊಸ ಸ್ವರೂಪ ಪಡೆದುಕೊಂಡಿದೆ. ಚೈತ್ರಾ ಕುಂದಾಪುರ ಅವರ ಬಗ್ಗೆ ಅವರ ತಂದೆ ಬಾಲಕೃಷ್ಣ್ ಅವರು ಮಾತನಾಡಿದ್ದು ಭಾರೀ ವೈರಲ್ ಆಗಿತ್ತು. ತಂದೆಯನ್ನೇ ನೋಡಿಕೊಳ್ಳದ ಮಗಳು ಅವಳು ಯಾವ ದೇಶಪ್ರೇಮಿ.. ಅವಳೊಬ್ಬಳು ಕಳ್ಳಿ, ಅವರ ಗಂಡನೂ ಕಳ್ಳ.. ಕಳ್ಳರಿಬ್ಬರು ಮದುವೆಯಾಗಿದ್ದಾರೆ ಎಂದು ಅವರ ತಂದೆ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಚೈತ್ರಾ ಕುಂದಾಪುರ ಅವರು ಅವರ ತಂದೆಯ ಬಗ್ಗೆ ಎರಡು ಕ್ವಾಟರ್ ಕೊಟ್ಟರೆ ನೀನೇ ದೇವರು ಅಂತಾರೆ ಅಂತ ಹೇಳಿದ್ದರು. ಇದೀಗ ಈ ವಿವಾದಗಳಿಗೆ ಕಾರಣವೇನು ಹಾಗೂ ಇದರ ಹಿಂದಿನ ಉದ್ದೇಶವೇನು ಎನ್ನುವ ವಿವರ ಇಲ್ಲಿದೆ.
ಚೈತ್ರಾ ಕುಂದಾಪುರ ಅವರ ತಂದೆ ಯಾಕೆ ಆ ರೀತಿ ಮಾತನಾಡಿದ್ದಾರೆ ಎನ್ನುವ ಬಗ್ಗೆ ಅವರ ತಾಯಿ ಇದೀಗ ಮಾತನಾಡಿದ್ದಾರೆ. ಅವರು (ಚೈತ್ರಾ ಕುಂದಾಪುರ ತಂದೆ) ಯಾವಾಗಲೂ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಎಂದಿಗೂ ಮನೆಯ ಬಗ್ಗೆ ಕಾಳಜಿ ಮಾಡಿದವರಲ್ಲ. ಅಲ್ಲದೇ ಮಕ್ಕಳನ್ನು ಓದಿಸಲೂ ಇಲ್ಲ. ಮಕ್ಕಳನ್ನು ಓದಿಸುವುದು ಯಾಕೆ ಅಂತ ಅವರು ಹೇಳಿದ್ದರು. ನಮ್ಮ ಹಿರಿಯ ಮಗಳು ಹೇಳಿಕೊಟ್ಟಂತೆ ಅವರು ಮಾತನಾಡುತ್ತಿದ್ದಾರೆ. ಆಸ್ತಿಗಾಗಿ ಹಿರಿಯ ಮಗಳು ತಂದೆಯ ಬಳಿ ಈ ರೀತಿ ಹೇಳಿಸಿದ್ದಾಳೆ. ಅವರಿಗೆ ಮಾತನಾಡಲು ಬರಲ್ಲ ಒಂದುಥರ ಮಾನಸಿಕ. ಆಸ್ತಿ ವಿಚಾರವಾಗಿ ಸಹಿ ಹಾಕದೆ ಇರುವುದಕ್ಕೆ ಹಿರಿಯ ಮಗಳು ಈ ರೀತಿ ಮಾತನಾಡಿಸಿದ್ದಾಳೆ ಅಂತ ಚೈತ್ರಾ ಕುಂದಾಪುರ ಅವರ ತಾಯಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಅವರು ಯಾವುದೇ ಹೆಣ್ಣು ಮಕ್ಕಳಿಗೂ ಓದಿಸುವುದಾಗಲಿ, ಅವರ ಮದುವೆ ಮಾಡಿಸುವುದನ್ನಾಗಲಿ ಅವರು ಮಾಡಲಿಲ್ಲ. ಆ ಕಾಲದಲ್ಲಿ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿದ್ದರು. ಈಗ ಅವರು ಕಟ್ಟಿಸಿದ್ದ ಮನೆ ಬಿದ್ದು ಹೋಗಿದೆ. ಅದನ್ನು ಬಿಟ್ಟು ಅವರು ನಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಲಿಲ್ಲ. ರಾತ್ರೋರಾತ್ರಿ ಎಲ್ಲೆಂದರಲ್ಲಿಗೆ ಹೋಗುತ್ತಾರೆ. ನಮ್ಮ ಜಾಗ ಬೇಕು ಅಂತ ದೊಡ್ಡ ಮಗಳು ಕೇಳುತ್ತಿದ್ದಾಳೆ. ಇದಕ್ಕೆಲ್ಲವೂ ದೊಡ್ಡ ಮಗಳೇ ಕಾರಣ. ದೊಡ್ಡ ಮಗಳಿಗೆ ಚೈತ್ರಾ ಕುಂದಾಪುರನೇ 25 ಲಕ್ಷ ರೂಪಾಯಿ ಲೋನ್ ಮಾಡಿಸಿಕೊಟ್ಟಿದ್ದಾಳೆ ಅಂತಲೂ ಇನ್ಸಟಾಗ್ರಾಮ್ ಸ್ಟೋರಿಯಲ್ಲಿ ಅವರ ತಾಯಿ ಹೇಳಿದ್ದಾರೆ.
ಎಲ್ಲೋ ಒಂದು ಕಡೆ ಬಸ್ಸು ಹತ್ತಿ ಕುಳಿತುಕೊಂಡು ಬಿಟ್ಟಿದ್ದರು. ಅವರನ್ನು ಹುಡುಗರು ಕರೆದುಕೊಂಡು ಬಂದಿದ್ದರು. ಇನ್ನ ಚೈತ್ರ ಅವರ ಪತಿ ನಮ್ಮ ಮನೆಯಲ್ಲಿ 12 ವರ್ಷದಿಂದ ಎಲ್ಲಾ ಇರಲಿಲ್ಲ. ಅವರ ಪರಿಚಯವಾಗಿದ್ದೇ ಈಚೆಗೆ ಎರಡು ಮೂರು ವರ್ಷಗಳಿಂದಷ್ಟೇ. ಅವರು ನಮ್ಮ ಮನೆಗೆ ಬಂದು ಇಲ್ಲಿಯ ವರೆಗೆ ನೀರು ಸಹ ಕುಡಿದಿರಲಿಲ್ಲ. ನಾನೇ ಮೂರು ಜನ ಹೆಣ್ಣು ಮಕ್ಕಳನ್ನು ಬೆಳೆಸಿದ್ದೇನೆ. ಏನಾದರೂ ಹೇಳಿದರೆ, ಕೇಳಿದರೆ ಹೊಡೆಯುವುದಕ್ಕೆ ಬರುತ್ತಾರೆ. ತುಂಬಾ ಜಬರ್ದಸ್ತ್ ಮಾಡ್ತಾರೆ. ಅವರು ಮಾಡುವುದನ್ನೆಲ್ಲವೂ ನೋಡಿ ನೋಡಿ ನಮಗೂ ಸಾಕಾಗಿದೆ ಹೋಗಿದೆ. ಅದಕ್ಕೆ ಅವರ ವಿಷಯ ಬಿಟ್ಟಿದ್ದೇವೆ ಅಂತ ಹೇಳಿದ್ದಾರೆ.
ಸತ್ಯ ಯಾರಿಗೂ ಬೇಕಿಲ್ಲ.. ಸುಳ್ಳು ಮಾತ್ರ ಮೆರೆದಾಡುತ್ತದೆ..ನಾನು, ನನ್ನ ತಾಯಿ, ತಂಗಿ ಇಷ್ಟು ವರ್ಷ ಅನುಭವಿಸಿದ ನೋವು ನಮಗಷ್ಟೇ ಗೊತ್ತು.. ಇದರ ಹಿಂದೆ ನಿಂತು ಹೀಗೆ ಅಪಪ್ರಚಾರ ಮಾಡಿಸುತ್ತಿರುವವರನ್ನು ಆ ತಾಯಿ ಭಗವತಿಯೇ ನೋಡಿಕೊಳ್ಳುತ್ತಾಳೆ ಅಂತ ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ.












Click it and Unblock the Notifications