Bigg Boss: ಚೈತ್ರಾ ಹೋರಾಟಗಾರ್ತಿಯಲ್ಲಿ, ಮಾರಾಟಗಾರ್ತಿ- ಲಾಯರ್ ಜಗದೀಶ್
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಲಾಯರ್ ಜಗದೀಶ್ ಕೆಲ ಸ್ಪರ್ಧಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇರುವ ಕೆಲ ಸ್ಪರ್ಧಿಗಳು ಫೇಕ್ ಅವರ ನಿಜವಾದ ಮುಖವನ್ನು ನಾನು ಇನ್ನಷ್ಟು ಬಯಲು ಮಾಡಬೇಕಿದೆ. ಅದನ್ನು ನಾನು ಮಾಡುತ್ತೇನೆ ಎಂದು ಜಗದೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸಂದರ್ಶನದ ವೇಳೆ ಜಗದೀಶ್ ಚೈತ್ರಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಚೈತ್ರಾ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದೇನು? ದೊಡ್ಮನೆಯ ಇನ್ನಿತರ ಸ್ಪರ್ಧಿಗಳ ಬಗ್ಗೆ ಜಗದೀಶ್ ಹೇಳುವುದೇನು? ತಿಳಿಯೋಣ. ಬಿಗ್‌ಬಾಸ್ ಮನೆಯಲ್ಲಿ ನಿಮಗೆ ತುಂಬಾ ಹತ್ತಿರವಾದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಜಗದೀಶ್ ಐಶು ಎಂದು ಹೇಳಿದ್ದಾರೆ. ಐಶು.. ನನಗೆ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಹತ್ತಿರವಾದ ವ್ಯಕ್ತಿ.. ಅವಳು ದಿನಾ ಡ್ಯಾನ್ಸ್ ಮಾಡ್ತಾಯಿದ್ಲು ನನ್ ಜೊತೆ. ಐಶು ಕಂಡರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ ಜಗದೀಶ್.

ಈ ಟೈಗರ್ ಎದ್ರಾಕ್ಕೊಂಡ್ರೆ ಯಾರು ಉಳಿಯಲ್ಲ-ಜಗದೀಶ್
'17 ಜನ ನಿನ್ನ ವಿರುದ್ಧ ನಿಂತಾಗ ನನಗೆ ಏನೂ ಕೂಡ ಅನಿಸಿಲ್ಲ. ಯಾಕೆಂದರೆ ನಾನು ಹೊರಗಡೆ ಇದಕ್ಕಿಂತ ದೊಡ್ಡ ಸಂದರ್ಭಗಳನ್ನು ಎದುರಿಸಿದ್ದೇನೆ. ನಾನು ಎಲ್ಲೂ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ತಾಳ್ಮೆ ಕಳೆದುಕೊಳ್ಳಬೇಕು ಅಂದಾಗಲೆಲ್ಲಾ ಬಿಗ್‌ಬಾಸ್ ಹಾಗೂ ಸುದೀಪ್ ನೆನಪಾಗುತ್ತಿದ್ದರು. ನಾನು ಎಲ್ಲರ ಮುಖವಾಡವನ್ನು ತೋರಿಸಬೇಕು ಅನ್ನೋದು ಇತ್ತು ತೋರಿಸಿದೆ'.
'ಕೆಲವರಿಗೆ ಹೊಡಿಬೇಕು ಅಂತ ನನಗೂ ಅನಿಸುತ್ತಿತ್ತು. ಆದರೆ ಅದನ್ನ ನಾನು ಮಾಡಿಲ್ಲ. ನಾನು ವಿಕ್ರಂ ಹಾಗೂ ರಂಜಿತ್‌ಗೆ ಹೊಡೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ವಿಕ್ರಂ ಜಿಮ್ ಅಲ್ಲಿ ಇರೋ ಇಕ್ಯೂಮೆಂಟ್ಸ್ ಅನ್ನು ಎತ್ತಿಕೊಂಡು ಹೋಗಿಬಿಟ್ಟಿದ್ದ. ಯಾಕೆಂದರೆ ಅವನು ಹೆಣ್ಮಕ್ಕಳು ಇದ್ದಾಗ ಮಾತ್ರ ತಾನೊಬ್ಬ ವೀರ ಶೂರ ಅಂತ ಕಾಣಿಸಿಕೊಳ್ಳುತ್ತಾನೆ. ಅದೇ ನಾನು ಒಬ್ಬನೇ ಇದ್ದಾಗ ರಂಜಿತ್‌ಗೆ ವಿಕ್ರಂ, ವಿಕ್ರಂಗೆ ರಂಜಿತ್ ಇರಲೇ ಬೇಕು. ಇಬ್ಬರೂ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರಲ್ಲ. ಅವರಿಬ್ಬರಿಗೆ ಹೊಡೆಯಬೇಕು ಅಂತ ಪ್ಲ್ಯಾನ್ ಮಾಡಿದ್ದೆ ಬಟ್ ಮಿಸ್ ಆಯ್ತು ನಂಗೆ. ಅವರು ಓಡಿ ಹೋಗಿಬಿಟ್ರು. ಈ ಟೈಗರ್ ಎದ್ರಾಕ್ಕೊಂಡ್ರೆ ಯಾರು ಉಳಿಯಲ್ಲ' ಎಂದಿದ್ದಾರೆ.

