ಹೊಸ ವರ್ಷಕ್ಕೆ ಚೈತ್ರಾ ಕುಂದಾಪುರ, ರಜತ್‌ಗೆ ಬಂಪರ್‌ ಗಿಫ್ಟ್‌

ಬಿಗ್‌ ಬಾಸ್‌ ಕನ್ನಡ ಸೀಜನ್ 11ರ ನಿನ್ನೆಯ ಸಂಚಿಕೆಯಲ್ಲಿ ಬಿಗ್‌ ಬಾಸ್‌ನ ಇಬ್ಬರು ಸ್ಪರ್ಧಿಗಳು ಕಿಚ್ಚ ಸುದೀಪ್‌ ಅವರಿಂದ ವಿಶೇಷ ಉಡುಗೊರೆಯೊಂದನ್ನು ಪಡೆದಿದ್ದಾರೆ. ಕಿಚ್ಚ ಸುದೀಪ್‌ ಈ ಹಿಂದೆ ಹೇಳಿದ ಹಾಗೆ ಗಿಫ್ಟ್‌ ಏನೇ ಇರಲಿ ಅದರ ಮೌಲ್ಯವನ್ನು ಹೆಚ್ಚಿಸುವ ಅಥವಾ ಅದರ ಮೌಲ್ಯ ಅರಿತವರಿಗಷ್ಟೇ ನಾನು ಉಡುಗೊರೆಗಳನ್ನು ನೀಡುವುದು ಅಂದಿದ್ದರು. ಇದೀಗ ಇಬ್ಬರು ಸ್ಪರ್ಧಿಗಳು ಕಿಚ್ಚ ಸುದೀಪ್‌ ಅವರಿಂದ ಉಡುಗೊರೆ ಪಡೆದು ಫುಲ್ ಖುಷಿಯಾಗಿದ್ದಾರೆ.

ಬಿಗ್‌ ಬಾಸ್‌ನಲ್ಲಿ 2024ರ ಕೊನೆಗೆ ವಿಕೇಂಡ್‌ ಸಂಚಿಕೆಯಾದ ಕಾರಣ ನಿನ್ನೆಯೇ ಹೊಸ ವರ್ಷ 2025ರ ಪ್ರಯುಕ್ತ ಕೆಲವು ಚಟುವಟಿಕೆಗಳನ್ನು ಕಿಚ್ಚ ಸುದೀಪ್‌ ಮಾಡಿಸಿದ್ದಾರೆ. ಅದರಂತೆ ತಮ್ಮ ಇಷ್ಟದ ಒಂದು ವಸ್ತುವನ್ನು ಮನೆಯೊಳಗಿರುವ ಇತರ ಸ್ಪರ್ಧಿಗಳಿಗೆ 2025ರ ಶುಭಾಶಯದೊಂದಿಗೆ ಉಡುಗೊರೆಯಾಗಿ ನೀಡಬೇಕು. ಕಿಚ್ಚ ಸುದೀಪ್ ಈ ಚಟುವಟಿಕೆ ಹೇಳುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಉಡುಗೊರೆಯೊಂದಿಗೆ ಸುದೀಪ್‌ ಮುಂದೆ ಹಾಜರಾದರು.