ಬೈಯೋದ್ರಲ್ಲಿ ಸಮಾನತೆ ಬೇಕು...
ಬೈಯೋದ್ರಲ್ಲಿ ಸಮಾನತೆ ಬೇಕು ಅನ್ನೋದು ಚರ್ಚೆ ಆಗ್ತಾಯಿದೆ ಇದರ ಬಗ್ಗೆ ಏನು ಹೇಳ್ತಾರಾ? ಎಂದು ಕೇಳಿದರೆ ಜಗದೀಶ್ ಅವರು, 'ಭವ್ಯ ಬಂದು ಪುಷ್ ಮಾಡ್ತಾಳೆ. ಏನ್ ಬೇಕಾದ್ರು ಮಾಡ್ತೀನಿ ಅಂತಾಳೆ. ಆಕೆ ಇನ್ನೂ ಕೂಡ ಟೈಗರ್ ಅನ್ನ ನೋಡಿಲ್ಲ. ಸಿಎಂ ಅವರೇ ಗಂಡಸರಿಗೆ ಒಂದು ಕಮಿಷನ್ ಅನ್ನು ಕ್ರಿಯೇಟ್ ಮಾಡಿ. ಹೆಣ್ಮಕ್ಕಳು ಅಟ್ಯಾಕ್ ಮಾಡಿದರೆ ಕೇಳೋರೇ ಇಲ್ಲ. ಹೆಣ್ಮಕ್ಕಲು ಅಬಲೆ ಅಂತಾರೆ.. ಸಂಘ ಸಂಸ್ಥೆ ಕಟ್ಟಿಕೊಳ್ತಾರೆ. ನಾವೇನು ಮಾಡೋದು. ಗಂಡಸರಿಗೆ ಹೋಗೋ ಬಾರೋ ಅನ್ನುವಾಗ ಹೆಂಗಸರಿಗೆ ಬಾರೇ ಹೋಗೇ ಅನ್ಬಾರ್ದಾ? ಅವರು ಅಂದ್ಮೇಲೆ ನಾವು ಅಂತೀವಿ' ಎಂದರು.
ತುಕಾಲಿ ಸಂತೋಷ್ ಮಾನಸಾನಾ ನೋಡ್ಕೊಳಿ ಸ್ವಲ್ಪ..- ಜಗದೀಶ್
ಮಾನಸಾ ತುಕಾಲಿ ನಿಮ್ಮನ್ನು ಜಾಸ್ತಿ ಟ್ರಿಗರ್ ಮಾಡಿದ್ರಾ? ಎಂದು ಕೇಳಿದ್ದಕ್ಕೆ ಜಗದೀಶ್.. ' ಹೌದು.. ತುಕಾಲಿ ಮಾನಸಾನಾ ಸರಿಯಾಗಿ ಇಟ್ಕೋಬೇಕು. ಹೆಣ್ಮಕ್ಕಳು ಹೊರಗಡೆ ಹೋದಾಗ ಹೇಗೆ ಮಾತನಾಡಬೇಕು ಅನ್ನೋದು ಕಲಿಸಿಕೊಡು ತುಕಾಲಿ. ಸರಿಯಾಗಿ ಇಟ್ಕೋ ತುಕಾಲಿ ಮಾನಸಾನಾ... 'ಗಾಣ್ಚಾಲಿ' ಅಂತಾಳೆ. ಹೆಣ್ಮಕ್ಕಳಿಗೆ ಎಷ್ಟು ಮರಿಯಾದೆ ಇದಿಯೋ ಅಷ್ಟೇ ಮರಿಯಾದೆ ಗಂಡಸರಿಗೂ ಇದೆ. ಹೆಣ್ಮಕ್ಕಳನ್ನು ರಕ್ಷಣೆ ಮಾಡುವುದರಲ್ಲಿ ನಾವು ಎತ್ತಿದ ಕೈ. ಆದರೆ ಅಂದರೆ ನಾವು ಅಂತಿವಿ ಅಷ್ಟೇ' ಎಮದು ತುಕಾಲಿ ಸಂತೋಷ್‌ಗೆ ಕಿವಿ ಮಾತು ಹೇಳಿದ್ದಾರೆ.
ಚೈತ್ರಾ ಹೋರಾಟಗಾರ್ತಿಯಲ್ಲಿ, ಮಾರಾಟಗಾರ್ತಿ- ಲಾಯರ್ ಜಗದೀಶ್
ಚೈತ್ರಾ ಲೈಸನ್ಸ್ ಇಲ್ದೆ ಇರೋ ಲಾಯರ್ ಅಂದ್ರು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದರೆ ಲಾಯರ್ ಜಗದೀಶ್ ಚೈತ್ರಾ ಬಗ್ಗೆ ಆಕ್ರೋಶಗೊಂಡರು. 'ಆಕೆಯನ್ನು ಹೋರಾಟಗಾರ್ತಿ ಅಂತಾರೆ. ಆದರೆ ಆಕೆ ಹೋರಾಟಗಾರ್ತಿ ಅಲ್ಲ. ಮಾರಾಟಗಾರ್ತಿ. ಆಕೆ ಮೇಲೆ ಐದು ಕೋಟಿ ಲಂಚದ ಆರೋಪ ಇದೆ. ಈತರ ನಾವು ಮಾಡಿಲ್ಲ. ಆಕೆ ಮೋಸ ಮಾಡಿದ ಹಣವನ್ನು ಪೊಲೀಸರು ರಿಕವರಿ ಕೂಡ ಮಾಡಿದ್ದಾರೆ. ಯಾವ ನೈತಿಕತೆ ಇದೆ ಅಂತ ನನ್ನ ಬಗ್ಗೆ ಮಾತನಾಡುತ್ತಾಳೆ ಚೈತ್ರಾ. ಜೊತೆಗೆ ಆಕೆಗೆ ಮಾತನಾಡುವ ನೈತಿಕತೆನೇ ಇಲ್ಲ' ಎಂದು ಕಿಡಿ ಕಾರಿದರು.












Click it and Unblock the Notifications