Chaithra kundapura And Rajath Bujji Received Special Gift From Kiccha Sudeep

ಮೊದಲು ರಜತ್‌, ಧನರಾಜ್‌ ಅವರಿಗೆ ಉಡುಗೊರೆ ನೀಡಿದರು. ಬಳಿಕ ಭವ್ಯಾ ಗೌಡ-ತ್ರಿವಿಕ್ರಮ್‌ಗೆ, ತ್ರಿವಿಕ್ರಮ್-ಭವ್ಯಾ ಗೌಡಗೆ ವಿಶೇಷ ಉಡುಗೊರೆಗಳನ್ನು ನೀಡಿದರು. ಇನ್ನು ಐಶ್ವರ್ಯಾ-ಮೋಕ್ಷಿತಾಗೆ, ಮೋಕ್ಷಿತಾ-ಐಶ್ವರ್ಯಾಗೆ, ಉಗ್ರಂ ಮಂಜು-ಗೌತಮಿಗೆ, ಗೌತಮಿ-ಉಗ್ರಂ ಮಂಜುಗೆ, ಧನರಾಜ್‌-ಹನುಮಂತನಿಗೆ, ಹನುಮಂತ-ಧನರಾಜ್‌ ಉಡುಗೊರೆಯನ್ನು ವಿನಿಮಯ ಮಾಡಿಕೊಂಡರು. ಈ ಎಲ್ಲಾ ನಡುವೆ ಚೈತ್ರಾ ಕುಂದಾಪುರ-ಐಶ್ವರ್ಯಾಗೆ ನೀಡಿದ ಉಡುಗೊರೆ ವಿಶೇಷವಾಗಿದ್ದು, ಎಲ್ಲರನ್ನೂ ಭಾವುಕರನ್ನಾಗಿಸಿತು.

ಚೈತ್ರಾ ಕುಂದಾಪುರ ಐಶ್ವರ್ಯಾಗೆ ಸೀರೆಯ ಪಿನ್‌ ಕೊಟ್ಟು ನಿನ್ನ ತಾಯಾಗಲು ಸಾಧ್ಯವಿಲ್ಲ ಆದರೆ ಅಕ್ಕನಾಗಿ ಇರುತ್ತೇನೆ ಎಂದು 2025ರ ಶುಭಾಶಯ ತಿಳಿಸಿ ಈ ವಿಶೇಷ ಉಡುಗೊರೆ ನೀಡಿದರು. ಇಲ್ಲಿಗೆ ಈ ಚಟುವಟಿಕೆ ಮುಗಿಯಿತು. ಆದರೆ ಚಟುವಟಿಕೆಯಲ್ಲಿ ರಜತ್‌ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಯಾವುದೇ ಉಡುಗೊರೆ ಸಿಗಲಿಲ್ಲ. ಇದನ್ನು ಅರಿತ ಕಿಚ್ಚ ಸುದೀಪ್‌ ತಾವೇ ಉಡುಗೊರೆ ನೀಡುವುದಾಗಿ ಘೋಷಿಸಿದರು. ಆ ಕ್ಷಣದಲ್ಲೇ ತಮ್ಮ ಕಿವಿಯಲ್ಲಿದ್ದ ಬೆಲೆ ಬಾಳುವ ಕಿವಿಯೋಲೆಗಳನ್ನು ಇಬ್ಬರಿಗೂ ಉಡುಗೊರೆಯಾಗಿ ಕಳುಹಿಸಿಕೊಟ್ಟರು.

Chaithra kundapura And Rajath Bujji Received Special Gift From Kiccha Sudeep

ಕಿಚ್ಚ ಸುದೀಪ್‌ ಅವರಿಂದ ವಿಶೇಷ ಉಡುಗೊರೆ ಪಡೆದ ರಜತ್‌ ಹಾಗೂ ಚೈತ್ರಾ ಕುಂದಾಪುರ ಫುಲ್‌ ಖುಷಿಯಾದರು. ಬಹುಶಃ ಆ ಮನೆಯೊಳಗೆ ಯಾರಿಂದಲಾದರೂ ಉಡುಗೊರೆ ಸಿಕ್ಕಿದ್ದರೆ ಅವರಿಗೆ ಅಷ್ಟು ಖುಷಿಯಾಗುತ್ತರಲಿಲ್ಲವೇನೋ ಅಷ್ಟರ ಮಟ್ಟಿಗೆ ರಜತ್‌ ಹಾಗೂ ಚೈತ್ರಾ ಆ ಕಿವಿಯೋಲೆಗಳನ್ನು ನೋಡಿ ಸಂಭ್ರಮಿಸಿದರು. ನಿನ್ನೆಯ ಮಟ್ಟಿಗೆ ಅವರಿಬ್ಬರೇ ಅದೃಷ್ವವಂತರು ಎಂದು ಇತರ ಸ್ಪರ್ಧಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+